ಮುಂಬರುವ 2024ರ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅದ್ಭುತವಾದ ತಂಡ ಕಟ್ಟಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಜೂನ್ 1 ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್ ಜೂನ್ 29 ರಂದು ಮುಕ್ತಾಯವಾಗಲಿದೆ. ಈಗಾಗಲೇ ಈ ವಿಶ್ವಸಮರಕ್ಕೆ ವಿಶ್ವದ 20 ತಂಡಗಳು ಅಧಿಕೃತಗೊಂಡಿದ್ದು, ವೇಳಾಪಟ್ಟಿಯನ್ನು ಐಸಿಸಿ ಬಿಡುಗಡೆಗೊಳಿಸಿದೆ.
ಆದರೆ ಟೀಮ್ ಇಂಡಿಯಾದಲ್ಲಿ ಯಾರೆಲ್ಲ ಆಟಗಾರರು ಅವಕಾಶ ಪಡೆಯುತ್ತಾರೆ ಎಂಬುದು ಸದ್ಯದ ಕುತೂಹಲ ಮೂಡಿಸಿದೆ.ಏಕೆಂದರೆ ಪ್ರಸ್ತುತ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಅನುಭವಿ ಆಟಗಾರ ಜೊತೆಗೆ ಯುವ ಆಟಗಾರರು ಸಹಾ ಗಮರ್ನಾಹ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಯಾವ ಆಟಗಾರರನ್ನು ಟಿ20 ವಿಶ್ವಕಪ್ನ ತಂಡದಲ್ಲಿ ಆಡಿಸಿದರೆ ಭಾರತ ಚಾಂಪಿಯನ್ ಆಗಬಹುದು ಎಂಬ ಚರ್ಚೆಗಳು ನಡೆಯುತ್ತಿವೆ.
ಈ ಕುರಿತು ಆನೇಕ ಕ್ರಿಕೆಟ್ ದಿಗ್ಗಜರು ತಮ್ಮ ತಮ್ಮ ನೆಚ್ಚಿನ ಆಟಗಾರರ ಸಂಭ್ಯಾವ ತಂಡವನ್ನು ಹೆಸರಿಸಿದ್ದಾರೆ. ಆದರೆ ತಂಡದಲ್ಲಿ ಆಡುವ ಹನ್ನೊಂದು ಜನ ಆಟಗಾರರಲ್ಲಿ ಕೇವಲ ಒಬ್ಬ ಆಟಗಾರ ಮಾತ್ರ ವಿಕೆಟ್ ಕೀಪರ್ ಆಗಬಹುದು. ಈ ವಿಕೆಟ್ ಕೀಪರ್ ಆಯ್ಕೆಯೆ ಇದೀಗ ಬಿಸಿಸಿಗೆ ದೊಡ್ಡ ತಲೆ ನೋವಾಗಿದೆ.
ಅಷ್ಟರ ಮಟ್ಟಿಗೆ 2024ರ ಐಪಿಎಲ್ನಲ್ಲಿ ಈ ಐವರು ವಿಕೆಟ್ ಕೀಪರ್ಗಳು ಬೊಂಬಾಟ್ ಪ್ರದರ್ಶನ ನೀಡುತ್ತಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್, ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಬ್ ಪಂತ್, ಲಕ್ನೋ ಸೂಪರ್ ಜೆಂಟ್ಸ್ ತಂಡದ ನಾಯಕ ಕೆ.ಎಲ್ ರಾಹುಲ್, ದಿನೇಶ್ ಕಾರ್ತಿಕ್ ಹಾಗು ಇಶಾನ್ ಕಿಶನ್ ಟಿ20 ವಿಶ್ವಕಪ್ ಭಾರತ ತಂಡದಲ್ಲಿ ವಿಕೆಟ್ ಕೀಪರ್ ಸ್ಥಾನ ಪಡೆಯುವ ರೇಸ್ನಲ್ಲಿದ್ದಾರೆ.