ಕ್ರೀಡಾಪಟುಗಳು ರಾಷ್ಟçಧ್ವಜವನ್ನು ಪ್ರದರ್ಶಿಸುವುದಕ್ಕೂ ನೀತಿ ನಿಯಮಗಳಿವೆ. ಧ್ವಜ ಸಂಹಿತೆಯ ಪ್ರಕಾರ ರಾಷ್ಟಿçÃಯ ಧ್ವಜವನ್ನು ಸೊಂಟದ ಕೆಳಗಿನ ಉಡುಪಿನಲ್ಲಿ ಧರಿಸುವಂತೆ ಇಲ್ಲ. ಆದರೆ ಏಷ್ಯನ್ ಅಕ್ವಾಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾರತದ ಪುರುಷರ ವಾಟರ್ಪೋಲೊ ತಂಡವು ತಮ್ಮ ಈಜುಡುಗೆಯಾಗಿರುವ ಟ್ರಂಕ್(ಚಡ್ಡಿ)ಗಳ ಮೇಲೆ ರಾಷ್ಟಿçÃಯ ಧ್ವಜವನ್ನು ಧರಿಸಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಇದು ತ್ರಿವರ್ಣ ಧ್ವಜಕ್ಕೆ ಅಗೌರವ ತೋರಿದ ಆರೋಪಕ್ಕೆ ಗುರಿಯಾಗಿದ್ದು ಕ್ರೀಡಾ ಸಚಿವಾಲಯ ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (Iಔಂ) ಈ ಬಗ್ಗೆ ಸ್ವಿಮ್ಮಿಂಗ್ ಫೆಡರೇಶನ್
ಆಫ್ ಇಂಡಿಯಾ (SಈI)ಯಿಂದ ವರದಿ ನೀಡುವಂತೆ ಸೂಚಿಸಿದೆ.
ಈ ಹಿಂದೆ, ಧ್ವಜವನ್ನು ಟ್ರಂಕ್ಗಳ ಬದಲಿಗೆ ಸ್ಕಲ್ ಕ್ಯಾಪ್ಗಳ ಮೇಲೆ ಪ್ರದರ್ಶಿಸಬೇಕಿತ್ತು. ಆದರೆ ಈಗ ಈ ಘಟನೆ ಹೇಗೆ ನಡೆಯಿತು ಎಂಬುದೇ ಅಚ್ಚರಿಗೆ ಕಾರಣವಾಗಿದೆ. ಈ ಬಗ್ಗೆ ಸ್ವಿಮ್ಮಿಂಗ್ ಫೆಡರೇಶನ್ ಆಫ್ ಇಂಡಿಯಾ ಸ್ಪಷ್ಟನೆ ನೀಡಿದೆ. ಭವಿಷ್ಯದಲ್ಲಿ ರಾಷ್ಟçಧ್ವಜವನ್ನು ಸ್ಕಲ್ ಕ್ಯಾಪ್(ಶಿರಸ್ಟಾçಣ) ಗಳ ಮೇಲೆ ಮಾತ್ರ ಪ್ರದರ್ಶಿಸುವುದಾಗಿ ಭರವಸೆ ನೀಡಿದೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಎಸ್ಎಫ್ಐ ಅಧಿಕಾರಿಯೊಬ್ಬರು “ಮುಂದಿನ ಪAದ್ಯಗಳಲ್ಲಿ ಹೀಗೆ ಮಾಡಲಾಗುವುದು.
ಇತರ ದೇಶಗಳ ತಂಡಗಳು ತಮ್ಮ ಸ್ಪರ್ಧಾತ್ಮಕ ಉಡುಪುಗಳ ಮೇಲೆ ತಮ್ಮ ರಾಷ್ಟಿçÃಯ ಧ್ವಜಗಳನ್ನು ಧರಿಸುತ್ತಿವೆ, ಆದರೆ ನಾವು ಭಾರತೀಯರ ಸೂಕ್ಷ÷್ಮತೆಯನ್ನು ಅರ್ಥಮಾಡಿಕೊಂಡಿದ್ದೇವೆ,” ಎಂದು ಮಾಹಿತಿ ನೀಡಿದ್ದಾರೆ. ಇತ್ತೀಚೆಗಷ್ಟೇ ಭಾರತ ಸರ್ಕಾರ ತನ್ನ ಹೊಸ ಕ್ರೀಡಾನೀತಿಯನ್ನು ಜಾರಿಗೆ
ತಂದಿದೆ.
ಅAತಾರಾಷ್ಟಿçÃಯ ಒಲಿಂಪಿಕ್ ಸಮಿತಿಯ (Iಔಅ) ಧ್ಯೇಯವಾಕ್ಯದ ಪ್ರಕಾರ, ರಾಷ್ಟಿçÃಯ ಧ್ವಜಗಳನ್ನು ಪ್ರದರ್ಶಿಸುವುದು ಕಡ್ಡಾಯವಲ್ಲ. ಇದು ಕ್ರೀಡಾಪಟುಗಳು ಮತ್ತು ಅವರ ರಾಷ್ಟçಗಳ ಆಯ್ಕೆಗೆ ಒಳಪಟ್ಟಿರುತ್ತದೆ. ಈ ಘಟನೆಯು ಕ್ರೀಡಾ ನಿಯಮಗಳು ಮತ್ತು ರಾಷ್ಟಿçÃಯ ಸಂಪ್ರದಾಯಗಳ ನಡುವಿನ ಸೂಕ್ಷ÷್ಮ ಸಮತೋಲನವನ್ನು ಎತ್ತಿ ತೋರಿಸುತ್ತದೆ. SಈI ಪ್ರಕಾರ, ಇದು ವಿಶ್ವ ಅಕ್ವಾಟಿಕ್ಸ್ (ಹಿಂದೆ ಈIಓA) ನಿಯಮಗಳಿಗೆ ಅನುಗುಣವಾಗಿದೆ. ಈ
ನಿಯಮಗಳು ಸ್ಪರ್ಧಾತ್ಮಕ ಉಡುಪುಗಳ ಮೇಲೆ ದೇಶದ ಧ್ವಜವನ್ನು ಹೊಂದಲು ಅವಕಾಶ ನೀಡುತ್ತವೆ.
ವಿಶ್ವ ಅಕ್ವಾಟಿಕ್ಸ್ನ ಸಮವಸ್ತç ಮತ್ತು ಧ್ವಜಗಳ ಸಾಮಾನ್ಯ ನಿಯಮಗಳು ಹೀಗೆ ಹೇಳುತ್ತವೆ: “ಚಾಂಪಿಯನ್ಶಿಪ್ಗಳಲ್ಲಿ ಸ್ವಿಮ್ ಕ್ಯಾಪ್ಗಳ ಮೇಲೆ ೩೨ ಚದರ ಸೆಂಟಿ ಮೀಟರ್ ಗಾತ್ರದ ಮಿತಿಯೊಂದಿಗೆ ಧ್ವಜ ಮತ್ತು ದೇಶದ ಕೋಡ್ ಅನ್ನು ಪ್ರದರ್ಶಿಸಲ ಅನುಮತಿ ಇದೆ” ಅವೇನೇ ನಿಯಮಗಳಿದ್ದರೂ ಭಾರತ ದೇಶ
ಮಾತ್ರ ಧ್ವಜ ಸಂಹಿತೆಯು ಹೆಚ್ಚು ಕಟ್ಟುನಿಟ್ಟಾಗಿದೆ. ಭಾರತವು ಪ್ರತಿಯೊಂದು ವಿಚಾರವನ್ನೂ ಗಂಭೀರವಾಗಿ ಪರಿಗಣಿಸುತ್ತದೆ. ೨೦೧೭ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ವೇಳೆ ಬಾಂಗ್ಲಾದೇಶದ ಅಭಿಮಾನಿಗಳು ಭಾರತದ ರಾಷ್ಟçಧ್ವಜಕ್ಕೆ ಅವಮಾನ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು.