This is the title of the web page
This is the title of the web page

ಮಣಿಪುರದಲ್ಲಿ ಹಿಂಸಾಚಾರ: ಕಫ್ರ್ಯೂ ಜಾರಿ

ನವದೆಹಲಿ: ಮಣಿಪುರದಲ್ಲಿ ಎಸ್‍ಟಿ ಮೀಸಲಾತಿ ವಿಚಾರವಾಗಿ ಹಿಂಸಾಚಾರ ಭುಗಿಲೆದಿದ್ದು, ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿ ಇಂಟರ್‍ನೆಟ್ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ.

ಎಸ್‍ಟಿ ಮೀಸಲಾತಿ ವಿಚಾರವಾಗಿ ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ ಬೆನ್ನಲ್ಲೆ ಸೇನೆಯು ಪೀಡಿತ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು.ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈಗಾಗಲೇ ಎಲ್ಲಾ ರೀತಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಬುಡಕಟ್ಟು ಆಂದೋಲನದ ಸಂದರ್ಭದಲ್ಲಿ ಹಿಂಸಾಚಾರ ಹೆಚ್ಚಾದ ಹಿನ್ನೆಲೆ ಬುಧವಾರ ಮಣಿಪುರದ 8 ಜಿಲ್ಲೆಗಳಾದ ಇಂಫಾಲ್ ಪಶ್ಚಿಮ, ಕಾಕ್ಚಿಂಗ್, ತೌಬಲ್, ಜಿರಿಬಾಮ್ ,ಬಿಷ್ಣುಪುರ್ , ಚುರಾಚಂದ್‍ಪುರ, ಕಾಂಗ್‍ಪೋಕ್ಪಿ ಮತ್ತು ತೆಂಗ್‍ನೌಪಾಲ್ ಕರ್ಫ್ಯೂ ವಿಧಿಸಲಾಯಿತು.
ಇಡೀ ಈಶಾನ್ಯ ರಾಜ್ಯದಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಇದರಿಂದ ಜನರಿಗೆ ಸಂವಹನಕ್ಕೆ ಭಾರೀ ತೊಂದರೆ ಉಂಟಾಗಿದೆ ಎಂದು ತಿಳಿಯಲಾಗಿದೆ.