ಚಲನಚಿತ್ರಗಳು, ಶಾರ್ಟ್ ಫಿಲಂ, ವೆಬ್ ಸಿರೀಸ್ ಮೊದಲಾದವುಗಳ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಅಗತ್ಯವಿರುವ ತಂತ್ರಜ್ಞಾನ ಮತ್ತು ಸುಸಜ್ಜಿತ ಸೌಲಭ್ಯ ಹೊಂದಿರುವ ರೆಡ್ ರಾಕ್ ಸ್ಟುಡಿಯೋ ಇತ್ತೀಚೆಗೆ ಲೋಕಾರ್ಪಣೆಯಾಯಿತು. ನಟಿ ಪ್ರಿಯಾಂಕಾ ಉಪೇಂದ್ರ ಉದ್ಘಾಟಿಸಿದರು.
ಇಂದಿನ ದಿನಗಳಲ್ಲಿ ಸಿನಿಮಾಗಳಿಗೆ ಕಂಟೆಂಟ್ ಮತ್ತು ಕ್ವಾಲಿಟಿ ತುಂಬ ಮುಖ್ಯ. ಇತ್ತೀಚೆಗೆ ಬರುತ್ತಿರುವ ಸಾಕಷ್ಟು ಹೊಸ ಸಿನಿಮಾ ಮೇಕರ್ಸ್ ತುಂಬ ಹೊಸದಾಗಿ ಯೋಚಿಸುತ್ತಿದ್ದಾರೆ. ಅಂಥವರಿಗೆ ಕೈಗೆಟಕುವ ದರದಲ್ಲಿ ತಂತ್ರಜ್ಞಾನ ಲಭ್ಯತೆಯಿದ್ದರೆ ಗುಣಮಟ್ಟದಲ್ಲಿ ಸಿನಿಮಾ ಮಾಡಬಹುದು.
ರೆಡ್ ರಾಕ್ ಸ್ಟುಡಿಯೋದಲ್ಲಿ ಇಂದಿನ ಸಿನಿಮಾ ಮೇಕರ್ಸ್ ಗೆ ಬೇಕಾದ ಎಲ್ಲ ಸೌಲಭ್ಯಗಳಿದ್ದು, ಇದರಿಂದ ಚಿತ್ರರಂಗಕ್ಕೆ ಒಳ್ಳೆಯದಾಗಲಿದೆ ಎಂದು ಪ್ರಿಯಾಂಕ ಅಭಿಪ್ರಾಯಪಟ್ಟರು.