ಮಾಗಡಿ: ಇಡೀ ಮನುಕುಲದ ಜೊತೆಗೆ ಸಕಲ ಜೀವಿಗೆ ದೇವರ ಕೃಪಾಶೀರ್ವಾದವಿಲ್ಲದಿದ್ದರೆ ಈ ಜಗತ್ತಿನಲ್ಲಿ ಒಂದು ಹುಲ್ಲುಕಡ್ಡಿಯೂ ಅಲುಗಾಡಲು ಸಾಧ್ಯವಾಗುವುದಿಲ್ಲ ಎಂದು ಶಾಸಕರಾದ ಹೆಚ್.ಸಿ.ಬಾಲಕೃಷ್ಣ ಹೇಳಿದರು.
ತಾಲ್ಲೂಕಿನ ತಿಪ್ಪಸಂದ್ರ ಹೋಬಳಿಯ ಹೊನ್ನಾಪುರ ಗ್ರಾಮದಲ್ಲಿ ಶ್ರೀ ಹೊನ್ನಪುರದಮ್ಮ ಮೂಲ ವಿಗ್ರಹ ಪ್ರತಿಷ್ಠಾಪನೆ ಮತ್ತು ಶ್ರೀ ಬಸವಣ್ಣ ದೇವರ ಉತ್ಸವ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ನಾವು ನಮ್ಮ ಕೆಲಸ ಕಾರ್ಯಗಳನ್ನು ದಿನನಿತ್ಯ ಮಾಡುತ್ತೇವೆ.ಇದು ಯಶಸ್ವಿಯಾಗಿ ಫಲ ನೀಡಬೇಕಾದರೆ ದೇವರ ಆಶೀರ್ವಾದ ಅತಿ ಮುಖ್ಯವಾಗಿರುತ್ತದೆ.
ಆದಕಾರಣವಾಗಿ ದೇವರ ಮೇಲೆ ಭಾರ ಹಾಕಿ ಯಾವುದೇ ಕಾರ್ಯಗಳನ್ನು ಪ್ರಾರಂಭ ಮಾಡಬೇಕು.ದೇವರ ಆಶೀರ್ವಾದದಿಂದ ತಾಲ್ಲೂಕಿನಲ್ಲಿ ಉತ್ತಮ ಮಳೆ ಬೆಳೆಯಾಗಿ ರೈತಾಪಿ ವರ್ಗ ಸುಭಿಕ್ಷವಾಗಿರಲಿ ಎಂದು ಪ್ರಾರ್ಥಿಸಿರುವುದಾಗಿ ಬಾಲಕೃಷ್ಣ ತಿಳಿಸಿದರು.
ಬಮೂಲ್ ನಿರ್ದೇಶಕರಾದ ನರಸಿಂಹಮೂರ್ತಿ,ಕೆ.ಇ.ಬಿ.ರಾಜಣ್ಣ,ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಮಣಿಗನಗಳ್ಳಿ ಸುರೇಶ್,ಟಿಎಪಿಸಿಎಂಎಸ್ ನಿರ್ದೇಶಕರಾದ ಹೊನ್ನಾಪುರ ಶಿವಪ್ರಸಾದ್,ತಿಗಳರಪಾಳ್ಯ ರಮೇಶ್,ಪಾಪಣ್ಣಗೌಡ,ಎಂಜಿನಿಯರ್ ಮೋಹನ್,ವಾಟರ್ ಬೋರ್ಡ್ ರಾಮಣ್ಣ,ತಿಪ್ಪಸಂದ್ರ ವೆಂಕಟೇಶ್,ವಿ.ಎಸ್.ಎಸ್.ಎನ್.ಅದ್ಯಕ್ಷ ಗಿರೀಶ್,ಡೈರಿ ಅದ್ಯಕ್ಷ ಚನ್ನಪ್ಪ, ಪುಟ್ಟರಂಗಯ್ಯ, ಶಿವಕುಮಾರ್, ಮಾದಪ್ಪ,ಚಿಕ್ಕೇಗೌಡ,ವೆಂಕಟೇಶ್ ಸೇರಿದಂತೆ ಮತ್ತಿತರಿದ್ದರು.