This is the title of the web page
This is the title of the web page

ರಾಜೀನಾಮೆ ಯಾರು ಕೊಡ್ತಾರೆ? ಡಿ.ಕೆ. ಶಿವಕುಮಾರ್

ಬೆಂಗಳೂರು: ಇಷ್ಟು ದಿನ ಭ್ರಷ್ಟಾಚಾರಕ್ಕೆ ಸಾಕ್ಷಿ ಕೇಳುತ್ತಿದ್ದರು. ಈಗ ಲೋಕಾಯುಕ್ತದವರೇ ಕೊಟ್ಟಿದ್ದಾರೆ. ಈಗ ಯಾರು ರಾಜೀನಾಮೆ ಕೊಡ್ತಾರೆ? ಸಿಎಂ ಕೊಡ್ತಾರಾ? ಸಚಿವರು ಕೊಡ್ತಾರಾ? ನಿಗಮ-ಮಂಡಲಿ ಅಧ್ಯಕ್ಷರು ಕೊಡ್ತಾರಾ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಸಿಎಂ ಬೊಮ್ಮಾಯಿ ಎಲ್ಲದಕ್ಕೂ ಸಾಕ್ಷಿ ಕೇಳುತ್ತಿದ್ದರು. ಕೆಂಪಣ್ಣ 40%, ಮಠಾಧೀಶರು 30%, ವಿಶ್ವನಾಥ್ 20% ಅಂದರು. ಹಿಂದೆ ನಾನು, ಸಿದ್ದರಾಮಯ್ಯ ವಿಧಾನಸೌಧದಲ್ಲಿ ಧರಣಿ ಮಾಡಿದಾಗ ಗೋಡೆ ಬಡಿದೆವು. ಯಾವ ಗೋಡೆ ಕಂಬ ಮುಟ್ಟಿದರೂ ಕಾಸು ಕಾಸು ಅಂತ ಕೇಳಿಸುತ್ತಿತ್ತು. ಎಲ್ಲಿ ನೋಡಿದರೂ ಲಂಚ ಲಂಚ ಎನ್ನುತ್ತಿವೆ.

ಮುಖ್ಯಮಂತ್ರಿಗಳು ರಾಜೀನಾಮೆ ಕೊಟ್ಟರೆ ಆ ಸ್ಥಾನಕ್ಕೆ ಗೌರವ. ಲೋಕಾಯುಕ್ತ ಅಧಿಕಾರಿಗಳೇ ಸಾಕ್ಷಿ ಕೊಟ್ಟಿದ್ದಾರೆ. 10, 20 ಲಕ್ಷಕ್ಕೆಲ್ಲಾ ಇಡಿ, ಐಟಿಯವರು ಬರುತ್ತಾರೆ. ಸಿಎಂ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.