This is the title of the web page
This is the title of the web page

ಇಂದು ಗುಜರಾತ್-ಮುಂಬೈ ನಡುವೆ ಫೈಟ್ ಫೈನಲ್ ಟಿಕೆಟ್ ಯಾರಿಗೆ?

ಅಹಮ್ಮದಾಬಾದ್: ಐಪಿಎಲ್ 2023 ರ ಫೈನಲ್ ತಲುಪುವ ಎರಡನೇ ತಂಡ ಯಾವುದು ಎಂದು ಇಂದು ನಿರ್ಧಾರವಾಗಲಿದೆ. ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವೆ ಇಂದು ಕ್ವಾಲಿಫೈಯರ್ ಪಂದ್ಯ ನಡೆಯಲಿದೆ.ಪ್ಲೇ ಆಫ್ ಗೇರಿದ್ದ ಗುಜರಾತ್ ಟೈಟನ್ಸ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು ಅನುಭವಿಸಿತ್ತು.

ಆದರೆ ಗುಜರಾತ್ ಈ ಟೂರ್ನಿಯುದ್ದಕ್ಕೂ ತನ್ನ ಹಾಲಿ ಚಾಂಪಿಯನ್ ಪಟ್ಟಕ್ಕೆ ತಕ್ಕ ಆಟವಾಡಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲೂ ಅದೇ ಪ್ರದರ್ಶನ ಕಾಯ್ದುಕೊಳ್ಳುವ ವಿಶ್ವಾಸದಲ್ಲಿದೆ. ಹಾರ್ದಿಕ್ ಪಾಂಡ್ಯ, ಶುಬ್ಮನ್ ಗಿಲ್, ರಶೀದ್ ಖಾನ್, ಗುಜರಾತ್ ಶಕ್ತಿ. ಜೊತೆಗೆ ತವರಿನ ಬಲವೂ ಇದೆ. ಇನ್ನು, ಮುಂಬೈ ಇಂಡಿಯನ್ಸ್ ಆರಂಭದಲ್ಲಿ ಕೊಂಚ ಮಂಕಾಗಿದ್ದರೂ ನಾಲ್ಕನೇ ತಂಡವಾಗಿ ಪ್ಲೇ ಆಫ್ ಹಂತಕ್ಕೇರಿ ಇದೀಗ ಭರ್ಜರಿ ಪ್ರದರ್ಶನ ನೀಡುತ್ತಿದೆ.

ಅದರಲ್ಲೂ ತಂಡದ ವೇಗಿ ಆಕಾಶ್ ಮಧ?ವಾಲ್ ಪ್ರದರ್ಶನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಜೊತೆಗೆ ಕ್ಯಾಮರೂನ್ ಗ್ರೀನ್ ಎಲ್ಲಾ ಪಂದ್ಯಗಳಲ್ಲೂ ಉಪಯುಕ್ತ ಬ್ಯಾಟಿಂಗ್ ನಡೆಸಿದ್ದಾರೆ. ರೋಹಿತ್, ಯಾದವ್ ರಂತಹ ಬಿಗ್ ಹಿಟ್ಟರ್ ಗಳು ಸಿಡಿದರೆ ಮುಂಬೈ ಕಟ್ಟಿ ಹಾಕಲಾಗದು. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗುವುದು.