ಕನಕಪುರ: ನಗರದ ಹೊ ರ ವಲಯದಲ್ಲಿರುವ ಹವಾಮಾನ ದತ್ತಾಂಶ ಕೇಂದ್ರಕ್ಕೆ ಸರ್ಕಾರಿ ಪದವಿ ಕಾಲೇಜಿನ ಭೂಗೋಳ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಂಡರು.
ತಾಲ್ಲೂಕಿನ ಕಸಬಾ ಹೋಬಳಿಯ ಆಡನಕುಪ್ಪೆ ಗ್ರಾಮದಲ್ಲಿರುವ ಸುಮಾರು 40 ವರ್ಷಗಳ ಹಿಂದೆ ಸ್ಥಾಪನೆಗೊಂಡಿರುವ ಹವಾಮಾನ ದತ್ತಾಂಶ ಕೇಂದ್ರಕ್ಕೆ ನಗರದ ಬೂದಿಗೂಪ್ಪೆ ಬಳಿಯಿರುವ ಸರ್ಕಾರಿ ಪದವಿ ಕಾಲೇಜಿನ ಭೂಗೋಳ ಶಾಸ್ತ್ರದ ವಿದ್ಯಾರ್ಥಿಗಳಿಗೆ ಕಾಲೇಜಿನ ವತಿಯಿಂದ ಹಮ್ಮಿಕೊಂಡಿದ್ದ ಒಂದುದಿನ ಶೈಕ್ಷಣಿಕ ಪ್ರವಾಸದ ಅಂಗವಾಗಿ ಈ ಸ್ಥಳಕ್ಕೆ ಭೇಟಿ ನೀಡಿ ಹಲವು ಮಹತ್ವದ ವಿಷಯಗಳನ್ನು ತಿಳಿದುಕೊಂಡರು.
ದತ್ತಾಂಶ ಕೇಂದ್ರದ ಮೇಲ್ವಿಚಾರಕಿ ಗೌರಮ್ಮ ಕಾಲೇಜು ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರಿಗೆ ಈ ದತ್ತಾಂಶ ಕೇಂದ್ರದ ವೈಶಿಷ್ಟ್ಯಗಳನ್ನು ವಿವರಣೆ ನೀಡಿ ದತ್ತಾಂಶ ಉಪಕರಣಗಳಿಂದ ದಿನನಿತ್ಯ ಸೂರ್ಯನ ತಾಪಮಾನ ದಾಖಲಿಸುವ ಸಾಧನ, ಉಷ್ಣಾಂಶ ದಾಖಲಿಸುವ ಗರಿಷ್ಠ ಮತ್ತು ಕನಿಷ್ಠ ತಾಪಮಾನ, ಹವಾಮಾನ ವೈಪರೀತ್ಯ, ಪವನ(ಗಾಳಿಯ) ವೇಗ ಮಾಪಕ, ಪವನ ದಿಕ್ಸೂಚಿ, ಮಳೆಯ ಮಾಪಕ (ಸ್ವಯಂ ಚಾಲಿತ ಹಾಗೂ ಡಿಜಿಟಲೀಕ ರಣ) ದಾಖಲೀಕರಣಗಳ ಬಗ್ಗೆ ಮಹತ್ವದ ಮಾಹಿತಿಯನ್ನು ನೀಡಿದರು.
ಭೂಗೋಳ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಸತೀಶ್ ಕುಮಾರ್,ಡಾ.ಮುತ್ತುರಾಜು.ಕೆ ಹಾಗೂ ವಿದ್ಯಾರ್ಥಿಗಳು ಈ ವೇಳೆ ಉಪಸ್ಥಿತರಿದ್ದು ನಮಗೆ ಈ ಅತ್ಯಮೂಲ್ಯವಾದ ಮಾಹಿತಿಯನ್ನು ಪಡೆದುಕೊಳ್ಳಲು ಸಹಕಾರ ನೀಡಿದ ಕಾಲೇಜಿನ ಪ್ರಾಂಶುಪಾಲೆ ಡಾ.ಶ್ಯಾಮಲಾ, ಪ್ರಾಧ್ಯಾಪಕರು ಹಾಗೂ ದತ್ತಾಂಶ ಕೇಂದ್ರದ ಸಿಬ್ಬಂದಿಗಳಿಗೆ ಧನ್ಯವಾದ ಗಳನ್ನು ಸಲ್ಲಿಸಿದರು.