ದೊಡ್ಡಬಳ್ಳಾಪುರ: ಲೋಕಸಭಾ ಚುನಾವಣೆ 2024 ಬೆಂಗಳೂರು ಗ್ರಾಮಾಂತರ ಜಿಲ್ಲಾ ಸ್ವೀಪ್ ಹಾಗು ದೊಡ್ಡಬಳ್ಳಾಪುರ ನಗರಸಭೆ ವತಿಯಿಂದ ಮತದಾರ ಜಾಗೃತಿ ಜಾಥಾ ಕಾರ್ಯಕ್ರಮ ನಗರಸಭಾ ಆವರಣದಲ್ಲಿ ಮಹಿಳೆಯರಿಂದ ರಂಗೋಲಿ ಸ್ಪರ್ದೆ ಮಾಡುವುದರ ಮುಖಾಂತರ ಮತದಾರರಿಗೆ ಮತದಾನವನ್ನು ಕಡ್ಡಾಯವಾಗಿ ಚಲಾಯಿಸುವಂತೆ ಸ್ವಸಹಾಯ ಸಂಘದ ಮಹಿಳೆಯರಿಗೆ ಸ್ತ್ರೀಶಕ್ತಿ ಸಂಘಗಗಳಿಗೆ ಹಾಗೂ ವಾರ್ಡಿನ ಮತದಾರರಿಗೆ ಮತದಾನದ ಜಾಗೃತಿ ಮೂಡಿಸಲಾಯಿತು.
ಕಂದಾಯಧಿಕಾರಿ ಗೋವಿಂದರಾಜು ಮತದಾನದ ಬಗ್ಗೆ ಪ್ರತಿಜ್ಞೆ ಬೋಧಿಸಿದರು ನಂತರ ಮಾತನಾಡಿದ ಅವರು ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಜಾಗೃತಿ ಮೂಡಿಸಲಾಗುತ್ತಿದೆ, ಮತದಾನ ಹಕ್ಕನ್ನು ಹೊಂದಿದವರು ಕಡ್ಡಾಯವಾಗಿ ಮತ ಚಲಾಯಿಸಬೇಕು ಮತದಾನದ ಪ್ರಕ್ರಿಯೆಯಿಂದ ಯಾರು ದೂರು ಉಳಿಯಬಾರದು ದೇಶದ ಉತ್ತಮ ಭವಿಷ್ಯಕ್ಕಾಗಿ ಮತದಾನ ಮಾಡಿ ಎಂದರು.
ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಕಂದಾಯಧಿಕಾರಿ ಶಿವಶಂಕರ್, ಬಿಲ್ ಕಲೆಕ್ಟರ್ ಮಾಧವಿ, ಎಸ್ ಡಿ ಎ ಹೊನ್ನಮ್ಮ, ಶಾರದಮ್ಮ, ಆರೋಗ್ಯ ಶಾಖೆಯ ಕಾಮತರಾಜು, ಡಿ ಗ್ರೂಪ್ ನೌಕರರು, ಸ್ವಸಹಾಯ ಸಂಘದ ಪದಾಧಿಕಾರಿಗಳು ಸ್ತ್ರೀಶಕ್ತಿ ಸಂಘದ ಮಹಿಳೆಯರು, ವಾರ್ಡಿನ ಮತದಾರರು ಭಾಗವಹಿಸಿದ್ದರು.