ಹನೂರು: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಒಕ್ಕಲಿಗ ಸಮಾಜದ ವತಿಯಿಂದ ಇಬ್ಬರು ಕಾಂಗ್ರೆಸ್ ಪಕ್ಷದ ಸದಸ್ಯರು ಆಯ್ಕೆಯಾಗಿ ಉಪಾಧ್ಯಕ್ಷರಾಗಿ ಆಡಳಿತ ನಡೆಸಿದ್ದು, ಈ ಬಾರಿ ಹನೂರು ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಮತ ಕೊಡಿಸಲು ಹಗಲಿರುಳು ಶ್ರಮಿಸುವುದಾಗಿ ಪಟ್ಟಣ ಪಂಚಾಯತಿ ಸದಸ್ಯ ಗಿರೀಶ್.ಸಿ ತಿಳಿಸಿದರು.
ಹನೂರು ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದಲ್ಲೇ ಇದ್ದುಕೊಂಡು ಮುಖಂಡರು ಎನಿಸಿಕೊಂಡಿರುವ ಕೆಲವರು ನಮ್ಮ ನಾಯಕರಾದ ಆರ್ ನರೇಂದ್ರ ರವರ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ. ಈ ಮಹಾನುಭಾವರುಗಳೆ ನಮ್ಮ ನಾಯಕರ ಸೋಲಿಗೆ ಕಾರಣರಾದವರು ಇವರನ್ನು ಪಕ್ಷದಿಂದ ದೂರವಿಟ್ಟಿರುವುದರಿಂದ ಆರ್ ನರೇಂದ್ರನವರ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ.
ಇವರಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತೇವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಿರೋಧ ಪಕ್ಷದವರಿಂದ ಹಣ ಪಡೆದುಕೊಂಡು ನಮ್ಮ ಪಕ್ಷಕ್ಕೆ ಅನ್ಯಾಯವೆಸಗಿದ್ದಾರೆ .ಇಂತಹ ಮಹಾ ನಾಯಕರಿಗೆ ನಮ್ಮ ಪಕ್ಷದಲ್ಲಿ ಅತಿ ದೊಡ್ಡ ಹುದ್ದೆಗಳನ್ನು ನೀಡಿದ್ದೇವೆ ಆದರೆ ಇವರಿಗೆ ಪಕ್ಷಕ್ಕಿಂತ ಹಣವೇ ಮುಖ್ಯ ಎಂಬಂತಾಗಿದ್ದು ಪಕ್ಷ ದ್ರೋಹದ ಕೆಲಸ ಮಾಡುತ್ತಿದ್ದಾರೆ.
ಇದಲ್ಲದೆ ಕಳೆದ ಎರಡು ದಿನಗಳ ಹಿಂದೆ ಇಲಾಖೆ ಅಧಿಕಾರಿಗಳು ಸಮೀಕ್ಷೆ ಮಾಡುವ ಸಂದರ್ಭದಲ್ಲಿ ಹನೂರು ಪಟ್ಟಣದಲ್ಲಿ ಒಕ್ಕಲಿಗ ಸಮಾಜದವರು ಆರ್ ನರೇಂದ್ರ ರವರ ವಿರುದ್ಧವಾಗಿದ್ದಾರೆ ಇವರು ಯಾರೊಬ್ಬರು ಕಾಂಗ್ರೆಸ್ ಗೆ ಮತ ನೀಡುವುದಿಲ್ಲ ಬಿಜೆಪಿಗೆ ಮತ ನೀಡುತ್ತಾರೆ ಎಂದು ತಪ್ಪು ಮಾಹಿತಿ ನೀಡಿದ್ದಾರೆ. ಮೊದಲು ನೀವು ಯಾವ ಪಕ್ಷದಲ್ಲಿ ಇದ್ದೀರಾ ಎಂಬುದನ್ನು ಸಾಬೀತುಪಡಿಸಿ ಆನಂತರ ನಮ್ಮ ನಾಯಕರು ನಮ್ಮ ಸಮಾಜದ ಬಗ್ಗೆ ಮಾತನಾಡಿ ನಮ್ಮ ಸಮಾಜದ ಬಗ್ಗೆ ಮಾತನಾಡಲು ನಿಮಗೆ ನೈತಿಕತೆ ಇಲ್ಲ,
ಮೊದಲು ನಿಮ್ಮ ಸಮಾಜದವರು ನಿಮ್ಮ ಗ್ರಾಮದಲ್ಲಿ ಎಷ್ಟರಮಟ್ಟಿಗೆ ಜೆಡಿಎಸ್ ಬೆಂಬಲಿಸಿದ್ದಾರೆ ಎಂಬುವುದು ಎಲ್ಲರಿಗೂ ತಿಳಿದಿರುವ ವಿಚಾರ, ನೀವು ಕಾಂಗ್ರೆಸ್ ಗೆ ಎಷ್ಟು ಮತ ಹಾಕಿಸಿದ್ದೀರಾ ಎಷ್ಟು ಹಣ ಪಡೆದುಕೊಂಡಿದ್ದೀರಾ ಎಂದು ಎಲ್ಲವೂ ಗೊತ್ತಿದೆ ಕಾಲ ಬಂದಾಗ ಎಲ್ಲವನ್ನು ಬಿಚ್ಚಿಡುತ್ತೇವೆ ಎಂದು ಹೆಸರನ್ನೇಳದೆ ವಾಗ್ದಾಳಿ ನಡೆಸಿದರು.
ಏಪ್ರಿಲ್ ಮೂರರಂದು ಹನೂರು ಪಟ್ಟಣದ ಗ್ರಾಮ ದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವ ಇದ್ದಿದ್ದರಿಂದ ಒಕ್ಕಲಿಗ ಸಮಾಜದವರು ಯಾರೊಬ್ಬರು ನಾಮಪತ್ರ ಸಲ್ಲಿಕೆ ವೇಳೆ ಹಾಜರಾಗಿಲ್ಲ, ಈ ವಿಚಾರವನ್ನು ಮಾಜಿ ಶಾಸಕ ಆರ್ ನರೇಂದ್ರರವರಿಗೂ ತಿಳಿಸಿದ್ದೇವೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಮುಖಂಡರುಗಳು ಕಾಂಗ್ರೆಸ್ ಪಕ್ಷದ ವಿರುದ್ಧ ಇದ್ದಾರೆ ಎಂದು ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿರುವುದು ಸತ್ಯಕ್ಕೆ ದೂರವಾದ ಮಾತು ಎಂದು ತಿಳಿಸಿದ್ದಾರೆ.
ಮಾಜಿ ಶಾಸಕ ಆರ್ ನರೇಂದ್ರ ರವರಿಗೆ ಅಧಿಕಾರ ಇರಲಿ, ಇಲ್ಲದಿರಲಿ ನಾವು ಅವರ ಪರವಾಗಿಯೇ ಇರುತ್ತೇವೆ ಅವರು ಹೇಳಿದಂತೆ ನಾವು ಪಕ್ಷದಲ್ಲಿ ನಿಷ್ಠೆಯಿಂದ ಪ್ರಾಮಾಣಿಕವಾಗಿ ದುಡಿಯುತ್ತಿದ್ದೇವೆ ಇಂದಿಗೂ ಎಂದೆಂದಿಗೂ ನಾವು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುತ್ತೇವೆ ಹೊರತು ಬಿಜೆಪಿ ಪಕ್ಷಕ್ಕೆ ಮತ ಚಲಾಯಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.