ಬೆಂಗಳೂರು: ವೈದ್ಯರು ನಿನ್ನೆ ರಾತ್ರಿ ವಾಯು ವಿಹಾರಕ್ಕೆ ಹೋಗಿ ಬರುವಷ್ಟರೊಳಗೆ ಅಪರಿಚಿತ ವ್ಯಕ್ತಿಗಳು ಮನೆನೆಯ ಬಾಗಿಲು ಮುರಿದು ಒಳ ನುಗ್ಗಿ ಮೊದಲನೇ ಮಹಡಿಯಲ್ಲಿದ್ದ ಚಿನ್ನಾಭರಣ ದೋಚಿಕೊಂಡು ಪರಾರಿಯಾಗುವ ಸಂದರ್ಭದಲ್ಲಿ ವೈದ್ಯರು ಎದುರಾದಾಗ ವೈದ್ಯರನ್ನು ಹಿಡಿದು ರೂಮಿನಲ್ಲಿ ಕೂಡಿಹಾಕಿ baya baya ಎಂದು ಕಿರುಚಿಕೊಂಡು, ಗಾಬರಿಗೊಂಡು ಪಿಸ್ತೂಲ್ ತೋರಿಸಿ ಹೆದರಿಸಿ ಪರಾರಿಯಾಗಿರುವ ಘಟನೆ ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ವರದಿಯಾಗಿದೆ.
ಕೇವಲ 50 ದಿನಗಳಲ್ಲಿ ಕೊಡಿಗೆಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಎರಡನೇ ಬಾರಿಗೆ ಪಿಸ್ತೂಲ್ ತೋರಿಸಿ ದರೋಡೆ ನಡೆದಿರುವ ಘಟನೆ ವರದಿಯಾಗಿದೆ.
ಕೊಡಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾವೇರಿ ಶಾಲೆ ಹಿಂಭಾಗ ವಾಸವಾಗಿರುವ ವೈದ್ಯ ಉಮಾಶಂಕರ್. ಡಿ. ರವರ ಮನೆಯಲ್ಲಿ ಈ ದುರ್ಘಟನೆ ಸಂಭವಿಸಿರುತ್ತದೆ. ಸುಮಾರು ನಾಲ್ಕು ಜನ ಅಪರಿಚಿತರು ದರೋಡೆ ಮಾಡಿಕೊಂಡು ಪರಾರಿಯಾಗಿರುತ್ತಾರೆ. ಸುಮಾರು ಅಂದಾಜು 40 ಲಕ್ಷ ರೂ ಬೆಲೆ ಬಾಳುವ ಚಿನ್ನಾಭರಣ ಮತ್ತು ನಗದು ದೋಚಿರುತ್ತಾರೆ ಎಂದು ದೂರು ದಾಖಲಾಗಿರುತ್ತದೆ.
ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿರುತ್ತಾರೆ. ಅಂತರೋಡೆಕೋರರು ಉತ್ತರ ಪ್ರದೇಶ ರಾಜ್ಯದ ಮೂಲದವರೆಂದು ಅನುಮಾನಿಸಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮಿ ಪ್ರಸಾದ್ ರವರು ತಿಳಿಸಿರುತ್ತಾರೆ