This is the title of the web page
This is the title of the web page

ಮತ ಚಲಾಯಿಸುವುದು ಕೇವಲ ನಿಮ್ಮ ಹಕ್ಕು ಮಾತ್ರವಲ್ಲ ಪರಮ ಕರ್ತವ್ಯ

ಪ್ರಜಾಪ್ರಭುತ್ವದಲ್ಲಿ ಮತ ಚಲಾವಣೆ ನಿಮ್ಮ ಹಕ್ಕು ಎಂದು ಹೇಳುತ್ತಾರೆ. ಆದರೆ ಮತ ಚಲಾವಣೆ ಕೇವಲ ನಿಮ್ಮ ಹಕ್ಕಲ್ಲ ಕರ್ತವ್ಯ ಕೂಡ. ಬಹಷ್ಟು ಜನರು ಮತವನ್ನು ಚಲಾಯಿಸುವ ದಿನವನ್ನು ಕೇವಲ ರಜೆಯ ದಿನ ಎಂದು ಭಾವಿಸುತ್ತಾರೆ. ನಮಗೆ ಸರಕಾರಗಳನ್ನು ಆರಿಸುವ ಹಕ್ಕನ್ನು ನಮ್ಮ ದೇಶ ನೀಡಿದೆ ಅದರ ಉಪಯೋಗವನ್ನು ಸರಿಯಾಗಿ ಮಾಡಿಕೊಳ್ಳಬೇಕು.

18 ವರ್ಷಗಳಾದ ನಂತರ ಎಲ್ಲರಿಗೂ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕನ್ನು ನೀಡಲಾಗಿದೆ. ಏಕೆ 18 ವರ್ಷಗಳು ಎಂದರೆ ಹದಿ ಹರೆಯ ಮುಗಿದು ತಮ್ಮದೇ ಆದ ವಿಚಾರ ಭಾವನೆಗಳನ್ನು ಬೆಳೆಸಿಕೊಳ್ಳಲು ಆರಂಭಿಸುತ್ತಾರೆ. ಈ ವಯಸ್ಸಿನಲ್ಲಿ ಬುದ್ಧಿ ಶಕ್ತಿ ಚುರುಕಾಗುವ ಸಮಯ ಆದ್ದರಿಂದ 18ನೇ ವಯಸ್ಸಿನಿಂದ ಮತ ಚಲಾಯಿಸಲು ಆರಂಭಿಸುತ್ತಾರೆ.

ಮತ ಚಲಾವಣೆ ಮಾಡುವಾಗ ನಮ್ಮ ಸಂಬಂಧಿಕರು ಯಾರಿಗೆ ಮತ ನೀಡುತ್ತಾರೋ ಅಥವಾ ನಮ್ಮ ಸ್ನೇಹಿತರು ನೀಡುತ್ತಾರೆಯೋ ಅಥವಾ ಯಾವ ಪಕ್ಷ ನಮಗೆ ಆಸೆ ಆಮಿಷಗಳನ್ನು ನೀಡುತ್ತದೆಯೋ ಅದನ್ನು ನೋಡಿ ಮತವನ್ನು ನೀಡಲೇ ಬಾರದು. ಮತ ಚಲಾಯಿಸುವಾಗ ನಮ್ಮ ದೇಶದ ಅಭಿವೃದ್ಧಿ ನಮ್ಮ ಕೆಲಸಗಳು ಹೇಗೆ ಆಗುತ್ತಿವೆ.

ವಿಶ್ವದಲ್ಲಿ ನಮ್ಮ ಗುರುತು ಏನು ನಮ್ಮ ಸರಕಾರಗಳು ನಮ್ಮನ್ನು ಹೇಗೆ ನಡೆಸಿಕೊಳ್ಳುತ್ತಿದ್ದಾರೆ. ಸರಕಾರದ ಯೋಜನೆಗಳ ರಾಜಕೀಯ ಪಕ್ಷಗಳ ಆಶ್ವಾಸನೆ ಪೂರೈಸಲು ಸಾಧ್ಯವಿದೆಯೇ ಎಂಬುದನ್ನು ವಿವೇಚನೆ ಮಾಡಿ ಮತ ಚಲಾಯಿಸಬೇಕು. ಇದೊಂದು ದಿನ ಸಿಗುವ ಲಾಭಕ್ಕಿಂತ ಮುಂದಿನ 5 ವರ್ಷಗಳ ವಿಚಾರ ಮಾಡಿ ಮತ ಚಲಾವಣೆ ಮಾಡಬೇಕು.

ಮೊನ್ನೆ ಜಾಲತಾಣದಲ್ಲಿ ಯಾರೋ ಒಬ್ಬ ಪ್ರಸಿದ್ಧ ವ್ಯಕ್ತಿ ನಿಮ್ಮ ಹೃದಯದಿಂದ ಕೆಲಸ ಮಾಡಿ ಬುದ್ಧಿ ಶಕ್ತಿಯಿಂದ ಅಲ್ಲ ಎಂದು ಹೇಳುತ್ತಿದ್ದರು ಅದನ್ನು ಕೇಳಿದಾಗ ಇವರು ಹೇಗೆ ಪ್ರಸಿದ್ಧರಾದರೋ ಎಂಬ ಅನುಮಾನ ಬಂದಿದ್ದಂತೂ ನಿಜ. ಏಕೆಂದರೆ ಸ್ನೇಹ ಸಂಬಂಧಗಳು ಹೃದಯದಿಂದ ವ್ಯವಹಾರ ವ್ಯಾಪಾರ, ಸಮಾಜದ ಕೆಲಸಗಳನ್ನು ನಮ್ಮ ತಿಳುವಳಿಕೆಯಿಂದ ವಿಚಾರ ಮಾಡಿ ಮಾಡಬೇಕಾಗುತ್ತದೆ.
ಚುನಾವಣೆ ಮತ್ತು ಸರಕಾರಗಳು ಐದು ವರ್ಷಗಳಿಗೊಮ್ಮೆ ಬರುವ ಸಂಭ್ರಮ ಅದನ್ನು ವಿವೇಚನೆಯಿಂದ ಉಪಯೋಗ ಮಾಡಿಕೊಳ್ಳಬೇಕು.

ಗಾಳಿ ಬಂದ ಕಡೆಗೆ ತೂರಿ ಕೊಳ್ಳಬಾರದು. ಕೆಲಸದ ಆಧಾರದ ಮೇಲೆ ಮತದಾನವಾಗಿರಬೇಕು. ಪರೀಕ್ಷೆಯಲ್ಲಿ ಕೂಡ ಅನುಕಂಪದ ಅಂಕಗಳು ಬೀಳ ಬೇಕಾದರೆ ಸ್ವಲ್ಪವಾದರೂ ಬರೆದಿರಲೇ ಬೇಕು, ನಮ್ಮ ಜನ ಪ್ರತಿನಿಧಿಗಳು ನಮ್ಮ ಸಮಸ್ಯೆಗೆ ಸ್ಪಂದಿಸುವ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಹಾಗೂ ಸರಕಾರದ ಸವಲತ್ತುಗಳನ್ನು ಯಾವ ರೀತಿಯಲ್ಲಿ ಕೊಡಿಸಿದ್ದಾರೆಯೋ ಅದರ ಮೌಲ್ಯಾಂಕದ ಮೇರೆ ಮತ ಚಲಾಯಿಸುವುದು. ನಮ್ಮ ಕ್ಷೇತ್ರದ ಅಭಿವೃ$ದ್ಧಿಗೆ ಕಾರಣವಾಗಿರುತ್ತದೆ.

ನಾವು ತಲೆತಲಾಂತರಗಳಿಂದ ಅದೇ ಪಕ್ಷಕ್ಕೆ ಮತ ಚಲಾಯಿಸಿದ್ದೇವೆ ಎಂಬ ಅಂಧ ಅನುಕರಣೆ ನಿಮ್ಮ ಏಳಿಗೆಗೆ ಮಾರಕ ಹೋಸ ಮುಖ, ಹೊಸ ಪ್ರತಿಭೆ, ನವ ವಿಚಾರಗಳಿಗೆ ಪ್ರೋತ್ಸಾಹ ನೀಡಬೇಕು. ಯುವ ಜನ ಎಂದರೆ 25-40ರವರೆಗಿನವರು 40ರ ನಂತರದ ಜನರು ನಡು ವಯಸ್ಸಿನವರು.

70ರ ನಂತರದ ಜನರು ಮುದುಕರು. ಆದ್ದರಿಂದ ಯುವಕರನ್ನು ನಡು ವಯಸ್ಸಿನ ಜನರನ್ನು ಆರಿಸಿದರೆ ಉತ್ತಮ. 70ರ ನಂತರದ ಮುದುಕರ ದರ್ಶನದಿಂದ ಸರಕಾರ ನಡೆಯಬೇಕು ಆದರೆ ಅವರ ಅರೋಗ್ಯದ ಸಮಸ್ಯೆಗಳು ಮತ್ತು ಸಾಮಾನ್ಯವಾಗಿ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಮುನ್ನಡೆಯಲು ಸಾಧ್ಯವಿರದ ಜನರನ್ನು ಬಿಟ್ಟು ಮುನ್ನಡೆದರೆ ಉತ್ತಮ ಹಿಂದೆ ಕೂಡ ರಾಜರ ಆಡಳಿತವಿದ್ದಾಗ ಮೊಮ್ಮಕ್ಕಳು ಬಂದ ಮೇಲೆ ವಾನಪ್ರಸ್ಥಾಶ್ರಮಕ್ಕೆ ಹೋಗುತ್ತಿದ್ದರು. ಇಂದು ಕಾಡುಗಳು ಇಲ್ಲದೇ ಇರುವುದು ಮುಖ್ಯವಾಗಿ ಜನರಿಗೆ ಅಧಿಕಾರದ ಆಸೆ ಕಡಿಮೆಯಾಗದೇ ಇರುವ ಕಾರಣ 90ರ ನಂತರವೂ ರಾಜಕಾರಣದಲ್ಲಿ ಇರಲು ಬಯಸುತ್ತಾರೆ.

ಇಂದಿನ ಯುವಕರು ವರ್ಕ್ ಫ್ರಂ ಹೋಮ್ ಮಾಡುವಂತೆ ನಾವು ಕೂಡ ಹಾಸಿಗೆಯಲ್ಲಿಯೇ ಇದ್ದು ಆಧಿಕಾರ ಮಾಡೋಣ ಎಂಬ ಆಸೆಯನ್ನು ಹೊಂದಿರುವವರನ್ನು ಬಿಟ್ಟು ಯುವಕರು ಮತ್ತು ಅಭಿವೃದ್ಧಿಯ ಗುರಿ ಹೋಂದಿರುವವರನ್ನು ಆರಿಸಬೇಕು. ಪ್ರಜ್ಞಾವಂತ ನಾಗರೀಕರಾಗಿ ನಾವುಗಳು ನಮ್ಮ ಮತವನ್ನು ಚಲಾಯಿಸಲು ಮರೆಯಬಾರದು.

ಎಲ್ಲರಿಗೂ ಮುಂಜಾನೆಯೇ ಮತ ಚಲಾಯಿಸಲು ಆಗುವುದಿಲ್ಲ ಅದರಿಂದಲೇ ಮುಂಜಾನೆ ಏಳರಿಂದ ಸಂಜೆ 6ರವರೆಗೆ ಮತ ಚಲಾಯಿಸುವ ಸಮಯವನ್ನು ನಿಗದಿ ಪಡಿಸಲಾಗಿರುತ್ತದೆ. ನಿಮ್ಮ ಅಮೂಲ್ಯವಾದ ಮತವನ್ನು ಹಾಳು ಮಾಡಬೇಡಿ. ನಿಮ್ಮ ಆಯ್ಕೆ ಯಾವುದೇ ಪಕ್ಷವೇ ಆಗಿರಲು ಅಥವಾ ವ್ಯಕ್ತಿಯೇ ಆಗಿರಲಿ ಮರೆಯದೇ ಮತ ಚಲಾಯಿಸಿ. ಕೇವಲ ನನ್ನದೊಂದು ಮತ ಏನು ಮಾಡೀತು ಎಂಬ ಅಸಡ್ಡೆ ಬೇಡ ಒಂದು ಮತದಿಂದ ಏನೆಲ್ಲಾ ಆಗಬಹುದು. ಮತ ಚಲಾಯಿಸಿ ನಿಮ್ಮ ಪ್ರಜಾಪ್ರಭುತ್ವದ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿ.