ಬೆಂಗಳೂರು: ಪ್ರವಾಸಿ ದಕ್ಷಿಣ ಆಫ್ರಿಕಾ ಎದು ರಿನ ಮೊದಲ ಪಂದ್ಯವನ್ನು ಅಧಿ ಕಾರಯು ತವಾಗಿ ಗೆದ್ದಿರುವ ಭಾರತದ ವನಿತೆಯರೀಗ ಸರಣಿ ವಶಪಡಿಸಿಕೊಳ್ಳಲು ಸ್ಕೆಚ್ ಹಾಕಿ ದ್ದಾರೆ. ಬುಧವಾರ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ದ್ವಿತೀಯ ಮುಖಾಮುಖೀ ಏರ್ಪ ಡಲಿದ್ದು, ಇದನ್ನು ಗೆದ್ದರೆ ಹರ್ಮನ್ಪ್ರೀತ್ ಕೌರ್ ಬಳಗ ಇನ್ನಷ್ಟು ಎತ್ತರ ತಲುಪಲಿದೆ.
ಮೊದಲ ಪಂದ್ಯದಲ್ಲಿ ಭಾರತದ ಗೆಲುವಿನ ಅಂತರ ಬರೋಬ್ಬರಿ 143 ರನ್. ಆದರೂ ಬ್ಯಾಟಿಂಗ್ ಸರದಿಯಲ್ಲಿ ಸಮಸ್ಯೆ ಇದೆ. ಇಲ್ಲಿ ಆರಂಭಿಕ ಆಟಗಾರ್ತಿ ಸ್ಮತಿ ಮಂಧನಾ ಏಕಾಂಗಿ ಯಾಗಿ ಹೋರಾಡಿ ತಂಡದ ಸವಾಲಿನ ಮೊತ್ತಕ್ಕೆ ಕಾರಣರಾಗಿದ್ದರು. ಮಂಧನಾ ಗಳಿಕೆ 117 ರನ್. ದಕ್ಷಿಣ ಆಫ್ರಿಕಾ ಮಂಧನಾ ಸ್ಕೋರ್ಗಿಂತ ಕೇವಲ 5 ರನ್ ಹೆಚ್ಚು ಗಳಿಸಿ ಶರಣಾಗಿತ್ತು. ಎರಡೂ ವಿಭಾಗಗಳಲ್ಲಿ ಲಾರಾ ವೋಲ್ವಾರ್ಟ್ ಬಳಗ ವೈಫಲ್ಯ ಅನುಭವಿಸಿದ ಕಾರಣ ಒತ್ತಡ ಹೆಚ್ಚಿದೆ.
ಮಿಂಚಿದ ಮಂಧನಾ:ಸ್ಮತಿ ಮಂಧನಾ 47ನೇ ಓವರ್ ತನಕ ಕ್ರೀಸ್ ಆಕ್ರಮಿಸಿ ಕೊಳ್ಳದೆ ಹೋಗಿದ್ದರೆ ಭಾರತಕ್ಕೆ ದೊಡ್ಡ ಮೊತ್ತ ಸಾಧ್ಯವಿರಲಿಲ್ಲ. ಶಫಾಲಿ ವರ್ಮ, ಡಿ. ಹೇಮಲತಾ, ಹರ್ಮನ್ಪ್ರೀತ್ ಕೌರ್, ಜೆಮಿಮಾ ರೋಡ್ರಿಗಸ್, ರಿಚಾ ಘೋಷ್- ಈ ಐವರು ಸ್ಟಾರ್ ಆಟಗಾರ್ತಿಯರಿಂದ 50 ರನ್ ಕೂಡ ಸಂದಾಯವಾಗಲಿಲ್ಲ. ದ್ವಿತೀಯ ಪಂದ್ಯದಲ್ಲಿ ಇವರೆಲ್ಲ ಕ್ರೀಸ್ ಆಕ್ರಮಿಸಿಕೊಳ್ಳುವುದು ಅಗತ್ಯ.
ಪೂಜಾ ವಸ್ತ್ರಾಕರ್ ಅನುಮಾನ: ಬೆನ್ನುನೋವಿನಿಂದಾಗಿ ಬಾಂಗ್ಲಾದೇಶ ಎದುರಿನ ಟಿ20 ಸರಣಿಯಿಂದ ಹೊರಗುಳಿದಿದ್ದ ಜೆಮಿಮಾ ರೋಡ್ರಿಗಸ್ ಮೊದಲ ಪಂದ್ಯದಲ್ಲಿ ಪರಿಣಾಮ ಬೀರಿಲ್ಲ. ಕೀಪರ್ ರಿಚಾ ಘೋಷ್ 3 ರನ್ನಿಗೆ ಆಟ ಮುಗಿಸಿದ್ದರು. ಕೊನೆಯಲ್ಲಿ ಮಂಧನಾಗೆ ಬೆಂಬಲ ನೀಡಿದ್ದು ಆಲ್ರೌಂಡರ್ಗಳಾದ ದೀಪ್ತಿ ಶರ್ಮ ಮತ್ತು ಪೂಜಾ ವಸ್ತ್ರಾಕರ್ ಎಂಬುದನ್ನು ಮರೆಯುವಂತಿಲ್ಲ. ಸದ್ಯ ಪೂಜಾ ಫಿಟ್ನೆಸ್ ಸಮಸ್ಯೆಯಲ್ಲಿದ್ದಾರೆ. ಬುಧವಾರ ಆಡದೇ ಹೋದರೆ ಅರುಂಧತಿ ರೆಡ್ಡಿ ಅವಕಾಶ ಪಡೆಯಲಿದ್ದಾರೆ.ಸ್ಪಿನ್ ತ್ರಿವಳಿಗಳ ದಾಳಿ: ಭಾರತದ ಬೌಲಿಂಗ್ ಘಾತಕವಾಗಿತ್ತು. ಆಶಾ ಶೋಭನಾ (21ಕ್ಕೆ 4) ಭರ್ಜರಿ ಪದಾರ್ಪಣೆ ಮಾಡಿದ್ದರು.