ಕುಣಿಗಲ್: ಕೌಟುಂಬಿಕ ಕಲಹ ಹಿನ್ನಲೆ ಗಂಡನೇ ತನ್ನ ಹೆಂಡತಿಯ ತಲೆಯನ್ನು ತುಂಡರಿಸಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಹುಲಿಯೂರುದುರ್ಗದಲ್ಲಿ ಇಂದು ಮುಂಜಾನೆ ನಡೆದಿದೆ,ಹುಲಿಯೂರುದುರ್ಗ ಟೌನ್ ವಾಸಿ ಪುಪ್ಪಲತಾ (35) ಹತ್ಯೆಗೆ ಒಳಗಾದ ಗೃಹಿಣಿ,.
ಘಟನೆ ವಿವರ : ಕಳೆದ ಹಲವು ದಿನಗಳಿಂದ ಪುಪ್ಪಲತಾ ಹಾಗೂ ಆತನ ಪತಿ ಶಿವರಾಮ್ ನಡುವೆ ಜಗಳ ನಡೆಯುತ್ತಿತು ಎನ್ನಲಾಗಿದ್ದು, ಕಳೆದ ರಾತ್ರಿ ಜಗಳ ವಿಕೋಪಕ್ಕೆ ತಿರುಗಿ, ಪುಪ್ಪಲತಾ ಮಲಗಿದ್ದನ್ನು ಕಾಯುತ್ತಿದ್ದ ಶಿವರಾಮ್ ನಸುಕಿನ ಜಾವ ಪುಪ್ಪಲತಾಳನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಬಳಿಕ ತಲೆ ಹಾಗೂ ದೇಹದ ಇತರೆ ಭಾಗವನ್ನು ತುಂಡು ಮಾಡಿ, ಚರ್ಮವನ್ನು ಸುಲಿದು ವಿಕೃತಿ ಮೆರೆದಿದ್ದಾನೆ, ಆರೋಪಿ ಶಿವರಾಮ್ ನನ್ನು ಹುಲಿಯೂರುದುರ್ಗ ಪೊಲೀಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ, ಮೃತಳಿಗೆ ನಾಲ್ಕು ವರ್ಷದ ಗಂಡು ಮಗು ಇದೆ ಎನ್ನಲಾಗಿದೆ.