ಬಂಗಾರಪೇಟೆ: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ. ಇದು ಕೇವಲ ಒಂದು ದಿನದ ಆಚರಣೆಯಾಗಬಾರದು ಬದಲಾಗಿ ಪ್ರತಿಯೊಬ್ಬರು ಹಕ್ಕುಗಳನ್ನು ಪಡೆಯುವ ಮತ್ತು ಜವಾಬ್ದಾರಿಗಳ ಎಚ್ಚರಿಸುವ ಸಂಕೇತವಾಗಬೇಕು ಎಂದು ಶಾಸಕ ಎಸ್ ಎನ್ ನಾರಾಯಣ ಸ್ವಾಮಿ ಅಭಿಪ್ರಾಯಪಟ್ಟರು. ಪಟ್ಟಣದ ಅಂಬೇಡ್ಕರ್ ಪುತ್ಥಳಿಯ ಆವರಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚಾರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ಎಂದರೆ ಜನರಿಂದ ಜನರಿಗೋಸ್ಕರವಾಗಿ ಜನರಿಂದ ನೇಮಿಸಲ್ಪಟ್ಟ ಆಡಳಿತಾತ್ಮಕ ವ್ಯವಸ್ಥೆಯಾಗಿದ್ದು ಇದನ್ನು ಬಲಪಡಿಸುವ ನಿಟ್ಟಿನಲಿ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು ಎಂದರು .
ಪ್ರಜಾಪ್ರಭುತ್ವ ತಲಹದಿ ಸಂವಿಧಾನ: ಪ್ರಜಾಪ್ರಭುತ್ವ ವ್ಯವಸ್ಥೆ ಸುಸೂತ್ರವಾಗಿ ಕಾರ್ಯನಿರ್ವಹಿಸಲು ಸಂವಿಧಾನ ತಲದಿಯಾಗಿದೆ ವಿಶ್ವದ ಇತರ ದೇಶಗಳಿಗೆ ಹೊಳಿಕೆ ಮಾಡಿದರೆ ಭಾರತ ಅತಿ ದೊಡ್ಡ ಪ್ರಜಾ ಪ್ರಭುತ್ವ ರಾಷ್ಟ್ರವಾಗಿದೆ , ಬಾಬಾ ಸಾಹೇಬ್ ಅಂಬೇಡ್ಕರ್ ರವರು ರಚಿಸಿರುವ ಬೃಹತ್ ಸಂವಿಧಾನದ ಆಶಯಗಳನ್ನು ರಾಜ್ಯಾದ್ಯಂತ ಅರಿವು ಮೂಡಿಸುವ ಉದ್ದೇಶದಿಂದ ಸರ್ಕಾರ ರಥಯಾತ್ರೆ ಹಮ್ಮಿಕೊಂಡು ಜಾಗೃತಿ ಮೂಡಿಸಿದ ಪರಿಣಾಮ ಇಂದು ಸರ್ಕಾರಿ ಶಾಲೆ ಹಾಗೂ ಸರ್ಕಾರಿ ಕಛೇರಿಗಳಲ್ಲಿ ಸಂವಿಧಾನದ ಪೀಠಿಕೆ ಓದುವಂತಾಗಿದೆ ಎಂದರು.
ಈ ಸಂದರ್ಭದಲ್ಲಿ ತಹಸಿಲ್ದಾರ್ ಸುಜಾತಾ ,ಗ್ರೇಡ್ 2 ತಹಸಿಲ್ದಾರ್ ಗಾಯಿತ್ರಿ, ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಅಂಜಲಿ ದೇವಿ, ಬಿಇಓ ಶಶಿಕಲಾ , ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಪ್ರತಿಭಾ, ರಾಜಸ್ವ ನಿರೀಕ್ಷಕರಾದ ಪವನ್, ಕಾರ್ಯದರ್ಶಿ ಚೇತನ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರವಿ, ಪುರಸಭಾ ಅಧ್ಯಕ್ಷ ಗೋವಿಂದಾ ,ಇತರರು ಉಪಸ್ಥಿತರಿದ್ದರು .