ಕಲರ್ಸ್ ಕನ್ನಡದ ಮಾಜಿ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಇದೇ ಮೊದಲ ಬಾರಿಗೆ ನಿರ್ದೇಶನಕ್ಕೆ ಕೈ ಹಾಕಿದ್ದರು. ಡಾಲಿ ಧನಂಜಯ್ ಹೀರೊ ಆಗಿ ಆಯ್ಕೆಯಾಗಿದ್ದರು. ಅದ್ಯಾವಾಗ ಸಿನಿಮಾ ಸೆಟ್ಟೇರಿತೋ, ಅದ್ಯಾವಾಗ ಮುಗಿತೋ ಗೊತ್ತಾಗಲೇ ಇಲ್ಲ. ಸಿನಿಮಾನೂ ಕಂಪ್ಲೀಟ್ ಆಗಿ, ರಿಲೀಸ್ ಆಗಿದೆ. ಅದುವೇ ‘ಕೋಟಿ’.
ಕಳೆದ ವಾರವಷ್ಟೇ ರಿಲೀಸ್ ಆಗಿದ್ದ ಈ ಸಿನಿಮಾ ಸ್ಯಾಂಡಲ್ವುಡ್ನಲ್ಲಿ ಸದ್ಯಕ್ಕೆ ಸದ್ದು ಮಾಡುತ್ತಿದೆ. ಪಕ್ಕಾ ಫ್ಯಾಮಿಲಿ ಇಷ್ಟ ಪಡುವ ಕಮರ್ಷಿಯಲ್ ಸಿನಿಮಾ ಇದಾಗಿದೆ. ‘ಕೋಟಿ’ ನೋಡಿದ ಪ್ರೇಕ್ಷಕರು ಕೂಡ ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಕುಟುಂಬ ಸಮೇತ ಈ ಸಿನಿಮಾವನ್ನು ನೋಡಬಹುದು ಅಂತ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ‘ಕೋಟಿ’ ಸಿನಿಮಾದ ಸರ್ಪ್ರೈಸಿಂಗ್ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅದೇನಂದರೆ, ಪ್ರಮುಖ ಪಾತ್ರದಲ್ಲಿ ಡಾಲಿ ಧನಂಜಯ್ ಜೊತೆ ದುನಿಯಾ ವಿಜಯ್ ಕೂಡ ಕಾಣಿಸಿಕೊಂಡಿದ್ದಾರೆ. ‘ಕೋಟಿ’ ಸಿನಿಮಾದಲ್ಲಿನ ದುನಿಯಾ ವಿಜಯ್ ಪಾತ್ರದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಪರಮೇಶ್ವರ್ ಗುಂಡ್ಕಲ್ ನಿರ್ದೇಶಿಸಿದ ಮೊದಲ ಸಿನಿಮಾ ‘ಕೋಟಿ’ಯಲ್ಲಿ ದುನಿಯಾ ವಿಜಯ್ ಎಂಟ್ರಿ ಪ್ರೇಕ್ಷಕರಿಗೆ ಕಿಕ್ ಕೊಟ್ಟಿದೆ. ಧನಂಜಯ್, ತಾರಾ, ರಮೇಶ್ ಇಂದಿರಾ ಕಾಂಬಿನೇಷನ್ ಸಿನಿಮಾದಲ್ಲಿ ಎಂಗೇಜಿಂಗ್ ಆಗಿದೆ. ಇದರ ಜೊತೆನೇ ‘ಕೋಟಿ’ಯ ಕ್ಲೈಮ್ಯಾಕ್ಸ್ ನೋಡಿ ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ. ಜೊತೆಗೆ ‘ದುನಿಯಾ ವಿಜಯ್’ ವಿಶೇಷ ಪಾತ್ರ ಪ್ರೇಕ್ಷಕರಿಗೆ ಕಿಕ್ ಕೊಡಲು ಶುರು ಮಾಡಿದೆ.