ತಿ.ನರಸೀಪುರ: ಮನುಷ್ಯ ಯಾವಾಗ ಧರ್ಮದ ಹಾದಿಯಲ್ಲಿ ನಡೆಯುತ್ತಾನೋ, ಧರ್ಮವನ್ನು ಸರಿಯಾಗಿ ಅರ್ಥೈಸಿಕೊಂಡು ಅದನ್ನು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾನೋ ಆಗ ಮಾತ್ರವೇ ಆತನ ಕಷ್ಟ, ಸಮಸ್ಯೆಗಳು ದೂರವಾಗಲು ಸಾಧ್ಯ ಎಂದು ಶ್ರೀ ಶೈಲ ಪೀಠದ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ತಿಳಿಸಿದರು.
ತಾಲ್ಲೂಕಿನ ಮುಡುಕುತೊರೆ ತೋಪಿನ ಮಠದಲ್ಲಿ ಶ್ರೀ ಶೈಲ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ, ಶ್ರೀ ಮಹಾಲಿಂಗಸ್ವಾಮಿಗಳವರ 3ನೇ ವರ್ಷದ ಸ್ಮರಣೋತ್ಸವ ಕಾರ್ಯಕ್ರಮ ಮತ್ತು ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದ ಅವರು ಮನುಷ್ಯನಿಗೆ ಜೀವನದಲ್ಲಿ ಅನೇಕ ಕಷ್ಟ, ಸಮಸ್ಯೆಗಳು ಬರುತ್ತವೆ. ಎಲ್ಲ ಸಮಸ್ಯೆಗಳಿಗೆ ಧರ್ಮ ಎಂಬುದು ಮಾತ್ರವೇ ಪರಿಹಾರ ಸೂಚಿಸುತ್ತದೆ. ಮನುಷ್ಯ ಧರ್ಮ ಎನ್ನುವ ಅಮೃತವನ್ನು ಸೇವಿಸಿ ಸುಖಿಗಳಾಗಬೇಕು ಎಂದರು.
ಮೌಲ್ಯಾಧಾರಿತ, ವಿಚಾರಾತ್ಮಕವಾಗಿರುವ ಧರ್ಮ ಎಂದರೆ ಅಹಿಂಸಾ ಮಾರ್ಗದಿಂದರಿರುವುದು. ಯಾರಿಗೆ ಯಾವುದೇ ರೀತಿಯಾದ ಹಿಂಸೆ,ಕಷ್ಟವನ್ನು ಕೊಡದೇ ಇರುವಂತಹದ್ದು, ಇನ್ನೊಬ್ಬರಿಗೆ ಅಪಕಾರ ಮಾಡಬಾರದು, ನೀವು ಯಾರಿಗಾದರೂ ಕೆಟ್ಟದ್ದನ್ನು ಬಯಸಿದರೆಂದರೆ, ಅವರಿಗೆ ಕೆಟ್ಟದ್ದಾಗುತ್ತೋಇಲ್ಲವೋ ಆದರೆ ನಿಮಗೆ ಮಾತ್ರ ಕೆಟ್ಟದಾಗುತ್ತದೆ.ನಾವು ಒಳ್ಳೆಯದನ್ನು ಮಾಡಿದಾಗ ಮಾತ್ರ ಒಳ್ಳೆಯದನ್ನು ಪಡೆಯಬಹುದಾಗಿದೆ ಎಂದರು.
ತೋಪಿನ ಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ತೋಪಿನಮಠದೊಂದಿಗೆ ಎಲ್ಲಾ ಮಠಗಳು ಸಹಕರಿಸಿ ಮತ್ತಷ್ಟು ಧಾರ್ಮಿಕ ಕಾರ್ಯಕ್ರಮ ನಡೆಯಲು ಅವರೊಂದಿಗೆ ಕೈ ಜೋಡಿಸಬೇಕೆಂದು ಹೇಳಿದರು.ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮುಡುಕುತೊರೆ ತೋಪಿನಮಠದ ಶ್ರೀ ಮಲ್ಲಿಕಾ ರ್ಜುನ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಕನಕಪುರ ಮರಳೇ ಗವಿಮಠದ ಮುಮ್ಮಡಿ ಶಿವರುದ್ರ ಮಹಾಸ್ವಾಮಿ, ಚಂದೂಪುರ ಹೊನ್ನಲಗೆರೆ ರೇಣುಕಾಶ್ರಮದ ಶಿವಲಿಂಗ ಶಿವಾಚಾರ್ಯ ಸ್ವಾಮಿ,
ಧನಗೂರು ವೀರ ಸಿಂಹಾಸನ ಮಠದ ಮುಮ್ಮಡಿ ಷಡಕ್ಷರಿ ದೇಶಿಕೇಂದ್ರ ಶಿವಾ ಚಾರ್ಯ ಸ್ವಾಮಿಗಳು, ತಲಕಾಡು ಡಾ.ಸಿದ್ದಮಲ್ಲಿ ಕಾರ್ಜುನ ಶಿವಾಚಾರ್ಯ ಸ್ವಾಮಿ, ಪರಿಣಾಮಿಪುರ ಮಠದ ಗುರುಸಿದ್ದ ಸ್ವಾಮಿಗಳು, ಚಿದರವಳ್ಳಿ ಗವಿಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ದೊಡ್ಡ ಬೂಹಳ್ಳಿ ಶಿವಪ್ಪ ಸ್ವಾಮಿಗಳು, ಮುಡುಕನಪುರ ಹಲವಾರ ಮಠದ ಷಡಕ್ಷರ ಸ್ವಾಮಿ, ಮೇದನಿ ಮಠದ ಶಿವಲಿಂಗಸ್ವಾಮಿ, ಮಾಡ್ರಹಳ್ಳಿ ಪಟ್ಟದ ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿ, ಸೋಸಲೆ ತೋಪಿನ ಮಠದ ಇಮ್ಮಡಿ ಷಡಕ್ಷರ ಸ್ವಾಮಿಗಳು, ಶಾಸಕ ಶ್ರೀವತ್ಸ, ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ,
ಬಿಜೆಪಿ ಮುಖಂಡ ಡಾ.ರೇವಣ್ಣ, ತಾಯೂರು ವಿಠಲಮೂರ್ತಿ, ರೇಣುಕಾ ಪ್ರಸಾದ್, ವಕೀಲ ತೊಟ್ಟವಾಡಿ ಮಹದೇವಸ್ವಾಮಿ, ಸಹಕಾರ ಹಾಲು ಮಹಾ ಮಂಡಲ ನಿರ್ದೇಶಕ ಎಂ.ನಂಜುಂಡಸ್ವಾಮಿ, ಮೈಮುಲ್ ಮಾಜಿ ನಿರ್ದೇಶಕ ಎಸ್.ಸಿ.ಆಶೋಕ್, ವೀರಶೈವ ಸಮಾಜದ ಅಧ್ಯಕ್ಷ ಎಸ್. ಶಾಂತರಾಜು (ಜಿಪ್ಪಿ ), ವೀರಶೈವ ಮಹಾಸಭಾಧ್ಯಕ್ಷ ತೊಟ್ಟವಾಡಿ ಮಹಾದೇವಸ್ವಾಮಿ, ಕಸಬಾ ಪಿಎಸಿಸಿಎಸ್ ನಿರ್ದೇಶಕ ಅಂಗಡಿ ಎನ್. ಶೇಖರ್, ಫ್ಯಾನ್ಸಿ ಮೋಹನ್, ಅಕ್ಕಿ ನಾಗಪ್ಪ, ನಾಗೇಶ್, ಮತ್ತಿತರರು ಹಾಜರಿದ್ದರು.