This is the title of the web page
This is the title of the web page

`ಪತ್ರಿಕಾ ರಂಗವನ್ನು ಪ್ರೋತ್ಸಾಹಿಸುವಂತಹ ಕೆಲಸ ಮಾಡಬೇಕಾಗಿದೆ’

ಕೆ.ಆರ್.ನಗರ: ಶಾಸಕಾಂಗ,ಕಾರ್ಯಾಂಗ ಮತ್ತು ನ್ಯಾಯಾಂಗಗಳಿಗಿಂತ ಅತ್ಯಂತ ಶ್ರೇಷ್ಟ ನೊಂದವರಿಗೆ ನ್ಯಾಯ ಕೊಡಿಸುವ ಅಂಗವಾಗಿರುವ ಪತ್ರಿಕಾ ರಂಗವನ್ನು ಪ್ರೋತ್ಸಾಹಿಸುವಂತಹ ಕೆಲಸವನ್ನು ಎಲ್ಲಾ ಅಂಗಗಳು ಮಾಡಬೇಕಾಗಿದೆ ಎಂದು ಉದ್ಯಮಿ ಮತ್ತು ಬಿಜೆಪಿ ಮುಖಂಡ ಬಾಬುಹನುಮಾನ್ ಹೇಳಿದರು.

ಪಟ್ಟಣದ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಅವರು ದಿನದ 24 ಗಂಟೆಗಳು ತಮ್ಮ ಕುಟುಂಬ ಮತ್ತು ಮಕ್ಕಳನ್ನು ಬಿಟ್ಟು ಸಾರ್ವಜನಿಕ ಸೇವೆ ಮಾಡುತ್ತಿರುವ ಅಂಗವೆಂದರೆ ಪತ್ರಿಕಾ ರಂಗವಾಗಿದ್ದು ಇಲ್ಲಿ ಕೆಲಸ ಮಾಡುವ ಎಲ್ಲಾ ಪತ್ರಕರ್ತರು ಸನ್ಮಾನಕ್ಕೆ ಅರ್ಹರಾಗಿದ್ದಾರೆ ಎಂದು ತಿಳಿಸಿದರು.

ನಮ್ಮ ತಂದೆಯವರಾದ ದಿವಂಗತ ಎಸ್.ಎ.ಗೋವಿಂದರಾಜ್ ರವರ ಕಾಲದಿಂದಲೂ ಮಾಧ್ಯಮದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು ಮುಂದೆಯೋ ಸಹ ಕೆ.ಆರ್.ನಗರ ತಾಲ್ಲೂಕಿನ ಎಲ್ಲಾ ಪತ್ರಕರ್ತರ ಜತೆಯಾಗಿ ಸದಾ ಇರುತ್ತೇನೆ ನನಗೆ ಸನ್ಮಾನ ಅಭಿನಂದನೆ ಮಾಡಿಸಿಕೊಳ್ಳುವುದರಿಂದ ಮುಜುಗರವಾಗುತ್ತದೆ ನಾನು ನಿಮ್ಮ ಕುಟುಂಬದ ಸದಸ್ಯನಿದ್ದಂತೆ ಎಂದಿಗೂ ಅನತ್ಯಭಾವಿಸಬೇಡಿ ಎಂದು ಮನವಿ ಮಾಡಿದರು.

ಸಂಘದ ಅಧ್ಯಕ್ಷ ವಡ್ಡರಕೊಪ್ಪಲು ಶಿವರಾಮು ಮಾತನಾಡಿ ಹನುಮಾನ್‍ಬಾಬ್ ರವರು ಕಷ್ಟಕಾಲದಲ್ಲಿಯೋ ಸಂಘದ ಜತೆಯಲ್ಲಿರುವುದು ಬಹಳ ಸಂತೋಷದ ವಿಷಯವಾಗಿದ್ದು ಕೋವಿಡ್ ಸಮಯದಲ್ಲಿ ಆಹಾರಕೀಟ್ ಮತ್ತು ಆರ್ಥಿಕ ಸಹಾಯ ನೀಡುವುದರ ಜತೆಗೆ ಇಂದು ಸಹ ತಾಲ್ಲೂಕಿನ ಎಲ್ಲಾ ಪತ್ರಕರ್ತರಿಗೂ ಉಡಗೊರೆ ನೀಡುವ ಮೂಲಕ ಪತ್ರಕರ್ತರ ಕುಟುಂಬದ ಸದಸ್ಯನಾಗಿ ಇರುತ್ತೇನೆ ಎಂಬುವುದು ನೀಜವಾದ ಅವರ ವ್ಯಕ್ತಿತ್ವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಮಾಧ್ಯಮದವರನ್ನು ವಿರೋಧಿಸುವವರ ರಾಜಕಾರಣಿಗಳೇ ಹೆಚ್ಚಿರುವ ಇಂತಹ ಸಮಯದಲ್ಲಿ ಪತ್ರಕರ್ತರಿಗೆ ಸಹಾಯ ಮಾಡುವುದರ ಜತೆಗೆ ನಾನು ಸಹ ಪತ್ರಕರ್ತರ ಕುಟುಂಬ ಸದಸ್ಯನೆಂದು ಹೇಳುತ್ತಿರುವ ಹನುಮಾನ್ ಬಾಬ್ ಅವರನ್ನು ಸಂಘದ ಪರವಾಗಿ ತಾಲ್ಲೂಕಿನ ಸಮಸ್ತ ಜನತೆಯ ಪರವಾಗಿ ಅಭಿನಂದಿಸುವುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ಹನುಮಾನ್‍ಬಾಬ್ ಮತ್ತು ಇಂದು 74ನೇ ಗಣರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ನಮ್ಮ ಸಂಘದ ಕಾರ್ಯದರ್ಶಿ ಸಿ.ಸಿ.ಮಹದೇವ್, ನಿರ್ದೇಶಿಕಿ ರೋಜಾಮಹೇಶ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಎಸ್.ರವಿಕುಮಾರ್, ಉಪಾಧ್ಯಕ್ಷ ಎಸ್.ಬಿ.ಹರೀಶ್, ಖಜಾಂಚಿ ಭೇರ್ಯಮಹೇಶ್, ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ನಾಗೇಗೌಡ, ಸಂಪಾದಕರಾದ ಕೆ.ಟಿ.ಮಂಜುನಾಥ್, ನಿರ್ದೇಶಕರಾದ ಎ.ಚೈತನ್ಯ, ಪಂಡಿತ್‍ನಾಟಿಕರ್, ಹೊಸೂರುಆನಂದ್, ಜೆಟೆಕ್‍ಶಂಕರ್, ಎಸ್.ಯೋಗಾನಂದ, ಸ್ಪಿನ್‍ಕೃಷ್ಣಮೂರ್ತಿ, ಕೆ.ಆರ್.ಶ್ರೀನಿವಾಸ್ ಸೇರಿದಂತೆ ಇತರರಿದ್ದರು.