ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ವಿಲ್ ಜಾಕ್ಸ್ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ವೇಗದ ಶತಕ ಗಳಿಸಿದ 5ನೇ ಹಾಗೂ ಆರ್ ಸಿಬಿ ಪರ 2ನೇ ಅತೀ ವೇಗದ ಶತಕದ ದಾಖಲೆಗೆ ಪಾತ್ರರಾಗಿದ್ದಾರೆ. ಅಹಮದಾಬಾದ್ ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಕೊಹ್ಲಿ ಮತ್ತು ವಿಲ್ ಜಾಕ್ಸ್ ಮುರಿಯದ 2ನೇ ವಿಕೆಟ್ ಗೆ 166 ರನ್ ಪೇರಿಸಿದರು.
ಜಾಕ್ಸ್ 41 ಎಸೆತಗಳಲ್ಲಿ 5 ಬೌಂಡರಿ ಮತ್ತು 10 ಸಿಕ್ಸರ್ ಸಿಡಿಸಿ ಬರೋಬ್ಬರಿ ಶತಕ ಗಳಿಸಿ ಮಿಂಚು ಹರಿಸಿದರೆ, ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 70 ರನ್ ಬಾರಿಸಿ ಔಟಾಗದೇ ಉಳಿದರು.ಆರಂಭದಲ್ಲಿ ರನ್ ಗಳಿಸಲು ಪರದಾಡುತ್ತಿದ್ದ ವಿಲ್ ಜಾಕ್ಸ್ 31 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ಆದರೆ ನಂತರ ಕೇವಲ 10 ಎಸೆತಗಳಲ್ಲಿ 50 ರನ್ ಗಳಿಸಿ ಶತಕ ಪೂರೈಸಿದರು ಅಂದರೆ ಅವರ ಸಿಡಿಲಬ್ಬರದ ಬ್ಯಾಟಿಂಗ್ ಹೇಗಿತ್ತು ಎಂಬುದನ್ನು ಊಹಿಸಬಹುದು.ಒಂದು ಓವರ್ ನಲ್ಲಿ 29 ಮತ್ತು ಆಡಿದ ಕೊನೆಯ ಓವರ್ ನಲ್ಲಿ 30 ರನ್ ಕೊಳ್ಳೆ ಹೊಡೆದರು. 7ರಿಂದ 16 ಓವರ್ ಗಳಲ್ಲಿ ಕೊಹ್ಲಿ ಮತ್ತು ಜಾಕ್ಸ್ 143 ರನ್ ಚಚ್ಚಿದರು. ಇದರಲ್ಲಿ ಜಾಕ್ಸ್ ಗಳಿಸಿದ್ದೇ 95 ರನ್ ಆಗಿದೆ.