ಮಹಿಳಾ ಪ್ರೀಮಿಯರ್ ಲೀಗ್ (WPL) ೪ನೇ ಆವೃತ್ತಿಯ ವೇಳಾಪಟ್ಟಿ ಮತ್ತು ಪಂದ್ಯ ನಡೆಯಲಿ ರುವ ನಗರಗಳನ್ನು ಇದೀಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಪ್ರಕಟಿಸಿದೆ. ೨೦೨೬ರ ಜನವರಿ ೯ ರಿಂದ ಫೆಬ್ರವರಿ ೫ರವರೆಗೆ ನವಿ ಮುಂಬೈ ಮತ್ತು ವಡೋದರಾದಲ್ಲಿ ಟೂರ್ನಿ ನಡೆಯಲಿದೆ ಎಂದು WPL ಅಧ್ಯಕ್ಷ ಜಯೇಶ್ ಜಾರ್ಜ್ ಅವರು ಮಾಹಿತಿ ನೀಡಿದ್ದಾರೆ. ಈ ಬಾರಿ ಕೂಡಾ ‘ಕ್ಯಾರವನ್ ಮಾದರಿ’ಯಲ್ಲೇ ಟೂರ್ನಿ ನಡೆಯಲಿದೆ. ಅಂದರೆ ಮೊದಲ ಕೆಲವು ಪಂದ್ಯಗಳು ನವಿ ಮುಂಬೈನಲ್ಲಿಮಆಯೋಜನೆಯಾಗಲಿದ್ದು, ನಂತರ ಟೂರ್ನಿ ವಡೋದರಾಗೆ ಸ್ಥಳಾಂತರಗೊಳ್ಳಲಿದೆ. ಮಹಿಳಾ ವಿಶ್ವಕಪ್ ೨೦೨೫ ಭಾರತದಲ್ಲಿ ನಡೆದಿರುವುದರಿಂದ ಈ ಬಾರಿ WPLಅನ್ನು ‘ಹೋಮ್ ಅಂಡ್ ʼಅವೇ’ ಮಾದರಿಯಲ್ಲಿ ನಡೆಸುವ ಚಿಂತನೆ ಇತ್ತು.
ಆದರೆ ಈ ವಿಸ್ತರಣೆಗೆ ಇನ್ನೂ ಸ್ವಲ್ಪ ಸಮಯ ಬೇಕು ಎಂದು ಬಿಸಿಸಿಐ ನಿರ್ಧರಿಸಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸಿದ್ಧತೆ ನಡೆಸುತ್ತಿದೆ. ನವೀಮುಂಬೈನಲ್ಲೇ ವಿಶ್ವಕಪ್ ಫೈನಲ್ ಇತ್ತೀಚೆಗೆ ನವಿಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಚೊಚ್ಚಲ ವಿಶ್ವಕಪ್ ಗೆದ್ದಿತ್ತು. ಆ ಪಂದ್ಯ ನಡೆದ ಸ್ಥಳದಲ್ಲೇ ೨೦೨೬ರ ಡಬ್ಲ್ಯೂ ಪಿಎಲ್ ಫೈನಲ್ ಕೂಡ ನಡೆಯಲಿದೆ. ಕಳೆದ ವರ್ಷದ ಟೂರ್ನಿ ಬೆಂಗಳೂರು, ಲಖನೌ ಮುಂಬೈ ಮತ್ತು ವಡೋದರಾ ನಗರಗಳಲ್ಲಿ ನಡೆದಿತ್ತು. ಮುಂಬೈನ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ನಡೆದ ಫೈನಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಸೋಲಿಸಿ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿತ್ತು. ಆಗ ನಾಯಕಿ ಹರ್ಮನ್ಪ್ರೀತ್ ಕೌರ್ ಅವರ ತಂಡ ಪ್ರಶಸ್ತಿ ಎತ್ತಿತ್ತು.
ಅದಕ್ಕೂ ಹಿಂದಿನ ವರ್ಷ ಸ್ಮೃತಿ ಮಂದಾನ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ ಆಗಿ ಮೂಡಿ ಬಂದಿತ್ತು. ಮುಂದಿನ ವರ್ಷ ೨ ದೊಡ್ಡ ಟೂರ್ನಿ
೨೦೨೬ರ ಆರಂಭದಲ್ಲಿ ಭಾರತದಲ್ಲಿ ಎರಡು ದೊಡ್ಡ ಕ್ರಿಕೆಟ್ ಟೂರ್ನಿಗಳು ನಡೆಯಲಿವೆ. WPL ನಂತರ, ಪುರುಷರ ಟಿ೨೦ ವಿಶ್ವಕಪ್ ಕೂಡ ಭಾರತದಲ್ಲಿ ನಡೆಯಲಿದೆ. ಈ ಟೂರ್ನಿ
ಚೆನ್ನೈ ಮುಂಬೈ, ಅಹಮದಾಬಾದ್, ದೆಹಲಿ ಮತ್ತು ಕೋಲ್ಕತ್ತಾ ಸೇರಿದಂತೆ ಐದು ನಗರಗಳಲ್ಲಿ ಆಯೋಜನೆಯಾಗಲಿದೆ. ಶ್ರೀಲಂಕಾ ಕೂಡ ಸಹ- ಆತಿಥೇಯ ರಾಷ್ಟ್ರವಾಗಿದ್ದು, ಭಾರತ ಮತ್ತು ಪಾಕಿಸ್ತಾನ ನಡುವಿನ ಪ್ರಮುಖ ಪಂದ್ಯವನ್ನು ಕೊಲಂಬೊದಲ್ಲಿ ನಡೆಸಲಿದೆ. ಒಟ್ಟು ೨೦ ತಂಡಗಳು ಭಾಗವಹಿಸುವ ಈ ವಿಶ್ವಕಪ್ ಫೆಬ್ರವರಿ ೭ ರಿಂದ ಮಾರ್ಚ್ ೮ ರವರೆಗೆ ನಡೆಯಲಿದೆ.



