ಬೆಂಗಳೂರು: ರಾಜ್ಯದ 20 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿರುವ ಭಾರತೀಯ ಜನತಾ ಪಕ್ಷ ಉಳಿದಂತೆ ಐದು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲು ತಡಮಾಡುತ್ತಿರುವುದು ಏಕೆ ಎಂಬ ಲೆಕ್ಕಾಚಾರ ರಾಜಕೀಯ ವಲಯದಲ್ಲಿ ನಡೆದಿದೆ.
ರಾಜ್ಯದ 28 ಕ್ಷೇತ್ರದ ಪೈಕಿ 25 ರಲ್ಲಿ ಬಿಜೆಪಿ ಸ್ಫರ್ಧಿಸಲಿದ್ದು, 3 ಕ್ಷೇತ್ರಗಳಲ್ಲಿ ಜೆಡಿಎಸ್ ಆಖಾಡಕ್ಕೆ ಎಂಟ್ರಿ ಕೊಡಲಿದೆ. ಆ 25
ಕ್ಷೇತ್ರಗಳಲ್ಲಿ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿರುವ ಬಿಜೆಪಿ, 5 ಕ್ಷೇತ್ರಗಳನ್ನು ಬಾಕಿ ಉಳಿಸಿಕೊಂಡಿದೆ.ಉತ್ತರ ಕನ್ನಡ, ಬೆಳಗಾವಿ, ರಾಯಚೂರು, ಚಿತ್ರದುರ್ಗ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರಗಳ ಟಿಕೆಟ್ ಘೋಷಿಸಿಲ್ಲ.
ಈ 5 ಕ್ಷೇತ್ರಗಳಿಗೆ ಮಾತ್ರ ಏಕೆ ಘೋಷಣೆ ಆಗಿಲ್ಲ ಟಿಕೆಟ್ ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.ಕ್ಷೇತ್ರದಲ್ಲಿ ಇನ್ನು ಕೂಡ ಕೆಲ ಪ್ರಬಲರು ಟಿಕೆಟ್ಗಾಗಿ ಹೈಕಮಾಂಡ್ ನಾಯಕರು ಮೊರೆ ಹೋಗುತ್ತಿರುವುದು, ಸಮುದಾಯದ ಆಧಾರದ ಮೇಲೆ ಒಂದಷ್ಟು, ಲೆಕ್ಕಾಚಾರ ಆಗಬೇಕಿದೆ, ಎದುರಾಳಿ ಪಕ್ಷದಿಂದ ಯಾರ್ಯಾರು ಅಭ್ಯರ್ಥಿಗಳಾಗುತ್ತಾರೆ?,
ಏಕಾಏಕಿ ಎಲ್ಲಾ ಕ್ಷೇತ್ರಗಳಿಗೂ ಅಭ್ಯರ್ಥಿಯನ್ನು ಘೋಷಿಸುವ ಬದಲು, ಕಾದು ನೋಡುವ ತಂತ್ರಕ್ಕೆ ಮೊರೆ ಹೋಗುವ ಪ್ಲಾನ್., ಇದೆಲ್ಲದರ ಮಧ್ಯೆ, ಆಯಾ ಕ್ಷೇತ್ರದ ಸ್ಥಳೀಯ ನಾಯಕರ ಸಹಮತ ಸಿಕ್ಕಿಲ್ಲ. ಹೀಗೆ ಸಾಲು ಸಾಲು ಕಾರಣಗಳನ್ನು ಮುಂದಿಟ್ಟುಕೊಂಡು 5 ಕ್ಷೇತ್ರಗಳ ಟಿಕೆಟ್ ಬಾಕಿ ಉಳಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ.