ತಿ.ನರಸೀಪುರ: ಬಾಬಾ ಸಾಹೇಬ್ ಅಂಬೇಡ್ಕರ್ರವರನ್ನ ಮೊದಲು ಅರಿಯ ಬೇಕಾಗಿರುವುದು ಮಹಿಳೆಯರು ಎಂದು ಮಾನಸ ಗಂಗೋತ್ರಿಯ ಪ್ರೊಫೆಸರ್ ಡಾ.ಕಲಾವತಿ ತಿಳಿಸಿದರು.ಬನ್ನೂರು ಪಟ್ಟಣದಲ್ಲಿ ನೆಡದ 75 ನೇ ವರ್ಷದ ಅಮೃತ ಮಹೋತ್ಸವ ಸಂವಿಧಾನ ರಥ ಯಾತ್ರೆಯ ವೇಫಿಕೆಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದ ಡಾ.
ಕಲಾವತಿ ಮಹಿಳೆಯರು ಕುಟುಂಬ ವಿವಾಹ ಸಂಸ್ಥೆಯಬಂದನಕ್ಕೆ ಒಳಗಾಗಿದ್ದಾರೆ ಅವರು ಯಾವತ್ತು ಸಹ ಹೊರ ಬರಲು ಸಾಧ್ಯವಿಲ್ಲ ಈ ಸಮಾಜ ಅವರ ಮೇಲೆ ಆಚರಣೆ ಸಂಪ್ರದಾಯಗಳನ್ನ ಏರಿದೆ ಸಂವಿಧಾನ ಮೂಲಕ ಮಹಿಳಿಯರು ಬಿಡುಗಡೆ ಯಾದರೆ ಈ ದೇಶ ಆದರ್ಶ ಸಮಾಜವಾಗಲಿದೆ ಎಂದು ಬಯಸಿದ್ದ ಬಾಬಾ ಸಾಹೇಬರನ್ನ ಮಹಿಳೆಯರು ಮೊದಲು ಅರಿಯಬೇಕು ಎಂದರು.
1939 ಮಹಿಳೆಯರಿಗೆ ಸಂಬಳ ಸಮೇತ ಹೆರಿಗೆ ರಜೆಯನ್ನು ಪ್ರಸ್ತಾಪಿಸಿದ ಭಾರತದ ಏಕೈಕ ವ್ಯಕ್ತಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಈ ವಿಷಯದ ಪ್ರಸ್ತಾಪ ಸಂವಿಧಾನ ರಚನೆಗೂ ಮುಂಚಿನ ಪ್ರಯತ್ನವಾಗಿತ್ತು ಆದರೆ ಆ ಮಾತನ್ನು ದಿಕ್ಕರಿಸಿದ ಅಮರಾವತಿಯಾ ರಾಂಬಿಲ್ಲ್ಯಾ ಗೌಲ್ನಲ್ಲಿಕರಪತ್ರ ಸಹೋಮಹಾರಾಜ್ಎಂಬ ವ್ಯಕ್ತಿ ಸುಮಾರು 70 ರಿಂದ 80 ಪ್ರತಿಭಟನೆ ಮಾಡಿ ಮಹಿಳಿಯರಿಗೆ ಸಮಾನತೆಯ ಹಕ್ಕು ಕೂಡುವುದನ್ನ ನಾನು ಸಹಿಸುವುದಿಲ್ಲ ಎಂದು ಅಂಬೇಡ್ಕರ್ ರವರಿಗೆ ಛೀಮಾರಿ ಹಾಕಿದ್ದ ಆದರೂ ಬಾಬಾ ಸಾಹೇಬರ ಕಠಿಣ ನಿಲುವು ಹೋರಾಟ ದಿಂದ ಮಹಿಳೆಯರಿಗೆ ಸಮಾನತೆ ಸಿಕ್ಕಿತು ಹಾಗಾಗಿ ಮಹಿಳೆಯರು ಬಾಬಾ ಸಾಹೇಬರ ಬಗ್ಗೆ ಜಾಗೃತಿ ಹೊಂದಬೇಕು ಎಂದರು.
ಇಂದಿನ ಕಾರ್ಯಕ್ರಮದ ವೇದಿಕೆಯಲ್ಲಿ ಹಿರಿಯರು ವಾಗ್ಮೀಗಳು ಹೋರಾಟಗಾರರು ಬುದ್ದಿ ಜೀವಿಗಳು ಇದ್ದಾರೆ ಇಂತಹ ವೇದಿಕೆಯಲ್ಲಿ ನಾನು ಒಬ್ಬ ಮಹಿಳೆಯಾಗಿ ಅಂಬೇಡ್ಕರ್ ಬಗ್ಗೆ ಮಾತಲಾಡಲಿಕ್ಕೆ ಅವಕಾಶ ಸಿಕ್ಕಿದೆ ಅಂದರೆ ನಾನು ನಿಮ್ಮ ಮುಂದೆ ನಿಂತಿದ್ದೀನಿ ಅಂದರೆ ಅದು ಬಾಬಾ ಸಾಹೇಬರ ದೊಡ್ಡ ಶಕ್ತಿ ಕಾರಣ ಎಂದರು.
ಬನ್ನೂರಿನಲ್ಲಿ ಬೇರೆ ಗ್ರಾಮ ಪಂಚಾಯಿತಿಗಳಿಗಿಂತ ಹೆಚ್ಚು ಜಾಗೃತಿ ಆಗಿರುವ ಮನಸ್ಸುಗಳು ಜಾತ್ಯತೀತ ಸಮಾನ ಮನಸ್ಕರು, ಧರ್ಮಾತೀತ ಮನಸ್ಸುಗಳು ಒಟ್ಟಿಗೆ ಸೇರಿರುವುದು ನೋಡಿದರೆ ಸಮಾನತೆ ಸಾರ ಈಗಾಗಲೇ ನಿಮ್ಮಲ್ಲಿ ಅಡಕವಾಗಿದೆ ಅದನ್ನ ಮುಂದುವರೆಸು ಕೊಂಡುಹೋಗುವ ಭಾಗ ನಿಮ್ಮ ಮುಂದೆಇರೋದು ಇದನ್ನ ತಮ್ಮ ಗಮನ ದಲ್ಲಿಟ್ಟುಕೊಂಡು ನಡಯಬೇಕು ಎಂದರು.
ಪಟ್ಟಣದಲ್ಲಿ ದ್ವಾರದಿಂದ ಮಂಗಳ ವಾದ್ಯ ಹಾಗೂ ಮೂಲಕ ಸಂವಿಧಾನ ಜಾಗೃತಿ ಜಾಥವನ್ನು ಮೇರವಣಿಗೆ ಮಾಡಿಕೊಂಡು ವೇದಿಕಿ ಬಳಿ ಕರೆತರಲಾಯಿತು ಮೇರೆವಣಿಗೆ ಸಮಯದಲ್ಲಿ ಬಾಬಾ ಸಾಹೇಬ್ ಬಿ.ಆರ್.ಅಂಬೇಡ್ಕರ್ ಹಾಗೂ ಸಂವಿಧಾನಕ್ಕೆ ಜೈಕಾರ ಕೂಗಿ ಸಂಭ್ರಮಿಸಿದರು. ತದ ನಂತರ ನೆಡದ ವೇದಿಕೆ ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆಯನ್ನು ಪುರಸಭಾ ಮುಖ್ಯಧಿಕಾರಿ ಹೇಮಂತ್ ರಾಜ್ ಓದುವ ಮೂಲಕ ಭೋದನೆ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್. ಕೃಷ್ಣಪ್ಪ, ಕಾಂಗ್ರೆಸ್ ಹಿರಿಯ ಮುಖಂಡ ಪದ್ಮನಾಭ, ಬನ್ನೂರು ಪುರಸಭಾ ನಿಕಟ ಪೂರ್ವ ಅಧ್ಯಕ್ಷರು, ಹಾಗೂ ಸದಸ್ಯರುಗಳು, ಪುರಸಭೆ ಮಾಜಿ ಅಧ್ಯಕ್ಷ ಮುನ್ನಾವರ್ ಪಾಷ, ಡಾ. ಜ್ಞಾನ ಪ್ರಕಾಶ್, ಜಾತಾ ಉಸ್ತುವಾರಿ ಶಾಂತ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಭೀಮರಾಯ ವಡ್ಡರ್, ಬನ್ನೂರು ಉಪ ತಹಸೀಲ್ದಾರ್ ರೂಪ, ಸಂಪನ್ಮೂಲ ಅಧಿಕಾರಿ ಪುಟ್ಟಸ್ವಾಮಿ, ಪುರಸಭೆ ಸಿಬ್ಬಂದಿಗಳು, ಅಂಬೇಡ್ಕರ್ ಸಂಘದ ಯುವಕರು, ಡಿ. ಎಸ್.ಎಸ್. ಕಾರ್ಯಕರ್ತರು ಹಾಜರಿದ್ದರು.