ಕೆ.ಆರ್.ಪುರ: ಶಾಸಕ ಬೈರತಿ ಬಸವರಾಜ ದೊಷಮುಕ್ತರಾಗಿ ಹೊರಬಂದು ಕ್ಷೇತ್ರದಲ್ಲಿ ಜನಸೇವೆ ಮಾಡಲಿ ಎಂದು ಬೈರತಿ ಬಸವರಾಜ ಅಭಿಮಾನಿಗಳ ಬಳಗದಿಂದ ಮುಳಬಾಗಿಲಿನ ಕುರುಡುಮಲೆ ಶ್ರೀಗಣಪತಿ ಪಾದಾಯಾತ್ರೆ ಹಮ್ಮಿಕೊಳ್ಳಲಾಯಿತು.
ಕೆ.ಆರ್.ಪುರ ಕ್ಷೇತ್ರದ ಬಸವನಪುರದ ಶ್ರೀಅಭಯ ಆಂಜನೇಯ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಪಾದಾಯಾತ್ರೆಗೆ ತೆರಳಿದರು.
ಕೆ.ಆರ್.ಪುರ ಮಂಡಲ ಬಿಜೆಪಿ ಪ್ರದಾನ ಕಾರ್ಯದರ್ಶಿ ಶ್ರೀರಾಮಲು ಮಾತನಾಡಿ ರಾಜಕೀಯ ಷಡ್ಯಂತ್ರದಿಂದ ಕೊಲೆ ಪ್ರಕರಣದಲ್ಲಿ ಯಾವುದೇ ಸಂಬಂಧವಿಲ್ಲದಿದ್ದರೂ ಅವರನ್ನು ಬಂಧಿಸಿ ರಾಜಕೀಯವಾಗಿ ಕುಗ್ಗಿಸಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.
ಬೈರತಿ ಬಸವರಾಜ ರಾಜಕೀಯವಾಗಿ ಎದುರಿಸಲು ಆಗುವುದಿಲ್ಲ ಎಂದು ತಿಳಿದು ಈ ರೀತಿಯ ಮಾರ್ಗ ಹುಡುಕಿಕೊಂಡಿದ್ದಾರೆ. ಕೆ.ಆರ್.ಪುರದ ಕೆಲವು ನಾಯಕರು ಈ ಷಡ್ಯಂತ್ರದಲ್ಲಿ ಇದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಸಂಕಷ್ಟದಿAದ ಪಾರಾಗಲು ದೇವರ ಮೂಲೆಯಲ್ಲಿರುವ ಕುರುಡುಮಲೆ ಗಣಪತಿ ದೇವಸ್ಥಾನಕ್ಕೆ ಪಾದಾಯಾತ್ರೆ ಮೂಲಕ ತೆರಳಿ ಎಲ್ಲಾ ಸಂಕಷ್ಟ ನಿವಾರಣೆಯಾಗಿ ಬರಲಿ ಎಂದು ೧೦೧ ತೆಂಗಿನಕಾಯಿ ಒಡೆದು ಹರಕೆ ಮಾಡಿಕೊಂಡು ಬರಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಡಿ.ಎ.ಶ್ರೀನಿವಾಸ್, ವೆಂಕಟೇಶ್, ರಾಮಚಂದ್ರ, ನರಸಿಂಹಮೂರ್ತಿ, ಕುಮಾರ್, ಎಂ.ಎನ್ ಮೂರ್ತಿ, ಗಂಗಾಧರ್, ಮೈಕಲ್, ಎಂ.ಎನ್. ಮೂರ್ತಿ, ಪ್ರಮೀಳಾ, ಲಕ್ಷಿ÷್ಮÃ, ಹೇಮ, ಕಮಲ, ಜಿ.ಸುಶೀಲ, ಗಾಯಿತ್ರಿ, ಮಂಜುನಾಥ್, ಪದ್ಮ, ಕೃಷ್ಣ, ಚಂದ್ರಶೇಖರ್ ಮತ್ತಿತರರು.
ಬೈರತಿ ಆರೋಪ ಮುಕ್ತರಾಗಿ ಬರಲಿ ಎಂದು ಕುರುಡುಮಲೆಗೆ ಪಾದಯಾತ್ರೆ



