ದೇವನಹಳ್ಳಿ: ಕಾಂಗ್ರೇಸ್ ಪಕ್ಷ ನಿರೀಕ್ಷೆ ಮಾಡಿದಷ್ಟು ಸ್ಥಾನಗಳನ್ನು ಗೆಲ್ಲಲಿದ್ದು,ಸಮೀಕ್ಷೆಗಳು ನೀಡಿರುವ ಫಲಿತಾಂಶಗಳು ಸುಳ್ಳಾಗಲಿವೆ, ನಮ್ಮ ಇಂಡಿಯಾ ಒಕ್ಕೂಟಕ್ಕೆ 270 ರಿಂದ 300 ಸ್ಥಾನಗಳಲ್ಲಿ ಜಯ ಗಳಿಸಲಿದ್ದು, ಸ್ಪಷ್ಟವಾದ ಬಹುಮತದಿಂದ ನಾವು ಕೇಂದ್ರ ದಲ್ಲಿ ಸರ್ಕಾರ ರಚಿಸುವುದು ನಿಶ್ಚಿತ ಇಂದು ಆಹಾರ ಮತ್ತು ನಾಗರೀಕ ಇಲಾಖೆಯ ಸಚಿವ ಕೆಎಚ್ ಮುನಿಯಪ್ಪ ಹೇಳಿದರು.
ದೇವನಹಳ್ಳಿ ಪಟ್ಟಣದ ಪುರಸಭಾ ಕಾರ್ಯಾಲಯದಲ್ಲಿ ವಿಧಾನ ಪರಿಷತ್ ನ ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆಯ ಹಿನ್ನಲೆಯಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಹೆಚ್. ಮುನಿಯಪ್ಪ ದೇವನಹಳ್ಳಿಯಲ್ಲಿ ಮತದಾನ ಕುರಿತು ಮಾಹಿತಿಯನ್ನು ಸಂಗ್ರಹಿಸಿ ಮಾತನಾಡಿದರು.
ರಾಮೋಜಿ ಗೌಡ ರವರು ಹಲವಾರು ಸಾಮಾಜಿಕ ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದು, ಸಾಕಷ್ಟು ನಿರುದ್ಯೋಗಿಗಳಿಗೆ ಉದ್ಯೋಗವಕಾಶವನ್ನು ಕಲ್ಪಿಸಿದ್ದಾರೆ ಹಾಗೂ ಇಂದಿನ ಯುವ ಜನಾಂಗದ ಸಮಸ್ಯೆಗಳ ಬಗ್ಗೆ ಅರಿವಿದೆ ಅಂತಹ ಸೂಕ್ತ ವ್ಯಕ್ತಿಯನ್ನು ಇಂದಿನ ಶಿಕ್ಷಣವಂತ ಪದವೀಧರರು ಆಯ್ಕೆ ಮಾಡಬೇಕು ಅವರು ನಿಮ್ಮ ಸಮಸ್ಯೆಗಳ ಧ್ವನಿಯಾಗಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ರಘು, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಸಿ. ಜಗನ್ನಾಥ, ಮುಖಂಡರುಗಳಾದ ವೇಣುಗೋಪಾಲ್, ರವಿಕುಮಾರ್, ಸಂದೀಪ್, ರವಿಕುಮಾರ್, ರಾಧ ರೆಡ್ಡಿ, ಚಂದ್ರಣ್ಣ, ಮಾಧವಿ ಕಾಂತರಾಜು ಹಾಗೂ ಕಾಂಗ್ರೆಸ್ ಮುಖಂಡರು ಮತ್ತಿತರರು ಇದ್ದರು.