ಕಿಂಗ್ಸ್ಟನ್ (ಜಮೈಕಾ): ಪ್ರವಾಸಿ ದಕ್ಷಿಣ ಆಫ್ರಿಕಾ ಎದುರಿನ ದ್ವಿತೀಯ ಟಿ20 ಪಂದ್ಯವನ್ನು 16 ರನ್ನುಗಳಿಂದ ಗೆದ್ದ ವೆಸ್ಟ್ ಇಂಡೀಸ್ ಸರಣಿಯನ್ನು ವಶಪಡಿಸಿಕೊಂಡಿದೆ. ವಿಶ್ವಕಪ್ಗೆ ಹೊಸ ಹುರುಪಿನಿಂದ ಸಜ್ಜುಗೊಂಡಿದೆ.
ಸಬೀನಾ ಪಾರ್ಕ್ನಲ್ಲಿ ನಡೆದ ಮುಖಾ ಮುಖೀಯಲ್ಲಿ ವೆಸ್ಟ್ ಇಂಡೀಸ್ 7 ವಿಕೆಟಿಗೆ 207 ರನ್ ರಾಶಿ ಹಾಕಿದರೆ, ದಕ್ಷಿಣ ಆಫ್ರಿಕಾ 7 ವಿಕೆಟಿಗೆ 191ರ ತನಕ ಬಂದು ಶರಣಾಯಿತು. ಮೊದಲ ಪಂದ್ಯವನ್ನು ಕೆರಿಬಿಯನ್ ಪಡೆ 28 ರನ್ನುಗಳಿಂದ ಗೆದ್ದಿತ್ತು.
ಸಂಕ್ಷಿಪ್ತ ಸ್ಕೋರ್: ವೆಸ್ಟ್ ಇಂಡೀಸ್-7 ವಿಕೆಟಿಗೆ 207 (ಚೇಸ್ ಔಟಾಗದೆ 67, ಕಿಂಗ್ 36, ಮೇಯರ್ 32, ಫ್ಲೆಚರ್ 29, ಪೀಟರ್ 32ಕ್ಕೆ 2, ಎನ್ಗಿಡಿ 41ಕ್ಕೆ 2). ದಕ್ಷಿಣ ಆಫ್ರಿಕಾ-7 ವಿಕೆಟಿಗೆ 191 (ಡಿ ಕಾಕ್ 41, ಹೆಂಡ್ರಿಕ್ಸ್ 34, ಡುಸೆನ್ 34, ಮೋಟಿ 22ಕ್ಕೆ 3).