ದೇವನಹಳ್ಳಿ: ಪಟ್ಟಣದ ಜನರಿಗೆ ಚುನಾವಣಾ ಕುರಿತು ಅರಿವು ಕಾರ್ಯಚಟುವಟಿಕೆಗಳ ಮತ್ತು ಸ್ವೀಪ್ ಕಾರ್ಯಕ್ರಮಗಳು ಮಾಡಿ ಮತದಾರರಲ್ಲಿ ಅರಿವು ಮೂಡಿಸಿ ಶೇ.ನೂರರಷ್ಟು ರಷ್ಟು ಪ್ರತಿಯೊಬ್ಬರೂ ಮತದಾನ ಮಾಡಿ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಪುರಸಭಾ ಮುಖ್ಯ ಆಡಳಿತ ಅಧಿಕಾರಿ ದೊಡ್ಡ ಮಲುವಯ್ಯ ಹೇಳಿದರು.
ದೇವನಹಳ್ಳಿ ತಾಲೂಕಿನ ಪುರಸಭಾ ಕಾರ್ಯಾಲಯದ ಪೌರ ಕಾರ್ಮಿಕರ ವತಿಯಿಂದ ‘ಚುನಾವಣಾ ಪರ್ವ ದೇಶದ ಗರ್ವ’ ಎಂಬ ತತ್ವದಡಿ ಜನರಲ್ಲಿ ಮತದಾನ ಕುರಿತು ಅರಿವು ಮೂಡಿಸಿದ್ದಾರೆ, ಪಟ್ಟಣದ ಬೀದಿಗಳಲ್ಲಿ ಸಂಚರಿಸಿ ಮತದಾನದ ಅರಿವು ಮೂಡಿಸಿದರು.ಜಿಲ್ಲಾಡಳಿತ, ಜಿಪಂ ಮತ್ತು ಜಿಲ್ಲಾ ಸ್ವೀಪ್ ಸಮಿತಿ, ತಾಲ್ಲೂಕು ಆಡಳಿತ, ತಾಲ್ಲೂಕು ಸ್ವೀಪ್ ಸಮಿತಿ ಸಹಯೋಗದಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆ ಸಾರ್ವಜನಿಕರಿಗೆ ಮತದಾನ ಕುರಿತು ಅರಿವು ಮತ್ತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಮತದಾನ ವನ್ನು ಪ್ರತಿಯೊಬ್ಬ ಸಾರ್ವಜನಿಕನ ಹಕ್ಕಾಗಿದ್ದು ಚಾಚೂ ತಪ್ಪದೇ ಮತದಾನ ಮಾಡಿ ರಾಷ್ಟ್ರ ನಿರ್ಮಾಣಕ್ಕೆ ಎಲ್ಲರೂಕೊಡುಗೆ ನೀಡಬೇಕು. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಮತದಾನದ ಅರಿವನ್ನು ಜಾಗೃತಿಯನ್ನು ಮೂಡಿಸು ತ್ತಿದ್ದೇವೆ. ಚುನಾವಣೆಗೆ ಸಂಬಂಧಿಸಿದ ನಾಯಕರ , ಪಕ್ಷದ ಚಿನ್ಹೆಗಳ ಬ್ಯಾನರ್ ಮತ್ತು ಬಿತ್ತಿಪತ್ರಗಳನ್ನು ಮರೆಮಾಚಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಬೇರೆ ಎಲ್ಲಾದರೂ ಕಂಡುಬಂದಲ್ಲಿ ತಿಳಿಸಿದರೆ ಅಧಿಕಾರಿಗಳು ಅದನ್ನು ತೆರವುಗೊಳಿಸುವ ಕೆಲಸ ಮಾಡಿತ್ತಾರೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ದೇವನಹಳ್ಳಿ ತಾಲೂಕು ಐಇಸಿ ಪ್ರಕಾಶ್, ಪುರಸಭಾ ಪೌರಕಾರ್ಮಿಕರು, ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.