ಹಿಮಾಚಲ ಪ್ರದೇಶ: 2036ರ ಒಲಿಂಪಿಕ್ಸ್ ಆತಿಥ್ಯಕ್ಕೆ ಬಿಡ್ ಸಲ್ಲಿಸಲು ಭಾರತ ಸಿದ್ದವಿದೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ. ಈ ಬಗ್ಗೆ ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ಒಲಿಂಪಿಕ್ ಬಿಡ್ ಸಲ್ಲಿಸಲು ನಾವು ಸಿದ್ಧರಾಗಿದ್ದೇವೆ.
ಆತಿಥ್ಯ ಹಕ್ಕು ನಮಗೆ ಸಿಗುವ ವಿಶ್ವಾಸವಿದೆ’ ಎಂದಿದ್ದಾರೆ.ಕ್ರೀಡಾ ಮೂಲಸೌಕರ್ಯಕ್ಕೆ 5,000 ಕೋಟಿ ಬೇಕಾಗಬಹುದು. ಅದು 20,000 ಕೋಟಿಗೆ ಹೆಚ್ಚಳವಾದರೂ ನಿಭಾಯಿಸಬಹುದು’ ಎಂದು ಹೇಳಿದ್ದಾರೆ.
ಈ ಬಾರಿ ಒಲಿಂಪಿಕ್ಸ್ ಪ್ಯಾರಿಸ್ನಲ್ಲಿ ನಡೆಯಲಿದ್ದು, 2028ರಲ್ಲಿ ಲಾಸ್ ಏಂಜಲೀಸ್, 2032ರಲ್ಲಿ ಆಸ್ಟ್ರೇಲಿಯಾದ ಬ್ರಿಸ್ಟೇನ್ ಆತಿಥ್ಯ ವಹಿಸಲಿದೆ. 2036ರ ಒಲಿಂಪಿಕ್ಸ್ಗೆ 2026 ಅಥವಾ 2027ರಲ್ಲಿ ಆತಿಥ್ಯ ರಾಷ್ಟ್ರ ಆಯ್ಕೆಯಾಗಲಿದೆ.