ಚಿತ್ರಕಲಾ ಶಿಕ್ಷಕರಿಗೆ ವೇದಿಕೆಯಾದ ಗಾಂಧಿ ಆವರಣ ಅದಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಬೆಂಗಳೂರಿನ ಶಕ್ತಿ ಕೇಂದ್ರ ವಿಧಾನಸೌಧ ಆವರಣದಲ್ಲಿರುವ ಗಾಂಧಿ ಪುತ್ತಳಿ ಎದುರು ಗದಗ ಜಿಲ್ಲಾ ಚಿತ್ರಕಲ ಶಿಕ್ಷಕರ ಸಂಘದ ಕಲಾವಿದರ ಕಲಾಕೃತಿಗಳಿಗೆ ವೇದಿಕೆ ನೀಡಲಾಗಿದೆ. ಪಂಚಾಕ್ಷರಯ್ಯ ಎಸ್ ಹಿರೇಮಠ ಅವರು ಚಿತ್ರ ಪ್ರದರ್ಶನದ ಉಸ್ತುವಾರಿ ಹೊತ್ತಿದ್ದಾರೆ. ಸಚಿವರು, ಶಾಸಕರು, ಅಧಿಕಾರಿಗಳು ಆದಿಯಾಗಿ ಪರಿಷತ್ತಿನ ಕಲಾಪಗಳನ್ನು ವೀಕ್ಷಿಸಲು ಆಗಮಿಸುತ್ತಿರುವ ಅನೇಕ ಶಾಲೆಗಳ ವಿದ್ಯಾರ್ಥಿಗಳು ಈ ಪ್ರದರ್ಶನವನ್ನು ಕಣ್ಣು ತುಂಬಿಕೊಳ್ಳುತ್ತಿದ್ದಾರೆ.



