ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನಟಿಯರ ವಸ್ತçಧಾರಣೆ ಬಗ್ಗೆ ತೆಲುಗು ನಟ ಶಿವಾಜಿ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು ಗೊತ್ತೇಯಿದೆ. ಈ ಬಗ್ಗೆ ಕೆಲ ನಟಿಯರು ಪ್ರತಿಕ್ರಿಯಿಸಿ ಆಕ್ರೋಶ ಹೊರ ಹಾಕಿದ್ದರು. ನಟಿ ಅನಸೂಯ ಭಾರಧ್ವಜ್ ಹಾಗೂ ಗಾಯಕಿ ಚಿನ್ಮಯಿ ಈ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಶಿವಾಜಿ ಬಳಸಿದ್ದ ಕೆಲ ಪದಗಳ ಬಗ್ಗೆ ಮಹಿಳಾ ಆಯೋಗಕ್ಕೆ ದೂರು ದಾಖಲಾಗಿತ್ತು. ಬಳಿಕ ಅವರು ಕ್ಷಮೆ ಕೇಳಿದ್ದರು.
ಕೆಲ ನಟಿಯರು ಶಿವಾಜಿ ವಾದವನ್ನು ಒಪ್ಪಿಕೊಂಡಿದ್ದರು. ಮತ್ತೆ ಕೆಲವರು ಮಹಿಳೆಯರು ಯಾವ ರೀತಿಯ ಬಟ್ಟೆ ಧರಿಸಬೇಕು ಎನ್ನುವುದು ಅವರಿಷ್ಟ. ಈ ಬಗ್ಗೆ ಯಾರ್ಯಾರೊ ಮಾತನಾಡುವುದು ಬೇಡ ಎಂದಿದ್ದರು. ಇದೇ ವಿಚಾರದ ಬಗ್ಗೆ ನಟಿ ರಾಶಿ ಖನ್ನಾ ಪ್ರತಿಕ್ರಿಯಿಸಿದ್ದಾರೆ. ಪವನ್ ಕಲ್ಯಾಣ್ ಜೊತೆ ರಾಶಿ ನಟಿಸಿರುವ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾ ಪ್ರಚಾರದಲ್ಲಿ ಆಕೆ ಬ್ಯುಸಿಯಾಗಿದ್ದಾರೆ.
ದೆಹಲಿ ಬೆಡಗಿ ರಾಶಿ ಖನ್ನಾ ಸೌತ್ ಸಿನಿಮಾಗಳಲ್ಲಿ ಒಳ್ಳೆ ಅವಕಾಶ ಗಿಟ್ಟಿಸಿಕೊಂಡವರು. ಆದರೆ ದೊಡ್ಡಮಟ್ಟದಲ್ಲಿ ಬ್ರೇಕ್ ಸಿಗಲೇ ಇಲ್ಲ. ಸ್ಟಾರ್ ನಟರ ಜೊತೆಗೆ ಮಿಂಚಿದರೂ ಪ್ರಯೋಜನವಾಗಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಅವಕಾಶಗಳು ಸಿಗಲಿಲ್ಲ. `ಉಸ್ತಾದ್ ಭಗತ್ ಸಿಂಗ್’ ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿ ನಟಿಸಿದ್ದಾರೆ. ಮತ್ತೊಬ್ಬ ನಾಯಕಿಯಾಗಿ ರಾಶಿ ಮಿಂಚಿದ್ದಾರೆ. ಸಿನಿಮಾ ಪ್ರಚಾರದ ಭಾಗವಾಗಿ ಕೆಲ ಸಂದರ್ಶನಗಳಲ್ಲಿ ನಟಿ ರಾಶಿ ಖನ್ನಾ ಭಾಗಿ ಆಗುತ್ತಿದ್ದಾರೆ. ಅದೇ ರೀತಿ ಸಂದರ್ಶನವೊAದರಲ್ಲಿ “ಇತ್ತೀಚೆಗೆ, ನಾಯಕಿಯರ ಉಡುಗೆ ತೊಡುಗೆಯ ಬಗ್ಗೆ ವಿವಾದ ಉಂಟಾಗಿದೆ. ಅದರ ಬಗ್ಗೆ ನಿಮ್ಮ ಅಭಿಪ್ರಾಯವೇನು?” ಎಂಬ ಪ್ರಶ್ನೆ ಎದುರಾಗಿದೆ. ಯಾವ ರೀತಿಯ ಬಟ್ಟೆ ಧರಿಸಬೇಕು ಎನ್ನುವುದು ಮಹಿಳೆಯರ ಇಷ್ಟ, ಬಟ್ಟೆಯ ವಿಚಾರದಲ್ಲಿ ನಿಮಗೇನು ಸಮಸ್ಯೆ ಎಂದು ಮರುಪ್ರಶ್ನೆ ಹಾಕಿದ್ದಾರೆ. ಈ ವಿಡಿಯೋ ವೈರಲ್ ಆಗ್ತಿದೆ.
“ಡ್ರೆಸ್ಸಿಂಗ್ ವಿಚಾರದಲ್ಲಿ ಧರಿಸುವ ಮಹಿಳೆಗೆ ಕಂಫರ್ಟ್ ಆಗಿ ಇದ್ರೆ ಸಾಕು. ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಆ ಮಹಿಳೆ ಕಂಫರ್ಟ್ ಆಗಿ ಇದ್ದಾಳೆ ತಾನೆ. ನಿಮಗೆ ಸಮಸ್ಯೆ ಏನು?, ನಿಮಗೆ ಕಷ್ಟ ಯಾಕೋ ಗೊತ್ತಿಲ್ಲ. ಇಂಡಿಯನ್ ಆಗಿರಲಿ, ವೆಸ್ಟರ್ನ್ ಆಗಿರಲಿ. ಯಾವ ರೀತಿಯ ಬಟ್ಟೆ ಧರಿಸಬೇಕು ಎನ್ನುವುದು ಮಹಿಳೆ ಇಷ್ಟ” ಎಂದು ರಾಶಿ ಖನ್ನಾ ಹೇಳಿರುವುದು ವೈರಲ್ ಆಗ್ತಿದೆ.
ಏನ್ ನಿಮ್ ಪ್ರಾಬ್ಲಂ?; ರಾಶಿ ಖನ್ನಾ



