ಹನೂರು: ತಾಲ್ಲೂಕಿನ ಒಡೆಯರ ಪಾಳ್ಯ, ಪಿ.ಜಿ. ಪಾಳ್ಯ ಬೈಲೂರು ಮಾರ್ಗವಾಗಿ ಸಂಚರಿಸುವ ಕೆಎಸ್ಆರ್ಟಿಸಿ ಬಸ್ಗಳು ನಿಗದಿತ ಸಮಯಕ್ಕೆ ಬಾರದೇ ಇರುವುದರಿಂದ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ.
ಕಳೆದ ಹತ್ತು ದಿನಗಳಿಂದ ಲೊಕ್ಕನ ಹಳ್ಳಿ ಒಡೆಯರ್ ಪಾಳ್ಯ ಮಾರ್ಗವಾಗಿ ಹನೂರು ತಾಲೂಕಿನ ಬೈಲೂರಿ ಗ್ರಾಮಕ್ಕೆ ಸಂಚರಿಸುತ್ತಿರುವ ಸಾರಿಗೆ ಬಸ್ ಬಾರದ ಪರಿಣಾಮ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತುಂಬಾ ತೊಂದರೆ ಪಡುವಂತಾಗಿದೆ ಇದರಿಂದ ನಿಗದಿತ ಸಮಯಕ್ಕೆ ಶಾಲಾ ಕಾಲೇಜುಗಳಿಗೆ ಹೋಗಲಾರದೆ ನೂರಾರು ವಿದ್ಯಾರ್ಥಿಗಳು ಪಾಠಗಳಿಂದ ವಂಚಿತರಾಗಿದ್ದು ಭವಿಷ್ಯದಲ್ಲಿ ಶೈಕ್ಷಣಿಕ ಹಿನ್ನಡೆ ಅನುಭವಿಸುವಂತಾಗುವ ಸಾಧ್ಯತೆ ಇದೆ.
ಹನೂರು ತಾಲ್ಲೂಕಿನಲ್ಲಿ ವಿದ್ಯಾರ್ಥಿಗಳ ಗೋಳು ಕೇಳೋರು ಯಾರು?: ಸರಿಯಾದ ಸಮಯಕ್ಕೆ ವಿದ್ಯಾರ್ಥಿಗಳಿಗೆ ಬಸ್ಸ್ ವ್ಯವಸ್ಥೆ ಕಲ್ಪಿಸುವಲ್ಲಿ ಕೆ ಎಸ್ ಆರ್ ಟಿ ಸಿ ಅಧಿಕಾರಿ ಎಡುವುದಿದ್ದು , ಹಾಗಾಗಿ ವಿದ್ಯಾರ್ಥಿಗಳು ಹನೂರು ತಾಲ್ಲೂಕಿನಲ್ಲಿ ಆಗಾಗ ಪ್ರತಿಭಟನೆಗಳು ಸಹ ನಡೆಯುತ್ತಿರುತ್ತಾರೆ ಆದರೆ ಪತ್ರಿಭಟನೆ ವೇಳೆ ಸಮರ್ಪಕ ಬಸ್ಸ್ ಪೂರೈಸುತ್ತವೆ ಎಂದು ಭರವಸೆ ನೀಡಿ ಕೆಲ ಕಾಲ ಸಮರ್ಪಕವಾಗಿ ಬಸ್ಸ್ ಬಿಡಲಾಗುತ್ತದೆ ಆದರೆ ಅದೂ ಅಲ್ಪಾವಧಿ ಗಷ್ಟೇ ಸೀಮಿತ ವಾಗಿದೆ.
ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹನೂರು ತಾಲೂಕು ಜಿಲ್ಲೆಯಲ್ಲಿ ಕಡೆಯ ಸ್ಥಾನವನ್ನು ಪಡೆದಿದ್ದು ಕಾಡಂಚಿನ ಮಕ್ಕಳಿಗೆ ಸರಿಯಾದ ಸಮಯಕ್ಕೆ ಬಸ್ ಬಾರದೆ ಇರುವ ಕಾರಣ ತರಗತಿಗಳಿಗೆ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದು ಈ ಕಾರಣವೂ ಸಹ ಹನೂರು ತಾಲೂಕು ಕಡೆಯ ಸ್ಥಾನವನ್ನು ಪಡೆಯುವುದಕ್ಕೆ ಒಂದು ಕಾರಣವಾಗಿರಬಹುದು ಎಂದು ಪ್ರಜ್ಞಾವಂತ ನಾಗರಿಕರು ತಿಳಿಸಿದ್ದಾರೆ.