ಚಿಕ್ಕಬಳ್ಳಾಪುರ: ಗೌರಿಬಿದನೂರು ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಇಂದು ಕುರೂಡಿ ಗ್ರಾಮ ಪಂಚಾಯ್ತಿಯ ಕುರೂಡಿ ಗ್ರಾಮದ ಕೆಂಕರಪ್ಪನಕುಂಟೆ ಅಭಿವೃದ್ಧಿ ಕಾಮಗಾರಿ ನಡೆಯುವ ಸ್ಥಳಕ್ಕೆ ತಾಲ್ಲೂಕು ಸ್ವೀಪ್ ಸಮಿತಿಯ ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಜಿ.ಕೆ. ಹೊನ್ನಯ್ಯ ರವರು ಭೇಟಿ ನೀಡಿ ನರೇಗಾ ಕೂಲಿ ಕಾರ್ಮಿಕರಿಗೆ ಮತದಾನದ ಜಾಗೃತಿ ಮೂಡಿಸಿದರು.
ಪ್ರಜಾಪ್ರಭುತ್ವದ ಹಬ್ಬವಾಗಿ ಏಪ್ರಿಲ್ 26 ರಂದು ಆಚರಣೆ ಮಾಡಬೇಕು. ಎಲ್ಲ ಮತದಾರರು ಮತದಾನ ಚಲಾಯಿಸಬೇಕು ಎಂದು ತಿಳಿಸಿ, ಮತದಾರರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಪಿ.ಕರಿಯಪ್ಪ, ಕುರೂಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುನಿಯಪ್ಪ, ನರೇಗಾ ತಾಂತ್ರಿಕ ಸಂಯೋಜಕ ಸುಜಯ್, TIEC ಅನಿತ, ಎಲ್ಲಾ ತಾಂತ್ರಿಕ ಸಹಾಯಕ ಅಭಿಯಂತರು, ತಾಂತ್ರಿಕ ಕೃಷಿ ಸಹಾಯಕರು, ಬೇರ್ಪೂಟ್ ಟೆಕ್ನಿಷಿಯನ್ಸ್, ಗ್ರಾಮ ಕಾಯಕ ಮಿತ್ರರು, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ನರೇಗಾ ಕೂಲಿ ಕಾರ್ಮಿಕರು ಹಾಜರಿದ್ದರು.