ಗುಂಡ್ಲುಪೇಟೆ: ತಾಲ್ಲೂಕಿನ ಶಿವಪುರ ಗ್ರಾಮದ ಹೂರ ವಲಯದ ಬಯಲಿನಲ್ಲಿ ಸೋಮವಾರ ಮಧ್ಯಾಹ್ನ ಮೇಕೆಗಳ ಮೇಲೆ ದಾಳಿ ಮಾಡಿದ ಹುಲಿಯನ್ನು ಬಿಡಿಸಲು ಯತ್ನಿಸಿದ ಇಬ್ಬರು ಕುರಿಗಾಹಿಗಳ ಮೇಲೆ ವ್ಯಾಘ್ರ ಎರಗಿದೆ ಇಬ್ಬರಿಗೂ ಗಾಯಗಳಾಗಿದ್ದು ಅದೃಷ್ಟವಶಾತ್ ಪ್ರಾಣಾಪಾಯವಾಗಿಲ್ಲ.
ಶಿವಪುರಗ್ರಾಮದ ಜವರ ಶೆಟ್ಟಿ ಮತ್ತು ಶಿವ ಶೆಟ್ಟಿ ದಾಳಿಯಲ್ಲಿ ಗಾಯಗೊಂಡವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಗ್ರಾಮದ ತೆಂಕತಟ್ಟು ಎಂಬ ಭಾಗದಲ್ಲಿ ಕುರಿ ಮೇಕೆಗಳನ್ನು ಮೇಯಿಸುತ್ತಿದ್ದಾಗ ಹುಲಿಯೊಂದು ಮೇಕೆಗಳ ಮೇಲೆ ದಾಳಿ ಮಾಡಿ ಒಂದು ಮರಿಯನ್ನು ಹಿಡಿಯಿತು ಶಿವಶಕ್ತಿ ಮತ್ತು ಜವರ ಶೆಟ್ಟಿ ಅವರು ಹುಲಿಯಿಂದ ಮೇಕೆಮರಿಯನ್ನು ಬಿಡಿಸಲು ಯತ್ನಿಸಿದರು ಈ ಸಂದರ್ಭದಲ್ಲಿ ಇವರ ಮೇಲೆ ದಾಳಿ ಮಾಡಿದೆ.
ಎದೆ ಕೈ ಮಂಡಿ ತೊಡೆ ಹಾಗೂ ಬೆನ್ನಿನ ಭಾಗಗಳಲ್ಲಿ ಗಾಯಗಳಾಗಿವೆ ತಕ್ಷಣವೇ ನೆರೆಹೊರೆಯ ಜನರು ಗದರಿಸದ್ದರಿಂದ ಹುಲಿ ಕಾಡಿನ ಕಡೆಗೆ ಹೋಗಿದೆ ಮತ್ತು ಹುಲಿ ಮೇಕೆ ಮತ್ತು ಜಾನುವಾರಗಳ ಮೇಲೆ ಮಾಡುತ್ತಿದೆ ಎಂದರೆ ಹುಲಿಗೆ ವಯಸ್ಸಾಗಿದ್ದು ಶಕ್ತಿ ಕಳೆದುಕೊಂಡು ಕಾಡಿನಿಂದ ಹೊರಬಂದಿರುವ ಸಾಧ್ಯತೆ ಇದೆ ಆದ್ದರಿಂದ ಹುಲಿಯನ್ನು ಶೀಘ್ರವಾಗಿ ಸೆರೆಹಿಡಿಯಬೇಕು ಎಂದು ಗ್ರಾಮಸ್ಥರು ತಿಳಿಸಿದರು.