ಶಿಡ್ಲಘಟ್ಟ: ಶಿಲ್ಪಕಲೆ ಮತ್ತು ಸ್ವರ್ಗ ಸೃಷ್ಟಿ ಸಮಾನವಾದ ದೇವಾಲಯಗಳ ನಿರ್ಮಾಣಕ್ಕೆ ತಮ್ಮ ಬದುಕನ್ನೇ ಮುಡುಪಾಗಿಟ್ಟ ವಿಶ್ವಕರ್ಮರು ಕಲೆ ಮತ್ತು ಪರಂಪರೆಯ ಪ್ರತೀಕವಾಗಿದ್ದಾರೆ. ವಿಶ್ವಕರ್ಮ ಜಯಂತಿಯ ಮೂಲಕ ಅಂತಹ ಮಹಾನ್ ವ್ಯಕ್ತಿ ಮತ್ತು ಸಮುದಾಯಗಳನ್ನು ಸ್ಮರಿಸಿಕೊಳ್ಳಬೇಕು ಮತ್ತು ಗೌರವಿಸಬೇಕು ಎಂದು ತಹಸಿಲ್ದಾರ್ ಬಿ.ಎನ್ ಸ್ವಾಮಿ ತಿಳಿಸಿದರು.
ಅವರು ಇಂದು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಮ್ಮ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಕಾರ್ಯಕ್ರಮದಲ್ಲಿ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಜಗದೀಶ್ ತಾಲೂಕು ಆರೋಗ್ಯ ಅಧಿಕಾರಿ ಡಾಕ್ಟರ್ ವೆಂಕಟೇಶ್ ಮೂರ್ತಿ, ತಾಲೂಕು ವಿಶ್ವಕರ್ಮ ಸಂಘದ ಅಧ್ಯಕ್ಷ ಮುನಿರತ್ನ ಚಾರಿ, ಖಜಾಂಚಿ ಕೃಷ್ಣಾಚಾರಿ, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಮೇಲೂರು ಮಂಜುನಾಥ್, ನಂದಿ ರಾಜೇಶ್, ಪತ್ರಕರ್ತರಾದ ಛಾಯಾ ರಮೇಶ್, ಬಿ ಏನ್ ವೇಣು ಮುಖಂಡರು ಪಾಲ್ಗೊಂಡಿದ್ದರು.