2024 ರ ಲೋಕಸಭಾ ಚುನಾವಣೆ ಹೊಸ್ತಿಲಿನಲ್ಲಿ ಸಾಕಷ್ಟು ತಂತ್ರ ಪ್ರತಿತಂತ್ರಗಳು ರಾಜ್ಯದಲ್ಲಿ ಆರಂಭವಾಗಿದೆ. ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿರುವ ಮಾಜಿ ಸಚಿವ ವಿ. ಸೋಮಣ್ಣರನ್ನು ಜೆಡಿಎಸ್ ಚಿಹ್ನೆಯಡಿಯಲ್ಲಿ ಕಣಕ್ಕಿಳಿಸಿದ್ರೆ ಹೇಗೆ? ಎಂಬ ಲೆಕ್ಕಾಚಾರವನ್ನು ಬಿಜೆಪಿ ಹೈಕಮಾಂಡ್ ನಾಯಕರು ಮಾಡಲಾರಂಭಿಸಿದ್ದಾರೆ ಎಂಬ ಕುತೂಹಲ ಮಾಹಿತಿ ಹೊರಬಿದ್ದಿದೆ.
ಇಂತಹದ್ದೊಂದು ವಿಚಾರ ಬಿಜೆಪಿ ಹೈಕಮಾಂಡ್ ನಾಯಕರು ಯೋಚನೆ ಮಾಡಲು ಪ್ರಬಲ ಕಾರಣವೊಂದಿದ್ದು, ಇಷ್ಟು ದಿನ ಬಿಜೆಪಿಯಲ್ಲಿದ್ದ ಎಸ್.ಪಿ. ಮುದ್ದುಹನುಮೇಗೌಡರು, ಯಾವಾಗ ಕಾಂಗ್ರೆಸ್ಗೆ ಸೇರ್ಪಡೆಯಾದ್ರೋ, ಆಗಿನಿಂದ ತುಮಕೂರು ಕ್ಷೇತ್ರಕ್ಕೆ ಹೊಸದೊಂದು ಸೂತ್ರ ರೆಡಿ ಮಾಡಬೇಕಾದ ಅನಿವಾರ್ಯತೆ ಸೃಷ್ಠಿಯಾಗಿದೆ.
ಹಾಗಾದ್ರೆ, ಏನದು ಹೊಸ ಸೂತ್ರ? ವರ್ಕ್ಔಟ್ ಆಗುತ್ತಾ ಈ ಹೊಸ ಫಾರ್ಮಿಲಾ? ಎಂಬ ಚಿಂತನೆ ಬಿಜೆಪಿ ಹೈಕಮಾಂಡ್ ನಾಯಕರಲ್ಲಿ ಚರ್ಚೆಯಾಗಲಾರಂಭಿಸಿದೆ.ಹೊಸ ರಾಜಕೀಯ ಲೆಕ್ಕಾಚಾರ ಹಾಕಿದ ಬಿಜೆಪಿವಿ.ಸೋಮಣ್ಣ ಪ್ರಬಲ ವೀರಶೈವ- ಲಿಂಗಾಯತ ಸಮುದಾಯಕ್ಕೆ ಸೇರಿದವರು. ತುಮಕೂರು ಸೇರಿದಂತೆ ಹಳೆಯ ಮೈಸೂರು ಭಾಗದಲ್ಲಿ ತಮ್ಮದೇ ಆದ ಹಿಡಿತದೊಂದಿಗೆ ವೋಟ್ ಬ್ಯಾಂಕ್ ಇಟ್ಟುಕೊಂಡವರು.
ಈಗಾಗಲೇ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಹಳೆಯ ಮೈಸೂರು ಭಾಗದ ಚಾಮರಾಜನಗರ ಹಾಗೂ ವರುಣಾ ಎರಡೆರಡು ಕ್ಚೇತ್ರಗಳಿಂದ ಕಣಕ್ಕಿಳಿದು ಪರಾಭವಗೊಂಡಿರುವವರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶತಾಯಗತಾಯ ಗೆಲ್ಲಲೇಬೇಕೆಂಬ ಗುರಿಯೊಂದಿಗೆ ಕಣಕ್ಕಿಳಿಯಲು ಸಜ್ಜಾಗುತ್ತಿರುವವರು. ಈ ನಿಟ್ಟಿನಲ್ಲಿ ತುಮಕೂರು ಕ್ಷೇತ್ರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಬೇಕೆಂದು ಕೆಲಸವನ್ನು ಕೂಡ ಆರಂಭಿಸಿರುವವರು.
ಯಾವಾಗ ವಿ.ಸೋಮಣ್ಣ ತುಮಕೂರು ಕ್ಷೇತ್ರದಲ್ಲಿ ಆ?ಯಕ್ಟೀವ್ ಆದ್ರೋ, ಆಗ ಬಿಜೆಪಿಯಲ್ಲಿದ್ದ ಒಕ್ಕಲಿಗ ಸಮುದಾಯದ ಮಾಜಿ ಸಂಸದ ಎಸ್.ಪಿ. ಮುದ್ದುಹನುಮೇಗೌಡ ಟಿಕೆಟ್ ಸಿಗುತ್ತಾ? ಇಲ್ವಾ? ಎಂಬುದನ್ನು ಖಾತ್ರಿಪಡಿಸಿಕೊಂಡಿದ್ದಾರೆ. ಮುದ್ದುಹನುಮೇಗೌಡರಿಗೆ ಸಿಕ್ಕಿರುವ ಮಾಹಿತಿ ಪ್ರಕಾರವೇ ಬಿಜೆಪಿ ಹೈಕಮಾಂಡ್ ನಾಯಕರ ಸೂಚನೆಯಂತೆ 2023 ರ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜನಗರ ಮತ್ತು ವರುಣಾ ಎರಡೆರಡು ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದ ವಿ. ಸೋಮಣ್ಣ ಹಿನ್ನಡೆಯನ್ನು ಅನುಭವಿಸಿದ್ದಾರೆ.
ಈಗ ಹೈಕಮಾಂಡ್ ನಾಯಕರು ವಿ. ಸೋಮಣ್ಣರಿಗೆ ಸೂಕ್ತ ಅವಕಾಶ ನೀಡಲೇಬೇಕಾಗಿರುವ ಕಾರಣ, ಅವರಿಗೆ ಬಹುತೇಕ ತುಮಕೂರು ಕ್ಷೇತ್ರದ ಬಿ-ಫಾರಂ ಸಿಗಬಹುದೆಂಬ ವಿಚಾರ ಮುದ್ದುಹನುಮೇಗೌಡರ ಕಿವಿಗೆ ಬಿದ್ದಿದೆ. ಹೀಗಾಗಿ, ಒಕ್ಕಲಿಗ ಸಮುದಾಯಕ್ಕೆ ಸೇರಿದ ಮಾಜಿ ಸಂಸದ ಎಸ್.ಪಿ. ಮುದ್ದುಹನುಮೇಗೌಡ ಬಿಜೆಪಿ ತೊರೆದು ಕಾಂಗ್ರೆಸ್ನ ಕೈ ಹಿಡಿದಿದ್ದಾರೆ.
ಇಷ್ಟು ದಿನ ಮುದ್ದುಹನುಮೇಗೌಡ್ರು ಬಿಜೆಪಿಯಲ್ಲಿದ್ರು. ವಿ.ಸೋಮಣ್ಣರ ಬೆನ್ನಿಗೆ ಅವರು ನಿಲ್ಲಬಹುದೆಂಬ ಲೆಕ್ಕಾಚಾರ ಬಿಜೆಪಿ ಹೈಕಮಾಂಡ್ ನಾಯಕರು ಹಾಕಿಕೊಂಡಿದ್ರು. ಯಾವಾಗ ಮುದ್ದುಹನುಮೇಗೌಡ್ರು ಕಾಂಗ್ರೆಸ್ಗೆ ಹೋದ್ರೋ, ಇತ್ತ ಬಿಜೆಪಿ ಹೈಕಮಾಂಡ್ ನಾಯಕರು ಹೊಸದೊಂದು ಸೂತ್ರ ಹೆಣೆಯಲು ಚಿಂತನೆ ನಡೆಸಿದ್ದಾರೆ. ಅದೇ, ವಿ. ಸೋಮಣ್ಣರನ್ನು ಜೆಡಿಎಸ್ನ ಚಿಹ್ನೆಯಡಿಯಲ್ಲಿ ತುಮಕೂರು ಕ್ಷೇತ್ರದಿಂದ ಕಣಕ್ಕಿಳಿಸುವುದು.
ವರ್ಕ್ಔಟ್ ಆಗುತ್ತಾ ಬಿಜೆಪಿ ಹೈಕಮಾಂಡ್ ನಾಯಕರ ಫಾರ್ಮುಲಾ?ಎಸ್.ಪಿ.ಮುದ್ದುಹನುಮೇಗೌಡ್ರು, ಪ್ರಬಲ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಅವರಿಗೆ ಕಾಂಗ್ರೆಸ್ ಮಣೆ ಹಾಕುವುದು ಬಹುತೇಕ ಖಚಿತ. ಈಗಾಗಲೇ ಕಾಂಗ್ರೆಸ್ನ ಜೇಬಿನಲ್ಲಿ ಅಹಿಂದ ವೋಟ್ ಬ್ಯಾಂಕ್ ಇದೆ. ಇತ್ತ ಕ್ಷೇತ್ರದ ಒಕ್ಕಲಿಗ ಸಮುದಾಯದ ಮತಗಳು ಮುದ್ದುಹನುಮೇಗೌಡರ ಪರ ಚಲಾವಣೆಯಾದ್ರೆ, ವಿ. ಸೋಮಣ್ಣರಿಗೆ ಕಷ್ಟವಾಗಬಹುದು ಎಂಬ ಲೆಕ್ಕಾಚಾರ ಹಾಕಿದ್ದು, ಅವರನ್ನು ಜೆಡಿಎಸ್ ಪಕ್ಷದ ಚಿಹ್ನೆಯಡಿಯಲ್ಲಿ ಕಣಕ್ಕಿಳಿಸಿದ್ರೆ, ಒಕ್ಕಲಿಗ ಸಾಂಪ್ರದಾಯಿಕ ಮತಗಳು ಆ ಪಕ್ಷಕ್ಕೆ ಇದೆ.
ಹೀಗಾಗಿ ಸೋಮಣ್ಣ ಅವರು ವೀರಶೈವ-ಲಿಂಗಾಯತ ಸಮುದಾಯದ ಮತಗಳ ಜೊತೆಗೆ ಒಕ್ಕಲಿಗ ಮತಗಳನ್ನು ಸೆಳೆದು ಸಂಸತ್ಗೆ ಆಯ್ಕೆಯಾಗಬಹುದು ಎಂಬ ಲೆಕ್ಕಾಚಾರ ಹಾಕಲು ಹೈಕಮಾಂಡ್ ನಾಯಕರು ಮುಂದಾಗಿದ್ದಾರೆ ಎನ್ನಲಾಗಿದೆ.
ಒನ್ಲೈನ್ ತಂತ್ರ ಹೆಣೆದು ರಾಜಕೀಯ ಮೇಲಾಟಸದ್ಯ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಪುತ್ರ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರ ಜೊತೆಗೆ ವಿ. ಸೋಮಣ್ಣರ ಮುನಿಸು ಮುಂದುವರೆದಿದೆ.
ಇತ್ತ ಯಡಿಯೂರಪ್ಪ, ವಿಜಯೇಂದ್ರ ಕೂಡ ಸೋಮಣ್ಣರ ತಂಟೆಗೆ ಹೋಗುತ್ತಿಲ್ಲ. ಇನ್ನೊಂದು ಕಡೆ ರಾಜ್ಯದಲ್ಲಿ ಜೆಡಿಎಸ್ ಕೂಡ ಹೆಚ್ಚಿನ ಕ್ಷೇತ್ರಗಳನ್ನು ಕೇಳುತ್ತಿದೆ. ಈಗ ಸೋಮಣ್ಣರಙು ಜೆಡಿಎಸ್ನ ಚಿಹ್ನೆಯಿಂದ ಕಣಕ್ಕಿಳಿಸಿದ್ರೆ, ಯಡಿಯೂರಪ್ಪ, ವಿಜಯೇಂದ್ರ ತಣ್ಣಗಾಗುತ್ತಾರೆ. ಅತ್ತ ಜೆಡಿಎಸ್ಗೆ ಇನ್ನೊಂದು ಕ್ಷೇತ್ರ ಕೊಟ್ಟ ಹಾಗೇ ಆಗಲಿದೆ. ಇದರ ಜೊತೆಗೆ ಮುದ್ದುಹನುಮೇಗೌಡ್ರು ಸೆಳೆಯಲು ಯತ್ನಿಸುವ ಒಕ್ಕಲಿಗ ಮತಗಳನ್ನು ಜೆಡಿಎಸ್ ಪಕ್ಷ ತನ್ನತ್ತ ಸೆಳೆದುಕೊಳ್ಳುತ್ತದೆ. ಈ ಮೂಲಕ ಸೋಮಣ್ಣರನ್ನು ವಿಜಯಶಾಲಿಯನ್ನಾಗಿ ಮಾಡಬಹುದು ಎಂಬ ಲೆಕ್ಕಾಚಾರ ಬಿಜೆಪಿಯ ಹೈಕಮಾಂಡ್ ನಾಯಕರದ್ದು.
ಇನ್ನು ಇದು ಕೇವಲ ಚಿಂತನೆಯಷ್ಟೇ ಆಗಿದ್ದು, ಇದಕ್ಕೆ ಸೋಮಣ್ಣ, ಹೆಚ್ಡಿಡಿ, ಹೆಚ್ಡಿಕೆ, ರಾಜ್ಯ ಬಿಜೆಪಿ ನಾಯಕರು, ಸ್ಥಳೀಯ ಬಿಜೆಪಿ ನಾಯಕರು ಒಪ್ಪುತ್ತಾರಾ? ಅಥವಾ ಮುದ್ದುಹನುಮೇಗೌಡರನ್ನು ಹೆಣೆಯಲು ಬಿಜೆಪಿ ಹೈಕಮಾಂಡ್ ನಾಯಕರೇ ಬೇರೆ ಯಾವುದಾದರೂ ಸೂತ್ರಕ್ಕೆ ಮೊರೆ ಹೋಗುತ್ತಾರಾ? ಕಾದು ನೋಡಬೇಕಿದೆ.