ಮಹಿಳಾ ಪ್ರೀಮಿಯರ್ ಲೀಗ್ (WPL ೨೦೨೬) ನ ಹರಾಜು ಪ್ರಕ್ರಿಯೆಯೂ ಪೂರ್ವಭಾವಿಯಾಗಿ ಆರ್ ಸಿಬಿ ಸೇರಿದಂತೆ ಫ್ರಾಂಚೈಸಿಗಳು ತಮ್ಮ ರೆಟೆನ್ಶನ್ ಆಟಗಾರರ ಪಟ್ಟಿಯನ್ನು ಘೋಷಿಸಿದೆ. ನವೆಂಬರ್ ೨೭ರಂದು ಹೊಸದಿಲ್ಲಿಯಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು ಘಟಾನುಘಟಿ ಆಟಗಾರ್ತಿಯರು ಕಣದಲ್ಲಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್ ಆಟಗಾರ್ತಿಯಾಗಿರುವ ನಾಯಕಿ ಸ್ಮöÈತಿ ಮಂದಾನ, ಕರ್ನಾಟಕದ ಶ್ರೇಯಾಂಕಾ ಪಾಟೀಲ್, ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್, ಆಸ್ಟೆçÃಲಿಯಾದ ಎಲಿಸ್ ಪರ್ರಿ ಅವರನ್ನು ಉಳಿಸಿಕೊಂಡಿದೆ. ಇದಕ್ಕಾಗಿ ೯.೮೫ ಕೋಟಿ ರೂಪಾಯಿ ವ್ಯಯ ಮಾಡಿದ್ದು ಅದರ ಪರ್ಸ್ ನಲ್ಲಿ ೬.೧೫ ಕೋಟಿ ಉಳಿದು ಕೊಂಡಿದೆ. ಅದರಲ್ಲಿ ೧೪ ಆಟಗಾರ್ತಿಯರನ್ನು ತಂಡಕ್ಕೆ ಆಯ್ಕ ಮಾಡಿಕೊಳ್ಳಬೇಕಿದ್ದು ೧ ಆರ್ ಟಿಎಂ ಅದರ ಬಳಿ ಇದೆ.
ಡಬ್ಲೂ÷್ಯಪಿಎಲ್ ೨೦೨೬ ರಿಟೆನ್ಶನ್ ಪಟ್ಟಿ ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ಮöÈತಿಮಂಧಾನ (ರೂ. ೩.೫ ಕೋಟಿ), ರಿಚಾ ಘೋಷ್ (ರೂ. ೨.೪ ಕೋಟಿ), ಎಲಿಸ್ ಪರ್ರಿ (ರೂ. ೨ ಕೋಟಿ). ಶ್ರೇಯಂಕಾ ಪಾಟೀಲ್ (೬೦ ಲಕ್ಷ ರೂ.) ಮುಂಬೈ ಇಂಡಿಯನ್ಸ್: ನ್ಯಾಟ್ ಸಿವರ್- ಬಂಟ್ (ರೂ. ೩.೫ ಕೋಟಿ), ಹರ್ಮನ್ಪಿçÃತ್ ಕೌರ್ (ರೂ. ೨.೫ ಕೋಟಿ), ಹೇಲಿ ಮ್ಯಾಥ್ಯೂಸ್ (ರೂ. ೧.೭೫ ಕೋಟಿ), ಮತ್ತು ಜಿ ಕಮಲಿನಿ (ರೂ. ೫೦ ಲಕ್ಷ) ದೆಹಲಿ ಕ್ಯಾಪಿಟಲ್ಸ್: ಅನ್ನಾಬೆಲ್ ಸದರ್ಲಾ್ಯಂಡ್ (ರೂ. ೨.೨ ಕೋಟಿ), ಮರಿಜಾನ್ನೆ ಕಪ್ (ರೂ. ೨.೨ ಕೋಟಿ), ಜೆಮಿಮಾ ರೋಡ್ರಿಗಸ್ (ರೂ. ೨.೨ ಕೋಟಿ), ಶಫಾಲಿ ವರ್ಮಾ (ರೂ. ೨.೨ ಕೋಟಿ), ನಿಕಿ ಪ್ರಸಾದ್ (ರೂ. ೫೦ ಲಕ್ಷ) ಗುಜರಾತ್ ಜೈಂಟ್ಸ್: ಆಶ್ ಗಾರ್ಡ್ನರ್ (ರೂ. ೩.೫ ಕೋಟಿ), ಬೆತ್ ಮೂನಿ (ರೂ. ೨.೫ ಕೋಟಿ) ಯುಪಿ ವಾರಿಯರ್ಜ್: ಶ್ವೇತಾ ಸೆಹ್ರಾವತ್ (ರೂ. ೫೦ ಲಕ್ಷ) ರಿಲೀಸ್ ಆಗಿರುವ ಆಟಗಾರ್ತಿಯರು ರಾಯಲ್ ಚಾಲೆಂಜರ್ಸ್ ಬೆಂಗಳೂರು: ಡ್ಯಾನಿ ವ್ಯಾಟ್-ಹಾಡ್ಜ್, ಸಬ್ಬಿನೇನಿ ಮೇಘನಾ, ನುಝತ್ ಪರ್ವೀನ್, ಜಾರ್ಜಿಯಾ ವೇರ್ಹಾ್ಯಮ್, ಕನಿಕಾಅಹುಜಾ, ಸ್ನೇಹ ರಾಣಾ, ರೇಣುಕಾ ಸಿಂಗ್, ಏಕ್ತಾ ಬಿಷ್ತ್, ಪ್ರಮೀಳಾ ರಾವತ್, ವಿಜೆ ಜೋಶಿತಾ,ರಾಘ್ವಿ ಬಿಸ್ಟ್, ಜಾಗರವಿ ಪವಾರ್, ಚಾರ್ಲಿ ಡೀನ್, ಹೀದರ್ ಗ್ರಹಾಂ, ಕಿಮ್ ಗಾರ್ತ್.



