ಹೊಸಕೋಟೆ: ನಗರದಲ್ಲಿ ಗುರುವಾರ ಅವಿಮುಕ್ತೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಿತು.ದೇವಾಲಯದಲ್ಲಿ ವಿಶೇಷ ಪೂಜೆ ನಡೆದ
ನಂತರ ಹಳೆ ಬಸ್ ಸ್ಟಾಂಡ್ ಬಳಿ ನಿರ್ಮಿಸಿರುವ ರಥದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಕರಗದ ಪೂಜಾರಿಗಳು, ವೀರಕುಮಾರರು
ರಥಕ್ಕೆ ಪ್ರದಕ್ಷಿಣೆ ಹಾಕಿದ ನಂತರ ರಥಕ್ಕೆ ಚಾಲನೆ ನೀಡಲಾಯಿತು.
ಗಾಣಿಗರಪೇಟೆ, ಬೆಸ್ತರಪೇಟೆ, ಕುರುಬರಪೇಟೆ, ಮೇಲಿನಪೇಟೆ, ಜಯಚಾಮರಾಜೇಂದ್ರ ವೃತ್ತ, ಕೆ.ಆರ್.ರಸ್ತೆಯಲ್ಲಿ ಸಂಚರಿಸಿದ ರಥವು ಸ್ವಸ್ಥಾನಕ್ಕೆ ಸಂಜೆ ಸುಮಾರು 6 ಗಂಟೆಗೆ ತಲುಪಿತು. ರಥದ ಮುಂಭಾಗ ಡೊಳ್ಳು ಕುಣಿತ, ವೀರಗಾಸೆ ಕುಣಿತ, ನಂದಿಧ್ವಜ ಕುಣಿತ, ಕೇರಳದ ಚಂಡಿ ಮದ್ದಳೆಯಂತಹ ಹಲವಾರು ಸಾಂಸ್ಕøತಿಕ ಕಲಾತಂಡಗಳ ಪ್ರದರ್ಶನ ಸಹ ಏರ್ಪಡಿಸಲಾಗಿತ್ತು.
ಆಕರ್ಷಣೀಯ ವಿದ್ಯುತ್ ದೀಪಾಲಂಕಾರ: ಬ್ರಹ್ಮ ರಥೋತ್ಸವದ ಅಂಗವಾಗಿ ನಗರದ ಕೆಇಬಿ ವೃತ್ತದಿಂದಬಸ್ ಸ್ಟಾಂಡ್ವರಿವಗೂ ಹಾಗೂ ಪ್ರಮುಖ ರಸ್ತೆಗಳಲ್ಲಿ
ಪ್ರಥಮ ಬಾರಿಗೆ ಮೈಸೂರು ದಸರಾ ಸಂದರ್ಭದಲ್ಲಿ ಮಾಡುವಂತಹ ವಿದ್ಯುತ್ ದೀಪಾಲಂಕಾರ ದೊಂದಿಗೆ ರಥಕ್ಕೆ ಮಾಡಿದ್ದ ವಿಶೇಷ ಅಲಂಕಾರ ಸಹ ಆಕರ್ಷಣೀಯವಾಗಿತ್ತು. ಈ ಬಗ್ಗೆ ಸಾರ್ವಜನಿಕರು ಸಹ ಮೆಚ್ಚುಗೆ ವ್ಯಕ್ತಪಡಿಸಿದರು.
ಲೋಕಸಭಾ ಸದಸ್ಯ ಬಿ.ಎನ್.ಬಚ್ಚೇಗೌಡ, ಶಾಸಕ ಶರತ್ ಬಚ್ಚೇಗೌಡ, ತಹಶೀಲ್ದಾರ್ ವಿಜಯಕುಮಾರ್, ರಥೋತ್ಸವ ಸಮಿತಿಯ ಸಂಚಾಲಕ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎನ್.ಕೇಶವಮೂರ್ತಿ, ರಥೋತ್ಸವ ಸಮಿತಿಯ ಪದಾಧಿಕಾರಿಗಳು, ಇನ್ನಿತರರು ಭಾಗವಹಿಸಿದ್ದರು.ರಥೋತ್ಸವವನ್ನು ಯಶಸ್ವಿಯಾಗಿ ನೆರವೇರಿಸಲು ಸಹಕರಿಸಿದ ದಾನಿಗಳು, ಭಕ್ತಾಧಿಗಳು ಹಾಗೂ ಸಾರ್ವಜನಿಕರನ್ನು ರಥೋತ್ಸವ ಸಮಿತಿಯ ಪದಾಧಿಕಾರಿಗಳು, ಸಂಘಸಂಸ್ಥೆಗಳ ಸ್ವಯಂಸೇವಕರು, ಸರಕಾರಿ ಇಲಾಖಾಧಿಕಾರಿಗಳು ಹಾಗೂ ವಿಶೇಷವಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಬಂದೋಬಸ್ತ್ ಒದಗಿಸಿದ್ದ ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರನ್ನು ಸಂಚಾಲಕ ಎನ್.ಕೇಶವಮೂರ್ತಿ ಅಭಿನಂದಿಸಿದ್ದಾರೆ.