ಏಷ್ಯಾ ಕಪ್ ಫೈನಲ್ ಪಂದ್ಯದ ವೇಳೆ ಗಾಯಗೊಂಡಿದ್ದ ಭಾರತದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಗಾಯದಿಂದ ಚೇತರಿಸಿಕೊಂಡಿದ್ದು ನವೆಂಬರ್ ಡಿಸೆAಬರ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಕಣಕ್ಕಿಳಿಯುವ ನಿರೀಕ್ಷೆಯಿದೆ. ಟಿ೨೦ ಮಾದರಿಯಲ್ಲಿ ಆಡಲಾಗಿದ್ದ ಏಷ್ಯಾಕಪ್ ಟೂರ್ನಿಯಲ್ಲಿ ಎಡಗಾಲಿನ ಗಾಯಕ್ಕೆ ತುತ್ತಾಗಿದ್ದ ಅವರು ದುಬೈ ಅಂತಾರಾಷ್ಟಿçÃಯ ಕ್ರೀಡಾAಗಣಧಲ್ಲಿ ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯವನ್ನು ತಪ್ಪಿಸಿಕೊಂಡಿದ್ದರು. ಗಾಯದಿAದ ಚೇತರಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ಅವರು ಬೆಂಗಳೂರಿನ
ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ (CoE) ನಲ್ಲಿ ಒಂದು ತಿಂಗಳ ಕಾಲ ತರಬೇತಿ ಪಡೆಯುತ್ತಿದ್ದಾರೆ. ಜಿಮ್ ಸೆಷನ್ಗಳಲ್ಲಿ ಭಾಗವಹಿಸುತ್ತಿರುವ ಅವರು ಅವರು, ದಕ್ಷಿಣ ಆಫ್ರಿಕಾ ವಿರುದ್ಧದ ವೈಟ್-ಬಾಲ್ ಸರಣಿಯಲ್ಲಿ ಆಡುವ ಸಾಧ್ಯತೆ ಇದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ನವೆಂಬರ್ ೧೪ರಿಂದ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಆ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ನವೆಂಬರ್ ೩೦ ರಂದು ರಾಂಚಿಯಲ್ಲಿ ಆರAಭವಾಗಲಿದೆ. ಇದಾದ ಬಳಿಕ ಡಿಸೆಂಬರ್ ೯ ರಂದು ಕಟಕ್ನಲ್ಲಿ ಐದು ಪಂದ್ಯಗಳ ಟಿ೨೦ಐ ಸರಣಿಗೆ ಚಾಲನೆ ಸಿಗಲಿದೆ. ಹಾರ್ದಿಕ್ ಪಾಂಡ್ಯ ಅವರು ನವೆಂಬರ್ ೨೧ ರಂದು ದೀಪಾವಳಿ ರಜೆ ಮುಗಿಸಿ ಬೆಂಗಳೂರಿನ ಅoಇ ಗೆ ವರದಿ ಮಾಡಿಕೊಂಡಿದ್ದಾರೆ. ಅಲ್ಲಿ ಅವರು ಒಂದು ತಿAಗಳ ಕಾಲ ತರಬೇತಿ ಪಡೆಯಲಿದ್ದಾರೆ. ೩೨ರ ಹರೆಯದ ಹಾರ್ದಿಕ್
ಪಾಂಡ್ಯ ಅವರು ೯೪ ಏಕದಿನ ಪಂದ್ಯಗಳಿAದ ೧೯೦೪ ರನ್ ಗಳಿಸಿದ್ದು ೯೧ ವಿಕೆಟ್ ಗಳಿಸಿದ್ದಾರೆ.
ಅಂತಾರಾಷ್ಟಿçÃಯ ಟಿ೨೦ ಮಾದರಿಯಲ್ಲಿ ೧೨೦ ಪಂದ್ಯಗಳಿAದ ೧೮೬೦ ರನ್ ಪೇರಿಸಿದ್ದು ಮತ್ತು ೯೮ ವಿಕೆಟ್ ಕಿತ್ತಿದ್ದಾರೆ. ರೆಡ್ ಬಾಲ್ ಕ್ರಿಕೆಟ್ ನಲ್ಲಿ ಆಡಿರುವುದು ಅವರು ಕೇವಲ
೧೧ ಪಂದ್ಯವಾಗಿದ್ದರೂ ಒಟ್ಟಾರೆ ೫೩೨ ರನ್ ಗಳಿಸಿದ್ದು ೧೭ ವಿಕೆಟ್ ಉರುಳಿಸಿದ್ದಾರೆ. ಈ ಬಗ್ಗೆ ಗುರುವಾರ ಎಕ್ಸ್ ಪೋಸ್ಟ್ ಮಾಡಿರುವ ಅವರು, “ನಾನು ಈಗ ಚೇತರಿಸಿಕೊಳ್ಳುತ್ತಿದ್ದು ಮತ್ತು ಪ್ರತಿ ದಿನವೂ ಸುಧಾರಣೆ ಕಾಣುತ್ತಿದ್ದೇನೆ. ನನಗೆ ಬಂದಿರುವ ಎಲ್ಲಾ ಶುಭ ಹಾರೈಕೆಗಳು ಮತ್ತು ಬೆಂಬಲಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ – ಇದು ನಿಜವಾಗಿಯೂ ನನಗೆ
ಬಹಳಷ್ಟು ಅರ್ಥವಾಗಿದೆ. ನನ್ನನ್ನು ನಿಮ್ಮ ಚಿಂತನೆಗಳಲ್ಲಿ ಇರಿಸಿದ್ದಕ್ಕಾಗಿ ಧನ್ಯವಾದಗಳು,” ಎಂದು ತಿಳಿಸಿದ್ದಾರೆ.



