ಬೆಂಗಳೂರು: ಜಿಗಣಿ ಪೊಲೀಸ್ ಠಾಣೆಯ ವ್ಯಾಪ್ತಿಯ ಜನತಾ ಕಾಲೋನಿಯಲ್ಲಿ ಕುಡಿದು ಬಂದು ಹೆಂಡತಿಯನ್ನು ಗಂಡ ಕೊಲೆ ಮಾಡಿರುವ ಘಟನೆ ನಡೆದಿದೆ. ಹಬೀತಾಜ್(26) ಎಂಬ ಮಹಿಳೆಗೆ ಗಂಡ ಮುಬಾರಕ್(28) ವರ್ಷ ಕುಡಿದ ಮತ್ತಿನಲ್ಲಿ ಚಾಕುವಿನಿಂದ ಇರಿದು ಪರಾರಿಯಾಗಿರುತ್ತಾನೆ.
ಇವರಿಗೆ ಇಬ್ಬರು ಮಕ್ಕಳಿರುತ್ತಾರೆ, ಈತನು ಏನು ಕೆಲಸ ಮಾಡದೆ ಹೆಂಡತಿಗೆ ಕುಡಿದು ಬಂದು ಹಣ ಕೇಳುತ್ತಿದ್ದನು, ಒಂದು ವಾರದ ಹಿಂದೆ ಹೊಸೂರ್ ನಿಂದ ಜನತಾಕಾಲೋನಿಗೆ ಹೆಂಡತಿ ಬಂದಿದ್ದಳು.
ಈತನು ಹೊಸೂರಿಗೆ ಕರೆದುಕೊಂಡು ಹೋಗಲು ಬಂದು ಗಲಾಟೆಯಾಗಿ ಹೆಂಡತಿಯನ್ನು ಕಳುಹಿಸಿದೆ ಇದ್ದ ಕಾರಣ ಚಾಕುವಿನಿಂದ ಇರಿದು ಕೊಲೆ ಮಾಡಿರುತ್ತಾನೆ.