ಮಾಲೂರು: ಕನ್ನಡಿಗರಿಗೆ ಕಾವೇರಿ ನೀರು ಕೊಡುವುದಿಲ್ಲ ಎಂದು ಘೋಷಣೆ ಮಾಡಿರುವ ತಮಿಳುನಾಡಿನ ಸ್ಟಾಲಿನ್ ಅವರಿಗೆ ಬುದ್ಧಿ ಕಲಿಸುವ ನಿಟ್ಟಿನಲ್ಲಿ ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ತಮಿಳುನಾಡಿಗೆ ಪಾಠ ಕಲಿಸಬೇಕೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.
ಮಾಲೂರಿನಲ್ಲಿ ನಡೆದ ಜೆಡಿಎಸ್ ಬಿಜೆಪಿ ಮೈತ್ರಿಕೂಟದ ಪ್ರಚಾರ ಸಭೆಯಲ್ಲಿ ಮಾತನಾಡಿ, ಸ್ಟಾಲಿನ್ ಅವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಮೇಕೆದಾಟು ಯೋಜನೆ ಕಟ್ಟಲು ಬಿಡುವುದಿಲ್ಲವೆಂದು ಹೇಳಿದ್ದಾರೆ. ಆದರೆ, ರಾಜ್ಯದಲ್ಲಿ 28 ಸ್ಥಾನಗಳನ್ನು ಮೈತ್ರಿಕೂಟ ಗೆಲ್ಲುವ ಮೂಲಕ ಮಾಲೂರಿಗೆ ಮೇಕೆದಾಟು ಅಥವಾ ಕೃಷ್ಣ ನದಿಯಿಂದ ಕುಡಿಯುವ ನೀರು ತರಬೇಕಾಗಿದೆ ಎಂದರು.
ಮೈತ್ರಿಕೂಟದಲ್ಲಿ ಸ್ವಂತ ಬಲದಿಂದ ಬಿಜೆಪಿ ಕಟ್ಟಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಇಂಡಿಯಾದಲ್ಲಿ ಮೋದಿಯನ್ನು ತಡೆಗಟ್ಟುವ ನಾಯಕ ಯಾರಿದ್ದಾರೆ ಎಂದು ದೇವೇಗೌಡ್ರು ಪ್ರಶ್ನಿಸಿದರು.ಇಂಡಿಯಾದಲ್ಲಿ ಒಟ್ಟಾಗಿರುವ 28 ರಾಜಕೀಯ ಪಕ್ಷಗಳಲ್ಲಿ ಪ್ರಧಾನಿ ಅಭ್ಯರ್ಥಿ ಯಾರಿದ್ದಾರೆ, ಕನಿಷ್ಠ ಅವರಿಗೆ ನಾಯಕನನ್ನು ಗುರುತಿಸಲು ಇನ್ನೂ ಆಗಿಲ್ಲ ಎಂದು ದೇವೇಗೌಡ್ರು ಲೇವಡಿ ಮಾಡಿದರು
ರಾಹುಲ್ ಗಾಂಧಿ ಅವರು ಕೋಲಾರದಲ್ಲಿ ಮಾಡಿದ ಭಾಷಣದ ಬಗ್ಗೆ ನಾನು ವ್ಯಾಖ್ಯಾನ ಮಾಡುವುದಿಲ್ಲ. ಓವರ್ ಸ್ವೀಟ್ ನಿಂದ ಆಗಿದೆ ಎಂದು ಹೇಳಲು ಬಯಸಿ.
91ನೇ ವಯಸ್ಸಿನಲ್ಲಿ ನಾನು ಯಾವುದೇ ಆಕಾಂಕ್ಷೆಯಿಂದ ಪ್ರಧಾನಿ ಮೋದಿಯವರಿಗೆ ಬೆಂಬಲ ಕೊಟ್ಟಿಲ್ಲ. ಚೀನಾ ಮತ್ತು ರಷ್ಯಾ ದೇಶಗಳು ಹೇಗೆ ನಡೆದುಕೊಂಡಿವೆ ಎಂದು ನಮಗೆ ಗೊತ್ತಿದೆ ಇದನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಇಂಡಿಯಾ ಕೂಟದಲ್ಲಿ ಯಾರಿಗಿದೆ? ದೇಶವನ್ನು ಆಳುವ ಸಾಮರ್ಥ್ಯ ಕೇವಲ ಮೋದಿಯವರಿಗೆದೆ.
ಹೀಗಾಗಿ ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳನ್ನು ಮೋದಿ ಅವರಿಗೆ ಗೆಲ್ಲಿಸಿಕೊಡುವ ಮೂಲಕ ಅವರನ್ನು ಪ್ರಧಾನಿ ಮಾಡಲು ಮುಂದಾಗೋಣ. ತಮಿಳುನಾಡಿನವರು ಇಷ್ಟು ದಿನ 40 ಸ್ಥಾನಗಳನ್ನು ಗೆದ್ದುಕೊಂಡು ಆಟ ಆಡಿದರು, ಇದೀಗ ನಾವು 28 ಸ್ಥಾನಗಳನ್ನು ಗೆಲ್ಲಿಸಿ ಕೊಡುವ ಮೂಲಕ ಪ್ರತಿ ತಂತ್ರ ಕೂಡೋಣ. ನನಗಿನ್ನೂ ಎರಡು ವರ್ಷ ರಾಜ್ಯಸಭಾ ಸ್ಥಾನದ ಅವಧಿ ಇದ್ದು 28 ಸ್ಥಾನಗಳನ್ನು ತೆಗೆದುಕೊಂಡು ಹೋಗಿ ಮೋದಿ ಅವರ ಕೈ ಹಿಡಿದು ಮಾಲೂರಿಗೆ ಕುಡಿಯುವ ನೀರನ್ನು ತರುತ್ತೇನೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದರು.
ಈ ಸಂದರ್ಭದಲ್ಲಿ ಸಂಸದ ಎಸ್ ಮುನಿಸ್ವಾಮಿ, ಅರವಿಂದ ಲಿಂಬಾವಳಿ, ಮಾಜಿ ಶಾಸಕರಾದ ಮಂಜುನಾಥಗೌಡ, ಶಾಸಕರಾದ ಸಮೃದ್ಧಿ ಮಂಜುನಾಥ್, ಶಾಸಕ ವೆಂಕಟಶಿವಾರೆಡ್ಡಿ, ಎಂಎಲ್ಸಿ ಇಂಚರ ಗೋವಿಂದರಾಜು, ದಳಪತಿ ರಾಮೇಗೌಡ, ಜೆಡಿಎಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ರಶ್ಮಿ ರಾಮೇಗೌಡ ಇದ್ದರು.