ನವದೆಹಲಿ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ CSk ನಡುವೆ ಹೈವೋಲ್ಟೋಜ್ ಪಂದ್ಯ ನಡೆಯಲಿದೆ. ಪಂದ್ಯಕೆ ಮಳೆ ಭೀತಿ ಇದ್ದರೂ ಕೂಡ ಪಂದ್ಯಕ್ಕೆ ಯಾವುದೇ ಅಡಚಣೆ ಆಗದೇ ಇರಲಿ ಎಂದು ಕ್ರಿಕೆಟ್ ಅಭಿಮಾನಿಗಳು ಪ್ರಾರ್ಥನೆ ಶುರು ಮಾಡಿದ್ದಾರೆ
ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ ಅಭಿಮಾನಿಯೊಬ್ಬ ಖಾಲಿ ಜಾಗದಲ್ಲಿ ಮೊದಲು ವಿರಾಟ್ರ ಚಿತ್ರ ಮೂಡುವಂತೆ ರೇಖೆಗಳನ್ನು ಗೀಚಿದ್ದಾನೆ. ಬಳಿಕ ರೇಖೆಗಳುದ್ದಕ್ಕೂ ಬೆಳ್ಳುಳ್ಳಿ, ಈರುಳ್ಳಿಯನ್ನು ಜೋಡಿಸಿದ್ದಾನೆ. ಇದು ಥೇಟ್ ವಿರಾಟ್ರಂತೆ ಕಾಣುವಂತೆ ಮಾಡಿದ್ದಾನೆ. ಇದು ನೋಡುಗರನ್ನು ಬೆರಗಾಗುವಂತೆ ಮಾಡಿದೆ.
ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಜೋಡಿಸಿದ ಬಳಿಕ ದೂರದಿಂದ ಅದನ್ನು ನೋಡಿದಾಗ ಕೊಹ್ಲಿಯ ಚಿತ್ರವೇ ಅಲ್ಲಿ ಕಾಣುತ್ತದೆ. ಇದರ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದ್ದು, ಭಾರೀ ವೈರಲ್ ಆಗುತ್ತಿದೆ. ಈ ಚಿತ್ರವನ್ನ ಬಿಡಿಸಿದ ಅಭಿಮಾನಿಯ ಬಗ್ಗೆ ಮಾಹಿತಿ ಸಿಕ್ಕಿಲ್ಲವಾದರೂ, ತನುಜ್ ಸಿಂಗ್ ಎಂಬ ಬಳಕೆದಾರರೊಬ್ಬರು ವಿಡಿಯೋವನ್ನು ಹಂಚಿಕೊಂಡಿದ್ದಾರೆ.