ಬೆಂಗಳೂರು: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಮಾಜಿ ಸಚಿವ ಕೆ. ಸುಧಾಕರ್ ತಮಗೆ ದೂರವಾಣಿ ಕರೆ ಅಥವಾ ಮೆಸೇಜ್ ಮಾಡಿದ್ದು ಸಾಭೀತು ಪಡಿಸಿದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಸವಾಲು ಹಾಕಿದ್ದಾರೆ.
ನಿನ್ನೆ ನಮ್ಮ ಮನೆ ಬಳಿಗೆ ಸುಧಾಕರ್ ಬಂದಿದ್ದಾಗ ನಾನು ಮನೆಯಲ್ಲಿ ಇರಲಿಲ್ಲ. ಆ ಸಂದರ್ಭದಲ್ಲಿ ಸುಧಾಕರ್ ಮಾತನಾಡಿ ತಮ್ಮ ಬಗ್ಗೆ ಮಾಡಿರುವ ಆಕ್ಷೇಪಕ್ಕೆ ಪ್ರತಿಕ್ರಿಯಿಸಿರುವ ವಿಶ್ವನಾಥ್, ಲೋಕಸಭಾ ಚುನಾವಣೆಯಲ್ಲಿ ನನ್ನ ಮಗನಿಗೆ ಟಿಕೆಟ್ ಮಿಸ್ ಆಗಿದೆ. ನಿನ್ನೆ ನನ್ನ ಮನೆಗೆ ಅಭ್ಯರ್ಥಿ ಆಗಮಿಸಿದ್ದರು. ನಾನು ಮನೆಯಲ್ಲಿ ಇರಲಿಲ್ಲ. ನಮಗೆ ಬೇಸರ ಇರುವುದು ನಿಜ. ನನಗೆ ಮೊದಲೇ ತಿಳಿಸಿದರೆ ನಾನು ಮನೆಯಲ್ಲಿಯೇ ಇರುತ್ತಿದ್ದೆ ಎಂದಿದ್ದಾರೆ.
ಇಲ್ಲಿ ಸಿಂಪಥಿ ಗಿಟ್ಟಿಸಿಕೊಳ್ಳುವ ತಂತ್ರ ಬೇಡ. ನಾವು ಬಿಜೆಪಿಯಲ್ಲಿದ್ದೇವೆ. ಅದಕ್ಕಾಗಿಯೇ ಕೆಲಸ ಮಾಡುತ್ತೇವೆ ಎಂದಿದ್ದಾರೆ.ಅಭ್ಯರ್ಥಿಯಾದವರು ಗಾಜಿನ ಮನೆಯಲ್ಲಿ ಇದ್ದಂಗೆ ಇರುತ್ತಾರೆ. ಎಚ್ಚರದಿಂದ ಮಾತನಾಡಿದರೆ ಒಳಿತು. ಮನೆಯ ಬಳಿಗೆ ಬಂದವರನ್ನು ಒಳಗೆ ಕರೆಯದಷ್ಟು ನಿಕೃಷ್ಠ ನಾನಲ್ಲ. ಯಾರೇ ಕಾರ್ಯಕರ್ತರು ಬಂದರು ಉಪಚಾರ ಮಾಡುತ್ತೇವೆ. ಯಾರೇ ಬಂದರು ಸಹ ಎದ್ದು ಹೋಗಿ ಕರೆದು ಮಾತನಾಡುತ್ತೇನೆ ಎಂದಿರುವ ಅವರ, ತಮ್ಮ ಪಕ್ಷದ ಮುಖಂಡರೊಂದಿಗೆ ಮಾತುಕತೆ ನಡೆಸಿ ಅವರಿಗೆ ತಿಳಿಸುತ್ತೇನೆ. ಆಗ ಅವರು ಬರಲಿ ಎಂದು ಹೇಳಿದ್ದಾರೆ.