ಚಳ್ಳಕೆರೆ: ದೇಶದ ಬೆನ್ನೆಲುಬು ನಮ್ಮ ಅನ್ನದಾತ ರೈತ.ನಿಸ್ವಾರ್ಥದಿಂದ ದೇಶದ ಜನರ ಹಸಿವು ನೀಗಿಸುತ್ತಿರುವ ರೈತರಿಲ್ಲದೆ ನಾವಿಲ್ಲ. ಶಾಸಕ ಟಿ.ರಘುಮೂರ್ತಿ.ನಗರದ ಕೃಷಿ ಇಲಾಖೆ ಮತ್ತು ತಾಲ್ಲೂಕು ಕೃಷಿಕ ಸಮಾಜದ ವತಿಯಿಂದ ಕೃಷಿ ಇಲಾಖೆ ಆವರಣದಲ್ಲಿ ನಡೆದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ.ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿ.
ಚಿತ್ರದುರ್ಗ ಜಿಲ್ಲೆಯ ರೈತರು ಅದರಲ್ಲೂ ಚಳ್ಳಕೆರೆ ತಾಲೂಕಿನಲ್ಲಿ ಮಳೆಯ ಆಧಾರದ ಬೆಳೆಗಳನ್ನು ನಂಬಿ ಕೃಷಿ ಮಾಡುವ ರೈತರೇ ಹೆಚ್ಚಾಗಿದ್ದು. ಸಕಾಲದಲ್ಲಿ ಮಳೆ ಬಾರದೆ ಬಿತ್ತಿದ ಬೆಳೆಗಳು ಒಣಗಿ ಹೋಗಿ. ಬೆಳೆ ಬಿತ್ತನೆಗೆ ಮಾಡಿದ ಸಾಲ ಬಡ್ಡಿಗಳ ಶೂಲದಲ್ಲಿ ಬದುಕುತ್ತಿರುವ ದಯನೀಯ ಪರಿಸ್ಥಿತಿ ರೈತರಿಗೆ ಉಂಟಾಗಿದೆ.
ಇದಕ್ಕೆ ಪರಿಹಾರ ನೆನೆಗುದಿಗೆ ಬಿದ್ದಿರುವ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿದಾಗ ಮಾತ್ರ ರೈತರ ಕಷ್ಟಗಳು ಬಗೆಹರಿಯುತ್ತವೆ. ಕೇಂದ್ರ ಸರ್ಕಾರವು ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಗೆ ಸೇರಿಸುವುದಾಗಿ ಹೇಳಿ. ಹಲವು ವರ್ಷಗಳೇ ಕಳೆದವು.
ಆದರೂ ಕೇಂದ್ರ ಸರ್ಕಾರದ ಈ ಇಬ್ಬಧಿ ನೀತಿಗೆ ರೈತರು ಬಲಿಪಶುಗಳಾಗಿದ್ದಾರೆ ಎಂದರು.ಪಕ್ಷ,ಚುನಾವಣೆ ರಾಜಕೀಯಗಳನ್ನು ಬಿಟ್ಟು. ಚಿತ್ರದುರ್ಗ ಜಿಲ್ಲೆಯ ರೈತರ ಹಿತಕ್ಕಾಗಿ ಜಿಲ್ಲೆಯ ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ರಾಜಕಾರಣಿಗಳು ಒಗ್ಗಟ್ಟಾಗಿ ಕೆಲಸ ಮಾಡಿದಾಗ ಮಾತ್ರ. ಯೋಜನೆಗಳು ಪೂರ್ಣವಾದಾಗ ಮಾತ್ರ ರೈತರ ಮುಖದಲ್ಲಿ ನಗುವನ್ನು ಕಾಣಬಹುದು ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಕೃಷಿ ಅಧಿಕಾರಿಗಳಾದ ಅಶೋಕ, ರೈತ ಸಂಘದ ಸೋಮಗುದ್ದು ರಂಗಸ್ವಾಮಿ, ಭೂತಯ್ಯ, ಕೃಷ್ಣಮೂರ್ತಿ, ತಿಪ್ಪೇಸ್ವಾಮಿ, ಜಿಲ್ಲಾ ಕೆ.ಡಿ.ಪಿ. ಸದಸ್ಯರಾದ ರಂಗಸ್ವಾಮಿ, ಮಾಜಿ ಎ.ಪಿ.ಎಂ.ಸಿ.ಅಧ್ಯಕ್ಷರಾದ ಶಿವಣ್ಣ, ರೈತ ಮುಖಂಡ ನಾಗೇಂದ್ರಪ್ಪ ಹಾಗೂ ಕೃಷಿ ಇಲಾಖೆ ಸಿಬ್ಬಂದಿ ಮತ್ತು ರೈತರು ಉಪಸ್ಥಿತರಿದ್ದರು.