ಬೆಂಗಳೂರು : ಗಂಡ, ಅತ್ತೆ ಮಾವ ರವರ ವರದಕ್ಷಿಣೆ ಕಿರುಕುಳ ತಾಳಲಾರದೆ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣ ವ್ಯಾಪ್ತಿಯ ದೊಡ್ಡರಾಯಪ್ಪನ ಹಳ್ಳಿಯಲ್ಲಿ ಜರುಗಿದೆ.
ಅರ್ಚನಾ(೨೫) ಇತ್ತೀಚೆಗಷ್ಟೇ ಸೋಮಶೇಖರ್ರವರನ್ನು ವಿವಾಹವಾಗಿದ್ದರು, ಅರ್ಚನಾ ಕಡೆಯವರು ಅದ್ದೂರಿಯಾಗಿ ಮದುವೆಯನ್ನು ಮಾಡಿಕೊಟ್ಟಿದ್ದರು.
ಮದುವೆಯ ಸಮಯದಲ್ಲಿ ವರನಿಗೆ ಶಾಸ್ತೊçÃಕ್ತದ ಪ್ರಕಾರ ಒಡವೆ ವಸ್ತುಗಳನ್ನೆಲ್ಲ ನೀಡಿ ಮದುವೆ ಮಾಡಿದ್ದರು, ಆದರೂ ಮದುವೆಯಾದ ಕೆಲವೇ ದಿನಗಳಲ್ಲಿ ಪತಿ ಸೋಮಶೇಖರ್ ಹಾಗೂ ಅತ್ತೆ, ಮಾವ ವರದಕ್ಷಿಣೆಗೋಸ್ಕರ ಕಿರುಕುಳ ನೀಡುತ್ತಿದ್ದಾರೆ ಎಂದು ಮೃತ ಅರ್ಚನಾ ರವರು ಪೋಷಕರಿಗೆ ತಿಳಿಸಿದರು.
ದೊಡ್ಡಬಳ್ಳಾಪುರ ಉಮೆನ್ ಪೊಲೀಸ್ ಠಾಣೆಗೆ ವರದಕ್ಷಿಣೆ ಕಾಯ್ದೆಯಲ್ಲಿ ದೂರನ್ನು ದಾಖಲು ಮಾಡಿರುತ್ತಾರೆ. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಸೋಮಶೇಖರ್ ನನ್ನ ವಶಕ್ಕೆ ಪಡೆದು ತನಿಕೆ ಕೈಗೊಂಡಿರುತ್ತಾರೆ.



