ಕೋಲಾರ: ನಮಗೆ ಎಷ್ಟೇ ಬಲವಿದ್ದರೂ ದೈವ ಬಲವಿಲ್ಲದಿದ್ದರೆ ಸೋಲು ನೋವು ಸಮಸ್ಯೆಗಳು ಗ್ಯಾರಂಟಿ ಕಟ್ಟಿಟ್ಟ ಬುತ್ತಿ. ನಾವು ಎಷ್ಟೇ ಬೆಳೆದಿದ್ದರೂ ದೇವರಿಗೆ ಶರಣಾಗಿ ಸೇವಾ ಮನೋಭಾವದಿಂದ ಎಲ್ಲಾ ದೈವ ಕಾರ್ಯಗಳಲ್ಲೂ ಭಾಗವಹಿಸಿ ಸೇವೆ ಮಾಡಿದರೆ ದೇವರ ಆರ್ಶೀವಾದ ಕಂಡಿತ ಸಿಗುತ್ತದೆ ಎಂದು ಎಸ್.ಎಸ್.ವೈ. ಗುರುಗಳಾದ ಡಾ. ಪೋಸ್ಟ್ ನಾರಾಯಣಸ್ವಾಮಿ ತಿಳಿಸಿದರು.
ಕೋಲಾರ ತಾಲ್ಲೂಕು ಚಿಟ್ನಹಳ್ಳಿ ಸದ್ಗುರು ಕ್ಷೇತ್ರದಲ್ಲಿ ಸತ್ಸಂಗ ಮತ್ತು ಬಜನೆ ಕಾರ್ಯಕ್ರಮದಲ್ಲಿ ಸತ್ಸಂಗ ಮತ್ತು ಅಖಂಡ ಭಜನೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.ಈ ದೈವ ಕಾರ್ಯಗಳಿಂದ ನಮಗೆ ಮನಸ್ಸು ಧ್ಯಾನ ಸ್ಥಿತಿಗೆ ಹೋಗಿ ಆತ್ಮ ಸಾಕ್ಷಾತ್ಕಾರವಾಗಲು ದಾರಿ ಸಿಗುತ್ತದೆ.
ಈ ಸದ್ಗುರು ಕ್ಷೇತ್ರದ ಸಂಸ್ಥಾಪಕರಾದ ಎನ್.ವೆಂಕಟೇಶ ರವರು ಸದ್ಗುರು ಕ್ಷೇತ್ರವನ್ನು ಸ್ಥಾಪಿಸಿ ಎಲ್ಲರಿಗೂ ದೈವ ಶಕ್ತಿ ಸಿಗಲೆಂದು ಪ್ರತಿ ತಿಂಗಳು ಆಶ್ರಮದಲ್ಲಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ. ಅವರಿಗೆ ದೇವರು ಇನ್ನೂ ಹೆಚ್ಚಿನ ಶಕ್ತಿ ಆಯುರ್ ಆರೋಗ್ಯ ವನ್ನು ಕೊಡಲಿ ಎಂದು ಹಾರೈಸಿ ಅಭಿನಂದಿಸಿದರು.
ಸದ್ಗುರು ಕ್ಷೇತ್ರದ ಸಂಸ್ಥಾಪಕ ಎನ್. ವೆಂಕಟೇಶ್ ಮಾತನಾಡಿ ಈ ಸದ್ಗುರು ಕ್ಷೇತ್ರ ಎಲ್ಲರಿಗಾಗಿ ನಿರ್ಮಾಣ ಮಾಡಿದ್ದು, ಸುತ್ತಮುತ್ತಲಿನ ಎಲ್ಲಾ ನಾಗರೀಕರು ಈ ಆಶ್ರಮಕ್ಕೆ ತನು, ಮನ ಧನ ಸಹಾಯವನ್ನು ನೀಡಿ ಅಭಿವೃದ್ಧಿಯನ್ನು ಹೊಂದಲು ಎಲ್ಲಾ ರೀತಿಯ ಸಹಕಾರ ನೀಡಬೇಕು. ಇಲ್ಲಿ ನಡೆಯುವ ಎಲ್ಲಾ ದೈವ ಕಾರ್ಯಗಳಲ್ಲಿ ಭಾಗವಹಿಸಿ ಭಗವಂಗನ ಪ್ರೇರಣೆ ಹೊಂದಲು ತಿಳಿಸಿದರು.
ಕಾರ್ಯ ಕ್ರಮದಲ್ಲಿ ಕೊಂಡೇನಹಳ್ಳಿ ಬಗವಾನ್ ಸಿಂಗ್ ಭಜನಾ ತಂಡ ಮತ್ತು ಎಸ್.ಅಗ್ರಹಾರ ಮುನಿವೆಂಕಟಪ್ಪ ಭಜನಾ ತಂಡ ಮತ್ತು ಕೋಲಾರದ ಸರೋಜಮ್ಮ, ನಿವೃತ್ತ ಉಪದ್ಯಾಯಿನಿ ಚೌಡಮ್ಮ, ಶಾಂತಮ್ಮ, ಜಯಲಕ್ಷ್ಮಮ್ಮ, ಮುನಿಲಕ್ಷ್ಮಮ್ಮ, ಸರಸ್ಪತಮ್ಮ, ಜಯಮ್ಮ, ಚಿಟ್ನಹಳ್ಳಿ ಅನ್ನದಾತ ನಾರಾಯಣಸ್ವಾಮಿ, ಅಂಕತಟ್ಟಿ ವರದಾರೆಡ್ಡಿ ಇತರರು ಭಾಗವಹಿಸಿದ್ದರು. ಹಾರ್ಮೋನಿಯಂ ಸಹಕಾರ ಬೈರಂಡಹಳ್ಳಿ ನಾರಾಯಣಸ್ವಾಮಿ, ತಬಲ ಸಹಕಾರ ಟೇಕಲ್ ಆಂಜನಪ್ಪಸ್ವಾಮಿ, ಘಟ ಸಹಕಾರ ಬೈರಂಡಹಳ್ಳಿ ನಾರಾಯಣಸ್ವಾಮಿ ನೀಡಿದರು.