ಬೆಂಗಳೂರು: ನಗರದ ಪಾರ್ಕ್ ನಲ್ಲಿ ವಾಕಿಂಗ್ ಮಾಡುವ ಸಾರ್ವಜನಿಕರ ಜೊತೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಟಾಕಿಂಗ್ ನಡೆಸುತ್ತಿದ್ದಾರೆ.
ವಾಕಿಂಗ್ ಟಾಕಿಂಗ್ ಮೂಲಕ ಬಿಜೆಪಿ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಮೊನ್ನೆ ಅಂದರೆ ಶನಿವಾರ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಲಾಲ್ಬಾಗ್ ಪಾರ್ಕ್ ನಲ್ಲಿ ವಾಕಿಂಗ್ ಮಾಡಿದ್ದರು. ಚಿಕ್ಕಪೇಟೆಯ ಹಾಲಿ ಶಾಸಕ ಉದಯ್ ಗರುಡಾಚಾರ್ ಅವರು ಸಾಥ್ ನೀಡಿದ್ದರು.
ಬಿಜೆಪಿಯ ಮುನಿರತ್ನ ಶಾಸಕರಾಗಿರುವ ರಾಜರಾಜೇಶ್ವರಿ ನಗರದಲ್ಲಿ ನಿನ್ನೆ ವಾಕಿಂಗ್ ನಡೆಸಿ, ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಮುಂಬರುವ
ಜಿಬಿಎ ಚುನಾವಣೆ, ಮುಂದಿನ ೨೦೨೮ ರ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಡಿಕೆಶಿ ಬಿಜೆಪಿ ಶಾಸಕರು ಪ್ರತಿನಿಧಿಸುವ
ಕ್ಷೇತ್ರವನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ