ಎಂ ಎನ್ ಕೋಟೆ: ಮಹಾತ್ಮ ಗಾಂಧೀಜಿಯವರು ನಮಗೆ ಸ್ವಾತಂತ್ರ್ಯವನ್ನು ತಂದುಕೊಟ್ಟಿದ್ದಾರೆ ಅವರ ಬಗ್ಗೆ ಎಷ್ಟು ಬಣ್ಣಿಸಿದ್ದರು ಸಾಲದು ಎಂದು ಎಂದು ಗ್ರಾಮ ಪಂಚಾಯಿತಿ ಸದಸ್ಯ ಎಂಎನ್ ಕೋಟೆ ಮೋಹನ್ ತಿಳಿಸಿದರು.
ಗುಬ್ಬಿ ತಾಲೂಕಿನ ಎಂ ಎನ್ ಕೋಟೆ ಗ್ರಾಮ ಪಂಚಾಯಿತಿಯಲ್ಲಿ ಹಮ್ಮಿಕೊಂಡಿದ್ದ ಗಾಂಧಿ ಜಯಂತಿ ಕರ್ಯಕ್ರಮದಲ್ಲಿ ಮಾತನಾಡಿದ ಅವರು ಅವರ ನಡೆ-ನುಡಿ ತತ್ವ ಆರ್ಶಗಳನ್ನು ಪಾಲಿಸುವುದರ ಜೊತೆಗೆ ಮುಂದಿನ ಪೀಳಿಗೆಗೆ ತಿಳಿಸುವಂತಹ ಕೆಲಸಗಳನ್ನು ಮಾಡಬೇಕು ಎಂದರು. ದೇಶ ಕಂಡ ಅಪ್ರತಿಮ ನಾಯಕ ಮಹಾತ್ಮ ಗಾಂಧೀಜಿಯವರು ಸರಳ ಸಜ್ಜನಿಕೆ ಹಾಗೂ ಭ್ರಷ್ಟಾಚಾರ ಮುಕ್ತ ಆಡಳಿತವನ್ನು ನೀಡಿದವರು. ಅವರ ಕನಸಿನ ಕೂತು ಸ್ವಚ್ಛತೆ ನಾವೆಲ್ರೂ ಕೂಡ ಅವರ ಮರ್ಗರ್ಶನದಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕೆಂದು ತಿಳಿಸಿದರು.
ಪಿಡಿಒ ಕೃಷ್ಣಮರ್ತಿ ಮಾತನಾಡಿ ಅಹಿಂಸೆ ಸತ್ಯತೆಯನ್ನು ಎತ್ತಿ ಹಿಡಿಯಬೇಕಾಗಿದೆ ಆದ್ದರಿಂದ ಮಹಾತ್ಮ ಗಾಂಧೀಜಿ ಅವರ ಕನಸಿನ ಕೂಸು ಆಗಿರುವ ಸ್ವಚ್ಛತೆಗೆ ಮೊದಲ ಆದ್ಯತೆಯನ್ನು ನೀಡಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಂಡು ನಾವೆಲ್ಲರೂ ಕೂಡ ಆರೋಗ್ಯದಿಂದ ಇರಬೇಕೆಂಬುದು ಅವರ ಕನಸಿನ ಕೋಸಾಗಿದೆ ಪ್ರತಿಯೊಬ್ಬರೂ ಕೂಡ ಸ್ವಚ್ಛತೆಗೆ ಪ್ರಾಮುಖ್ಯತೆಯನ್ನು ಕೊಡಬೇಕೆಂದು ತಿಳಿಸಿದರು.