This is the title of the web page
This is the title of the web page

ನೀತಿ ಸಂಹಿತೆ ಉಲ್ಲಂಘನೆ, ಮಧ್ಯರಾತ್ರಿ 12 ಗಂಟೆಯಲ್ಲಿ ಕಾಮಗಾರಿ, ಸಾರ್ವಜನಿಕ ಬಸ್ ಸ್ಟ್ಯಾಂಡ್ ಉದ್ಭವ: ಸಾರ್ವಜನಿಕರಿಂದ ಆಕ್ರೋಶ

ಬೆಂಗಳೂರು: ನೆನ್ನೆ ದಿನಾಂಕ 29-03-2023 ರ ಮಧ್ಯಾಹ್ನ 11.30 ಸಮಯಕ್ಕೆ ಚುನಾವಣಾ ಆಯೋಗವು ಕರ್ನಾಟಕ ರಾಜ್ಯ 2023 ವಿಧಾನ ಸಭಾ ಚುನಾವಣೆಯ ನೀತಿ ಸಂಹಿತೆಯನ್ನು ಜಾರಿಗೊಳಿಸಿದ ಆದೇಶವನ್ನು ಹೊರಡಿಸಿತು.

ಇದರ ಬೆನ್ನಲ್ಲೇ, ಅದೇ ದಿನ ರಾತ್ರಿ ಸಮಯದಲ್ಲಿ ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಅವರ ಕ್ಷೇತ್ರದಲ್ಲಿನ ಸಾರ್ವಜನಿಕ ಬಸ್ ನಿಲ್ದಾಣದ ಕಾಮಗಾರಿಯು ನಿನ್ನೆ ದಿನ ದಿನಾಂಕ 29-03-2023 ರಂದು ಮಧ್ಯ ರಾತ್ರಿ 12ಗಂಟೆಯಲ್ಲಿ ರಾತ್ರೋರಾತ್ರಿನಡೆದಿರುವುದು ಸಾರ್ವಜನಿಕ ವಲಯದಲ್ಲಿ ಬಹಳ ಸ್ಥಳೀಯವಾಗಿ , ಹಲವು ಟೀಕೆ, ಚರ್ಚೆಗೆ ಹಾಗೂ ಅನುಮಾನಕ್ಕೆ ಒಳಗಾಗಿದೆ, ಸಿಂಗಸಂದ್ರವಾರ್ಡಿನ ಕೆಂಪೇಗೌಡರ ವೃತ್ತದಲ್ಲಿ ಹಾಗೂ ನಾಗನಾಥಪುರದ ವೃತ್ತದಲ್ಲಿ ಮಧ್ಯರಾತ್ರಿ ಬಸ್ ನಿಲ್ದಾಣ ಉದ್ಭವಿಸಿದೆ ಇದೇನಿದು ಆಶ್ಚರ್ಯ ಇದರ ಬಗ್ಗೆ ಹೊಸರೋಡ್ ನಾಗರೀಕರು ಮತ್ತು ಸಾರ್ವಜನಿಕರಲ್ಲಿ ಬಹಳ ಕುತೂಹಲ ಮತ್ತು ದಿಗ್ಭ್ರಮೆಯನ್ನು ಮೂಡಿಸಿದೆ…ಇದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಯು ನಾಗರೀಕರಲ್ಲಿ ಮೂಡಿದೆ.

ಚುನಾವಣಾ ಅಧಿಕಾರಿಗಳಿಗೆ ದೂರು:- ಈ ಬಗ್ಗೆ ಮಾನ್ಯ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿ ಇದರ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ಮನವಿ ಮಾಡುವುದಾಗಿ ಸಿಂಗಸಂದ್ರವಾರ್ಡ್ ಕಾಂಗ್ರೆಸ್ ವಾರ್ಡ್ ಅಧ್ಯಕ್ಷ ಬಾಬು ರೆಡ್ಡಿ ತಿಳಿಸಿದರು.
ಮಧ್ಯರಾತ್ರಿ ಕಾಮಗಾರಿಯಾಕೆ..?.:- ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ಕೆ.ರಮೇಶ್ ಮಾತನಾಡಿ ಶಾಸಕ ಕೃಷ್ಣಪ್ಪ ಅವರು ಮೂರು ಬಾರಿ ಶಾಸಕರಾಗಿದ್ದಾರೆ, ಇವರಿಗೆ ಚುನಾವಣಾ ಆಯೋಗದ ನೀತಿ ನಿಯಮ ಗಳು ಗೊತ್ತಿಲ್ಲವೇ.. ಗೊತ್ತಿದ್ದರೂ ಇದು ದೌರ್ಜನ್ಯವೇ..

ಯಾಕೇ ಮಧ್ಯರಾತ್ರಿಯ ಗಾಮಗಾರಿ, ಅದು ಅವರ ಭಾವ ಚಿತ್ರ ಹೆಸರುಗಳನ್ನು ಹಾಕಿಸಿಕೊಂಡು ಈ ರೀತಿಯಲ್ಲಿ ಕಳ್ಳತನದ ರೀತಿಯಲ್ಲಿ ಮಧ್ಯರಾತ್ರಿ ಈ ಸಾರ್ವಜನಿಕ ಕೆಲಸ ಮಾಡುವ ಹುನ್ನಾರ ಏನು ,ಇದರ ಹಿಂದೆ,ಯಾವ ಪೊಲೀಸ್ ಇಲಾಖೆ, ಬಿಬಿಎಂಪಿ ಅಧಿಕಾರಿಗಳು ಶಾಮೀಲು ಆಗಿದ್ದಾರೆ, ಇದು ಈ ಮುಂದಿನ ಚುನಾವಣೆಯಲ್ಲಿ ನಡೆಯಬಹುದಾದ ಅಕ್ರಮಗಳಿಗೆ ಮುನ್ಸೂಚನೆ ಮತ್ತು ಅನುಮಾನಕ್ಕೆ ಕಾರವಾಗಿದೆ ಈ ಬಗ್ಗೆ ಸುತ್ತ ಮುತ್ತ ಇರುವ ಸಿಸಿಟಿವಿ ಕ್ಯಾಮರಗಳ ಸಾಕ್ಷಿಯಾಗಿವೆ, ಅದಕ್ಕಾಗಿಯೇ ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ತಾಹಸೀಲ್ದಾರ್ ಅವರಿಗೆ ಮನವಿ ಮಾಡುತ್ತಿದ್ದಿನಿ ದಯವಿಟ್ಟು ಕ್ರಮವಹಿಸಿ ಪ್ರಜಾಪ್ರಭುತ್ವ ಯಶಸ್ಸು ಮಾಡಿ, ಪಾರದರ್ಶಕ ಚುನಾವಣೆ ನಡೆಯುವಂತೆ ಮನವಿ ಮಾಡಿದರು.