ಅನುಗ್ರಹ: ಕೀರ್ತಿ ಶೇಷ ಶ್ರೀವಿಶ್ವೇಶತೀರ್ಥ ಶ್ರೀಪಾದರು
ಅಯೋಧ್ಯಾ ರಾಮನ ಭಾತಿ ಸಾದ್ವೀ ವಧೂರಿವ|
|ವನಂ ಗತಸ್ಯಾಪಿ ತಸ್ಯ ಪಾದುಕೇ ಯಾಕರೋತ್ ಪತಿಮ್!|
‘ರಾಮನು ಕಾಡಿಗೆ ಹೋದರೂ ಅವನ ಪಾದಚಿಹ್ನೆಗಳನ್ನೇ ರಾಮನೆಂದೆಣಿಸಿ ಪೂಜಿಸುವ ಪತಿವ್ರತೆ ಅಯೋಧ್ಯಾನಗರೀ’ ಎಂದಿದ್ದಾರೆ ಶ್ರೀಮದ್ವಾದಿರಾಜರು. ಇಂತಹ ಪುಣ್ಯದಾಯಕ ಕ್ಷೇತ್ರ ಇಂದು ಇಡೀ ರಾಷ್ಟ್ರದ ಗಮನ ಸೆಳೆದಿದೆ.
ಸ್ವಾಮಿಗಳಿಗೇಕೆ: ಅಯೋಧ್ಯೆಯ ಮಂದಿರ ನಿರ್ಮಾಣದ ಉಸಾಬರಿ ಮಠಾಧಿಪತಿಗಳಿಗೇಕೆ?ಎಂದು ಪ್ರಶ್ನೆ ಬರಬಹುದು. ಆದರೆ ನಮ್ಮ ಧರ್ಮ ಸಂಸ್ಕೃತಿ, ಶಾಸ್ತ್ರಗಳನ್ನು ರಕ್ಷಿಸುವ ಹೊಣೆ ಮಠಾಧಿಪತಿಗಳಿಗೆ ಇದೆ. ನಮ್ಮ ದೇಶದ ಪರಿಸ್ಥಿತಿಯನ್ನು ಗಮನಿಸಿದಾಗ ಕಾಲಕ್ರಮೇಣ ಇವು ಯಾವುವೂ ಉಳಿಯಲಾರ ವೇನೋ ಅನಿಸುತ್ತದೆ.
ಇತರ ದೇಶಗಳಿಂದ ಬರುವುದಲ್ಲದೆ ಇಲ್ಲಿಯೂ ಮುಕ್ತವಾಗಿ ವಿಧರ್ಮಿಯರ ಸಂಖ್ಯೆ ಹೆಚ್ಚುತ್ತಿದೆ. ಜೊತೆಗೆ ಮತಾಂಧತೆಯೂ ಬೆಳೆಯುತ್ತಿದೆ. ಬಹುಸಂಖ್ಯಾತರಾಗಿದ್ದರೂ ನಮ್ಮ ಅನೇಕ ವರ್ಷಗಳ ಬೇಡಿಕೆ ಹಾಗೆಯೇ ಉಳಿದಿದ್ದು ಅಲ್ಪಸ0ಖ್ಯಾತರಾದ ವಿಧರ್ಮಿಯರ ಬೇಡಿಕೆ ಈಡೇರುತ್ತಿದೆ. ನಮಗಿರುವುದು ಈ ದೇಶ ಒಂದೇ. ಅಲ್ಪಸಂಖ್ಯಾತರು ತೊಂದರೆಗೊಳಗಾದರೆ ಬಾಂಗ್ಲಾಕ್ಕೊ, ಪಾಕಿಸ್ತಾನಕ್ಕೊ ಹೋಗಿ ಇರಬಹುದು.
ಆದರೆ ಹಿಂದೂಗಳಿಗೆ ಹೀಗಾದರೆ ಅವರು ಅರಬ್ಬಿ ಸಮುದ್ರಕ್ಕೊ, ಬಂಗಾಳಕೊಲ್ಲಿಗೋ ಹೋಗಬೇಕು. ಆದ್ದರಿಂದ ನಮ್ಮ ಸಮಾಜದ ಬಲಿಷ್ಠ ಸಂಘಟನೆ ತೀರಾ ಆವಶ್ಯಕ. ಅದರ ಸಂಕೇತ ಅಯೋಧ್ಯೆಯ ಈ ಚಳವಳಿ. ಇದರಲ್ಲಿ ಗೆದ್ದರೆ ನಮಗೆ ಆತ್ಮವಿಶ್ವಾಸ ಮೂಡುತ್ತದೆ. ನಮ್ಮ ಧರ್ಮ ಸಂಸ್ಕೃತಿಗಳು ಉಳಿಯಲು ಸಹಕಾರಿಯಾಗುತ್ತದೆ. ನವವೃಂದಾವನದಂತಹ ಸಮಸ್ಯೆ ನಮ್ಮ ಸಮಾಜದೊಳಗಿನದಾದರೆ, ಇದು ಅದಕ್ಕಿಂತಲೂ ಮುಖ್ಯವಾದ ಇಡೀ ಹಿಂದೂ ಜನಾಂಗದ ಸಮಸ್ಯೆ. ಇದರಲ್ಲಿ ಮಠಾಧಿಪತಿಗಳು ಭಾಗವಹಿಸುವುದು ನಮ್ಮ ಸನಾತ ನಧರ್ಮರಕ್ಷಣೆಯ ದೃಷ್ಟಿಯಿಂದ ಅನಿವಾರ್ಯವೇ ಆಗಿದೆ.
ನಮ್ಮ ಉದ್ದೇಶ:- ವಿವಾದಾಸ್ಪದ ಕಟ್ಟಡವನ್ನು ಕೆಡವಿ ಅಲ್ಲಿ ಶ್ರೀರಾಮ ಮಂದಿರವನ್ನು ನಿರ್ಮಿಸುವುದೇ ನಮ್ಮ ಅಂತಿಮಗುರಿ. ಆದರೆ ಘರ್ಷಣೆಗೆಹಿಂಸಾಚಾರಕ್ಕೆ ಎಡೆಯಾಗದಂತೆ ವಿರೋ ಧಿಗಳ ಮನ ಒಲಿಸಿ ಮಂದಿರ ನಿರ್ಮಾ ಣವಾಗಬೇಕಿತ್ತು. ಶ್ರೀಕೃಷ್ಣ ಪಾಂಡವ ಕೌರವರೊಂದಿಗೆ ಸಂಧಾನಕ್ಕೆ ಪ್ರಯತ್ನ ಪಟ್ಟು ಯುದ್ಧವು ಅನಿವಾರ್ಯವೆಂದಾದಾಗ ಅದಕ್ಕೆ ಸಮ್ಮತಿಸಿದ. ಇದರಿಂದ ಅವನ ಹೊಣೆಗಾರಿಕೆ ತಪ್ಪಿತು.
ಮಾಜಿ ರಾಷ್ಟ್ರಪತಿ ಶ್ರೀ ವೆಂಕಟರಾಮನ್ ಒಂದು ಸೂಚನೆಯನ್ನು ಕೊಟ್ಟಿದ್ದರು – ‘ನೀವು ವಿವಾದಾಸ್ಪದ ಕಟ್ಟಡದ ಒಂದು ಗುಮ್ಮಟವನ್ನು ಸ್ಮಾರಕವಾಗಿ ಉಳಿಸಲು ಹಿಂದೂಗಳ ಮನ ಒಲಿಸಿ, ನಾನು ಎರಡು ಗುಮ್ಮಟಗಳನ್ನು ಬಿಟ್ಟುಕೊಡುವಂತೆ ಸ0ಬ0ಧಪಟ್ಟವರನ್ನು ಒಲಿಸುತ್ತೇನೆ’ ಇದರ ಅರ್ಥ, ಹಿಂದೆ ಇದ್ದ, ಇಂದು ಚರಿತ್ರೆಯಲ್ಲಿ ಸೇರಿಹೋದ ಕಟ್ಟಡದ ಎರಡು ಭಾಗಗಳನ್ನು ಕೆಡವಿ ಒಂದು ಭಾಗವನ್ನು ಉಳಿಸಿದರೆ ಎರಡು ಬಣಗಳಿಗೂ ಒಪ್ಪಿಗೆಯಾಗಬಹುದು ಎಂದು. ಇದನ್ನು ನಾವೂ ಒಪ್ಪಿದ್ದೆವು. ಸಾಧುಸಂತರ ಸಭೆಯಲ್ಲಿ ಈ ಸೂಚನೆಯನ್ನು ಮಂಡಿಸಿದ್ದೆವೂ ಕೂಡ.
ಆದರೆ ಇನ್ನು ಆ ಸ್ಥಾನದಲ್ಲಿ ಮಸೀದಿಯನ್ನು ಪುನಃ ನಿರ್ಮಿಸಲು ನಮ್ಮ ಸಮ್ಮತಿಯಿಲ್ಲ. ಕೆಡವಿದ ಮಸೀದಿಯು ಮೊದಲು ಮಂದಿರವಾಗಿತ್ತೆಂಬುದಕ್ಕೆ ಅಲ್ಲಿ ದೊರೆತ ಗಣೇಶ, ಆ0ಜನೇಯ ಮುಂತಾದ ದೇವತಾ ವಿಗ್ರಹಗಳು, ಗಂಟೆ, ಶಿಲಾವಿನ್ಯಾಸದ ಫಲಗಳು ಪ್ರಬಲ ಪುರಾವೆಗಳಾಗಿವೆ. ಮುಸ್ಲಿಮರಿಗೆ ಮಕ್ಕಾಮದೀನಗಳಂತೆ ನಮಗೆ ಆ ಜಾಗವೂ ಪವಿತ್ರವಾದುದು. ಏನೇ ಆದರೂ ಆ ಭೂಮಿ ನಮಗೆ ಬೇಕು. ಅಲ್ಲಿ ಮತ್ತೆ ಮಸೀದಿಯನ್ನು ನಿರ್ಮಿಸುವುದರಿಂದ ವಿವಾದವು ಬಗೆಹರಿಯುವ ಬದಲು ದೀರ್ಘಕಾಲದವರೆಗೆ ಜೀವಂತವಾಗಿ ಉಳಿಯುತ್ತದೆ.
ಅಲ್ಲದೆ ಐತಿಹಾಸಿಕ ಸ್ಮಾರಕವಾದ ಮಸೀದಿ ಅಳಿದ ಮೇಲೆ ಅಲ್ಲಿ ಪುನಃ ನಿರ್ಮಿಸಲಾಗುವ ಮಸೀದಿ ಕೇವಲ ಆಗ್ರಹದ ಒಂದು ಪ್ರತೀಕವಷ್ಟೇ ಆಗುತ್ತದೆ. ಆದ್ದರಿಂದ ವಿಧರ್ಮೀಯರು ಅನಾವಶ್ಯಕವಾದ ಆವೇಶ, ಭಾವೋದ್ರೇಕಗಳಿಗೆ ಅವಕಾಶಕೊಡದೆ ವಾಸ್ತವ ಸ್ಥಿತಿಯನ್ನು ಅರಿತು ಈ ಸಮಸ್ಯೆಯನ್ನು ಬಗೆಹರಿಸಲು ಸಹಕರಿಸಬೇಕು.
ಒಡೆದ ಕಾರ್ಯದ ಹೊಣೆಗಾರಿಕೆ: ಡಿಸೆಂಬರ್ 6ನೇ ದಿನಾಂಕದಂದು ಕರಸೇವೆ ಯು ನಿಶ್ಚಿತವಾಗಿತ್ತು. ದೇಶದ ನಾನಾ ಭಾಗಗಳಿಂದ ಲಕ್ಷಾಂತರ ಮಂದಿ ಕರಸೇವಕರು ಅಯೋಧ್ಯೆಯಲ್ಲಿ ಜಮಾಯಿಸಿದ್ದರು. ನಿಯೋಜಕರು ಕೇಂದ್ರಸರಕಾರಕ್ಕೆ, ನ್ಯಾಯಾಲಯಕ್ಕೆ ನೀಡಿದ ಆಶ್ವಾಸನೆಯಂತೆ ಕರಸೇವೆ ಭಜನೆ, ಸ್ವಚ್ಛಕರಣಗಳ ಮೂಲಕ ಸಾಂಕೇತಿಕವಾಗಿ ನಡೆಯಬೇಕೆಂದು ತೀರ್ಮಾನಿಸಿ ಕರಸೇವಕರಿಗೆ ನಿರ್ದೇಶನ ನೀಡಿದ್ದರು. ‘ಕಟ್ಟಡ ಜಾಗ ಬಿಟ್ಟು ಉಳಿದ ವಿವಾದಾಸ್ಪದವಾದ ಖಾಲಿ ನಿವೇಶನದಲ್ಲೂ ನಿರ್ಮಾ ಣಕಾರ್ಯವನ್ನೂ ಕೈಗೊಳ್ಳಬಾರದು’ ಎಂದೇ ನಿರ್ಣಯಿಸಲಾಗಿತ್ತು.
ವಿವಾದಾಸ್ಪದ ಕಟ್ಟಡವನ್ನು ಭಗ್ನಗೊಳಿಸುವ ವಿಚಾರವಂತೂ ಯಾರಲ್ಲಿಯೂ ಇರಲಿಲ್ಲ. ಅದನ್ನು ಭಗ್ನಗೊಳಿಸಬಾರದೆಂದೇ ಪದೇ ಪದೇ ಹೇಳಲಾಗಿತ್ತು. ಆದರೆ ಅನೇಕ ಕರಸೇವಕರಿಗೆ ಅಂತಿಮ ಗಳಿಗೆಯಲ್ಲಿ ದೊರೆತ ಈ ನಿರ್ದೇಶನ ನಿರಾಶೆಯನ್ನು ತಂದಿರಬೇಕು. ಅಸಂತುಷ್ಟರಾದ ಕರಸೇವಕರು ಭಾವೋದ್ರಿಕ್ತರಾಗಿ ಸ್ವಯಂ ಸ್ಫೂರ್ತಿಯಿಂದ ತೀವ್ರ ಕ್ರಮ ಕೈಗೊಂಡರು. ಭಾವನಾತ್ಮಕ ವಿಷಯದಲ್ಲಿ ಬಹುಜನರ ಮನ ಸ್ಸನ್ನು ದೀರ್ಘಕಾಲ ಹತ್ತಿಕ್ಕಿದಾಗ ಇಂತಹ ಸ್ಫೋಟಗಳು ಸಹಜ.
ಒಂದು ಗಂಟೆ ಹತ್ತು ನಿಮಿಷಕ್ಕೆ ಕರಸೇವೆಯ ಮು ಹೂರ್ತ ಗೊತ್ತಾಗಿದ್ದರೆ 11-45ಕ್ಕೆ ಉದ್ರಿಕ್ತ ಗುಂಪಿನಿಂದ ಕಲ್ಲು ತೂರಾಟ ಆರಂಭವಾಗಿ ಕರಸೇವಕರು ಭಜನೆ ಕೀರ್ತ ನೆಗಳೊಂದಿಗೆ ಹಿಂಡುಹಿಂಡಾಗಿ ನುಗ್ಗಿ ಕಟ್ಟಡವನ್ನು ಭಗ್ನಗೊಳಿಸಿದ್ದರು. ಶ್ರೀರಾಮ ಕಾಡಿಗೆ ತೆರಳುವಾಗ ಅಯೋಧ್ಯೆಯ ಜನಕ್ಕೆ ಸಂತೋಷ ದುಃಖ ಎರಡೂ ಆಯಿತು. ಪಿತೃವಾಕ್ಯ ಪರಿಪಾಲನೆಯ ಉದ್ದೇಶಕ್ಕಾಗಿ ಎಂತಹ ತ್ಯಾಗವನ್ನು ಮಾಡಲೂ ಸಿದ್ಧನಾದ ಶ್ರೀರಾಮನ ಉನ್ನತ ಆದರ್ಶವನ್ನು ನೆನೆದು ಸಂತೋಷವಾದರೆ ಇಂತಹವನನ್ನು ನಮ್ಮ ರಾಜನನ್ನಾಗಿ ಪಡೆಯುವ ಭಾಗ್ಯ ದೂರವಾಯಿತಲ್ಲಾ ಎಂದು ದುಃಖವಾಯಿತು.
ಅಯೋಧ್ಯೆಯ ಮೊನ್ನಿನ ಘಟನೆಯಲ್ಲಿ ನಮಗೂ ಹೀಗೆಯೇ ಆಯಿತು. ಶ್ರೀರಾಮನ ಭಜನೆ, ಘೋಷಣೆಗಳೊಂದಿಗೆ ಕುಣಿದು ಕುಪ್ಪಳಿಸಿ ಎಂತಹ ತ್ಯಾಗವನ್ನು ಮಾಡಲೂ ಸಿದ್ಧರಾದ ಭಕ್ತಜನರ ಭಾವೋದ್ರೇಕವನ್ನು ನೋಡಿ ಒಂದೆಡೆ ಸಂತಸವಾದರೆ ತೀವ್ರವಾದಿಗಳಾಗಿ ಐತಿಹಾಸಿಕ ಕಟ್ಟಡವನ್ನು ಕೆಡವಿ ಅನೇಕ ಮುಗ್ಧ ಜನರ ಹಿಂಸೆಗೆ ಕಾರಣರಾಗುತ್ತಾರಲ್ಲಾ! ಎಂದು ದುಃಖವೂ ಆಯಿತು.
ಜನರ ಈ ಭಾವೋದ್ರೇಕದ ಪ್ರವೃತ್ತಿಗೆ ಯಾರೂ ಹೊಣೆ ಗಾರರಲ್ಲ. ಪ್ರಾಯಶಃ ಅಲಹಾಬಾದಿನ ಹೈಕೋರ್ಟು ಮೊದಲೇ ತನ್ನ ತೀರ್ಮಾನವನ್ನು ಕೊಟ್ಟಿದ್ದಿದ್ದರೆ ಈ ವಿದ್ವಂಸಕಾರ್ಯ ನಡೆಯುತ್ತಿರಲಿಲ್ಲ.
ಏಕೆಂದರೆ, ವಿವಾದಕ್ಕೊಳಗಾದ ಆ ಖಾಲಿ ನಿವೇಶನದಲ್ಲಿ ಮಂದಿರ ನಿರ್ಮಾಣ ಕಾರ್ಯದಲ್ಲಿ ಕರಸೇವಕರನ್ನು ತೊಡಗಿಸ ಬಹುದಾಗಿತ್ತು. ಇದರಿಂದ ವಿಧ್ವಂಸ ಕಾರ್ಯವನ್ನು ತಡೆಗಟ್ಟಬಹುದಿತ್ತುದೃಷ್ಟಿಯಿಂದ ನ್ಯಾಯಾಲಯದ ವಿಳಂಬ ನೀತಿ ಪ್ರತಿಕೂಲವಾಯಿತು ಎನ್ನಬೇಕಾಗುತ್ತದೆ.
ಪ್ರಶ್ನೆ :- ಕಟ್ಟಡ ವಿಧ್ವಂಸ ಕಾರ್ಯದಲ್ಲಿ ಮಗ್ನವಾದ ಜನಜಂಗುಳಿಯನ್ನು ತಡೆಯಲು ಅಸಮರ್ಥರಾದ ಆಯೋಜಕರು ದೇಶದ ನಾನಾಭಾಗಗಳಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ ಹೊಣೆಗಾರರಾಗುವುದಿಲ್ಲವೆ?
ಉತ್ತರ :- ಬಹುಜನ ಸಮ್ಮತವಾದ ಒಂದು ಧೈಯ ಸಿದ್ಧವಾಗಬೇಕಾದರೆ ಕೆಲವೊಮ್ಮೆ ಅನೇಕ ಸಾವು ನೋವುಗಳು ಅನಿವಾರ್ಯ. ಅದಕ್ಕಾಗಿ ಅದರ ಹೊಣೆಗಾರಿಕೆಯನ್ನು ಹೊತ್ತು ಆ ಕಾರ್ಯದಿಂದ ಹಿಂದೆ ಸರಿಯುವುದು ಸರಿಯಲ್ಲ. ಸ್ವಾತಂತ್ರ ಹೋರಾಟಗಾರರು ದೇಶದ ಸ್ವಾತಂತ್ರ್ಯ ಕ್ಕಾಗಿ ಹೋರಾಡಿದಾಗಲೂ ಅವರ ಅಭಿಪ್ರಾಯಕ್ಕೆ ವಿರುದ್ಧವಾಗಿ ಹಿಂಸಾಚಾರಗಳು ನಡೆದವು. ಹಾಗೆಂದು ಆ ಕಾರ್ಯದಿಂದ ಅವರು ಹಿಂದಕ್ಕೆ ಸರಿಯಲಿಲ್ಲ. ಹಿಂಸೆ ನಡೆಯಬಾರದೆಂದು ನಾವೂ ಒಪ್ಪುತ್ತೇವೆಅದಕ್ಕಾಗಿ ಶಕ್ತಿ ಮೀರಿ ಶ್ರಮಿಸುತ್ತೇವೆ ಕೂಡಾ. ಆದರೆ ಅದಕ್ಕಾಗಿ ಉನ್ನತ ಧೈಯವನ್ನು ಬಿಟ್ಟುಕೊಡಲು ಸಿದ್ಧರಿಲ್ಲ. ಹಾಗೆ ಮಾಡುವುದಾದರೆ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ದಾನ ನೀಡುವುದರಿಂದ ಪ್ರತಿನಿತ್ಯ ಅಲ್ಲಿ ನಡೆಯುತ್ತಿರುವ ಹಿಂಸೆಯು ತಪ್ಪುತ್ತದೆ. ಇದನ್ನು ಮಾಡಲು ಯಾರಾದರೂ ಸಿದ್ಧರಿದ್ದಾರೆಯೇ?
ಪ್ರಶ್ನೆ :- ಶ್ರೀರಾಮ, ರಾಜ್ಯದ ಆಸೆಯನ್ನು ಬಿಟ್ಟು ವನಕ್ಕೆ ತೆರಳಿದ ಮಹಾತ್ಯಾಗಿ, ಅಂತಹವನ ಭಕ್ತರು ಕೇವಲ ಒಂದು ತುಂಡು ಭೂಮಿಯನ್ನು ತ್ಯಾಗಮಾಡಲು ಸಿದ್ಧರಾಗದೆ ಹಿಂಸಾಚಾರಕ್ಕೆ ಎಡೆಮಾಡಿಕೊಡುವುದು ಅನುಚಿತವಲ್ಲವೆ?
ಉತ್ತರ : ಶ್ರೀರಾಮ ರಾಜ್ಯವನ್ನು ತೊರೆದ, ಆದರೆ ತನ್ನ ಪತ್ನಿ ಸೀತೆಯನ್ನು ರಾವಣ ಕದ್ದೊಯ್ದಾಗ ಸುಮ್ಮನೆ ಇರಲಿಲ್ಲ. ಎಷ್ಟು ಹಿಂಸೆಯಾದರೂ ಹಿಂಜರಿಯದೆ ಸೀತೆಯನ್ನು ಮರಳಿ ಕರೆತಂದ.
ಪ್ರಶ್ನೆ :- ಒಂದು ಮಂದಿರವನ್ನು ಕಟ್ಟಲು ಧುಮುಕಿ ದೇಶದಲ್ಲಿ ನೂರಾರು ಮಂದಿರಗಳನ್ನು ಕಳೆದುಕೊಳ್ಳಬೇಕಾಯಿತಲ್ಲವೆ?
ಉತ್ತರ :- ಅಯೋಧ್ಯೆಯ ಚಳವಳಿ ಸಾಂಕೇತಿಕ, ಹಿಂದೂ ಸಂಘಟನೆ ಇದರಿ0ದ ಶಾಶ್ವತವಾಗಿ ಸಿಗುವ ಲಾಭ.ಹಿಂದೆ ಉಪ್ಪಿನ ಸತ್ಯಾಗ್ರಹನಡೆಸಲಾಗಿತ್ತು ಸಮುದ್ರದಿಂದ ಒಂದು ಹಿಡಿ ಉಪ್ಪನ್ನು ತೆಗೆದುದು ಉಪ್ಪಿನ ಕೊರತೆಯನ್ನು ನೀಗುವುದಕ್ಕಾಗಿ ಅಲ್ಲ. ಅದು ಸವಿನಯ ಕಾಯ್ದೆಯ ಭ0ಗ. ಅದರಂತೆ ಅಯೋಧ್ಯೆಯ ಚಳವಳಿಯೂ ಅಲ್ಪಸಂಖ್ಯಾತರನ್ನು ತುಷ್ಟಿಗೊಳಿಸಲು ಬಹುಸಂಖ್ಯಾತರ ಭಾವನೆಯನ್ನು ಹತ್ತಿಕ್ಕುವ ಸರ್ಕಾರದ ಧೋರಣೆಯನ್ನು ಪ್ರತಿಭಟಿಸುವ ಸವಿನಯ ಕಾಯ್ದೆಯ ಉಲ್ಲಂಘನೆ. ಉಳಿದ ದೇವಾಲಯಗಳ ರಕ್ಷಣೆ ಈ ಧೈಯದ ಮುಂದೆ ಎರಡನೆಯ ಕಾರ್ಯವಾಗುತ್ತದೆ.