ಬೆಂಗಳೂರು: ದೆಹಲಿಗೆ ತೆರಳಿರುವ ಡಿಸಿಎಂ ಡಿಕೆಶಿ ಪರವಾಗಿ ನಾವಿದ್ದೇವೆ. ಅವರು ನಾಳೆನೇ ಬರಲಿ ತೊಂದರೆ ಇಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಅವರು ಮಾಧ್ಯಮ ಗಳ ಜೊತೆ ಮಾತನಾಡಿ ದರು. ಈ ವೇಳೆ ಡಿಸಿಎಂ ಡಿಕೆಶಿ ದೆಹಲಿಯಲ್ಲೇ ಉಳಿದಿರುವ ವಿಚಾರವಾಗಿ ಪ್ರತಿಕ್ರಿಸಿದರು. ಡಿಸಿಎಂ ಪರವಾಗಿ ನಾವಿದ್ದೇವೆ. ನಾವು ಇಲ್ಲಿ ನೋಡಿಕೊಳ್ಳುತ್ತೇವೆ ಎಂದಿದ್ದಾರೆ. ಆರೆಸ್ಎಸ್ ಬಗ್ಗೆ ಮಾಜಿ ಸಂಸದ ಅನಂತ ಕುಮಾರ್ ಹೆಗ್ಡೆ ಹೇಳಿಕೆ ವಿಚಾರವಾಗಿ, ಆರೆಸ್ಎಸ್ ಬ್ಯಾನ್ ಮಾಡ್ತೀವಿ ಅಂತ ಯಾರೂ ಹೇಳಿಲ್ಲ. ಯಾರೂ ಬ್ಯಾನ್ ಮಾಡೋಕೆ ಆಗಲ್ಲ. ಚಟುವಟಿಕೆಗಳ ನಿಷೇಧ ಬೇರೆ, ಇದು ಬೇರೆ ಎಂದು ಸ್ಪಷ್ಟಪಡಿಸಿದ್ದಾರೆ.
ಡಿಸಿಎಂ ಡಿಕೆಶಿ ಪರವಾಗಿ ನಾವಿದ್ದೇವೆ ಸತೀಶ್ ಜಾರಕಿಹೊಳಿ



