ಮನುಷ್ಯನ ಜೀವನದಲ್ಲಿ ಉತ್ತಮ ಬೆಳವಣಿಗೆಗೆ, ಅಭಿವೃದ್ಧಿಗೆ, ಮನರಂಜನೆಗೆ, ಮನಸ್ಸಿನ ಆಹ್ಲಾದಕ್ಕೆ ಕಲೆ ಬಹಳ ಮುಖ್ಯವಾದುದು. ಕಲೆ ಮನುಷ್ಯನಲ್ಲಿ ಸೃಜನ ಶೀಲತೆಯನ್ನು ಹೆಚ್ಚಿಸುವುದರ ಜೊತೆಗೆ ಬೌದ್ದಿಕ ಬೆಳವಣಿಗೆಯಲ್ಲಿ ಸಹಾಯ ಮಾಡುತ್ತದೆ. ಕಲೆ ಎಂದರೆ ಸಂಗೀತ, ನೃತ್ಯ, ನಾಟಕ, ಸಾಹಿತ್ಯ, ಚಿತ್ರಕಲೆ, ಶಿಲ್ಪಕಲೆ ಮೊದಲಾದವುಗಳು.
ಮೊದಲ ಬಾರಿಗೆ 2012ರಲ್ಲಿ ಐಎಎ ಸಂಸ್ಥೆಯು ವಿಶ್ವ ಕಲಾದಿನವನ್ನು ಆಚರಿಸಿತು. 150 ಕಲಾವಿದರು ಮತ್ತು ಅನೇಕ ಸಂಸ್ಥೆಗಳನ್ನು ಕರೆಸಿ ಅವರಿಗೆ ಸನ್ಮಾನ ಮಾಡುವುದರೊಂದಿಗೆ ಈ ಆಚರಣೆಯನ್ನು ಮಾಡಲಾಯಿತು. ಏಪ್ರಿಲ್ 15ನೇ ತಾರೀಖಿನಂದು ವಿಶ್ವ ಕಲೆಯ ದಿನವನ್ನು ಆಚರಿಸುವ ನಿರ್ಣಯವನ್ನು ವಿಶ್ವಸಂಸ್ಥೆಯ 40ನೇ ಸಾಮಾನ್ಯ ಸಭೆಯಲ್ಲಿ 2019ನೇ ಇಸವಿಯಲ್ಲಿ ನಿರ್ಧರಿಸಲಾಯಿತು.
ಏಪ್ರಿಲ್ 15 ಪ್ರಸಿದ್ಧ ಕಲಾಕಾರ ಲಿಯೋನಾರ್ಡೋ ಡ ವಿನ್ಸಿಯವರ ಜನ್ಮದಿನ ಕಲೆಯ ದಿನದ ಆಚರಣೆಯು ಕೂಡ ನಮ್ಮ ಜೀವನದಲ್ಲಿ ಕಲೆಯ ಮಹತ್ವವನ್ನು ತಿಳಿಸಿ ಜೀವನದಲ್ಲಿ ಯಾವುದೋ ಒಂದು ಕಲೆಯಲ್ಲಿ ತೊಡಗುವ ಸಲುವಾಗಿ ಪ್ರೇರಣೆಯನ್ನು ನೀಡುವುದಾಗಿದೆ.ವಿಶ್ವ ಕಲೆಯ ದಿನದ ಉದ್ದೇಶ ಸಮಾಜ ನಿರ್ಮಾಣದಲ್ಲಿ ಮನುಷ್ಯರ ವ್ಯಕ್ತಿತ್ವ ನಿರ್ಮಾಣದಲ್ಲಿ ಕಲೆಯ ಮಹತ್ವವನ್ನು ಜನರಿಗೆ ತಿಳಿಸುವುದಾಗಿದೆ.
ಪ್ರಪಂಚದ ಎಲ್ಲ ಪ್ರಾಣಿಗಳಲ್ಲೂ ವಿಶೇಷತೆ ಇರುತ್ತದೆ ಆದರೆ ಮನುಷ್ಯನಲ್ಲಿ ಕಲಾತ್ಮಕತೆ ಇರುತ್ತದೆ. ಅಂತಹ ಕಲಾತ್ಮಕತೆಯನ್ನು ಸಮಾಜದ ಸಮುದಾಯದ ಬೆಳವಣಿಗೆ ಉಪಯೋಗಿಸಕೊಳ್ಳುವ ಹಾಗೂ ಹಿರಿಯ ಕಲಾವಿದ ಲಿಯೋನಾರ್ಡೋ ಡಾ ವಿನ್ಸಿಯವರ ಸ್ಮರಣಾರ್ಥ ಆಚರಿಸುವ ಈ ಕಲಾದಿನದ 2024ರ ಕಲಾ ದಿನದ ಥೀಮ್ ” ಭಾವನೆಗಳನ್ನು ವ್ಯಕ್ತ ಪಡಿಸುವ ತೋಟ ; ಸಮುದಾಯದಲ್ಲಿ ಕಲೆಯನ್ನು ಬಿತ್ತುವುದು” ಎಂಬುದಾಗಿದೆಕಲೆ ಮನುಷ್ಯನ ಮನಸ್ಸನ್ನು ಉಲ್ಲಸಿತವಾಗಿ ಇಡಲು, ಉತ್ತಮ ಅಭಿವ್ಯಕ್ತಿಯನ್ನು ಹೊರಹಾಕಲು ಸಹಾಯಕ, ಕಲೆ ಎಂದರೆ ಸಂಗೀತ, ಸಾಹಿತ್ಯ, ನೃತ್ಯ, ನಾಟಕ, ಶಿಲ್ಪಕಲೆ, ಚಿತ್ರಕಲೆ, ಎಲ್ಲವೂ ಬರುತ್ತದೆ. ಹಾಡು ಮನಸ್ಸಿಗೆ ಆನಂದವನ್ನು ಕೊಡುವುದರ ಜೊತೆಗೆ ಆರೋಗ್ಯಕ್ಕೂ ಕಾರಣವಾಗುತ್ತದೆ.
ಒತ್ತಡವನ್ನು ಕಡಿಮೆ ಮಾಡುತ್ತದೆ. ನಾಟಕಗಳು ಮನಸ್ಸಿಗೆ ಮನರಂಜನೆಯನ್ನು ನೀಡುವುದರ ಜೊತೆಗೆ ಸಕಾರಾತ್ಮಕ ಹಾಗೂ ಸುಖಾಂತ್ಯದ ನಾಟಕಗಳು ಜೀವನದ ಕಷ್ಟಗಳನ್ನು ಎದುರಿಸಲು ಪ್ರೇರಣೆ ನೀಡುತ್ತವೆ. ಸುಂದರ ಚಿತ್ರಕಲೆಗಳು ನಮ್ಮ ಮನಸ್ಸಿಗೆ ಹರ್ಷ ನೀಡುವುದರ ಜೊತೆಗೆ ನಮ್ಮ ಕಲ್ಪನೆ ಹಾಗೂ ಕಲೆಗೆ ರೂಪವನ್ನು ನೀಡುತ್ತದೆ. ಉತ್ತಮ ಸಾಹಿತ್ಯವು ಕೂಡ ಮನುಷ್ಯನಲ್ಲಿ ಆನಂದ ಜೊತೆಗೆ ಬದುಕಿನ ಮಾರ್ಗಗಳನ್ನು ಕಲಿಸುವ ಮಾರ್ಗದರ್ಶಿಗಳಾಗುತ್ತವೆ. ಈ ರೀತಿಯ ಎಲ್ಲ ಕಲೆಗಳು ಮನುಷ್ಯನ ಬೆಳೆವಣಿಗೆಗೆ ಅತೀ ಅವಶ್ಯಕ ಹೀಗಾಗಿ ಇಂದಿನ ಕಾಲದಲ್ಲಿ ಒಂದು ಕಲೆಯ ಅವಧಿಯನ್ನು ಶಾಲೆಯಲ್ಲಿ ಕಲಿಸುತ್ತಾರೆ ಮಕ್ಕಳು ಸಣ್ಣ ವಯಸ್ಸಿನಲ್ಲಿ ಕಲಿತು ಮುಂದೆ ಅಭ್ಯಸಿಸಬಹುದು. ಪ್ರಾಚೀನ ಕಾಲದಲ್ಲಿ ಎಲ್ಲ ರೀತಿಯ ಕಲೆಗಳಲ್ಲಿ ಹೆಣ್ಣು ಗಂಡು ಎಂಬ ಬೇಧವಿಲ್ಲದೇ ಅಭ್ಯಾಸ ಮಾಡಿರುತ್ತಿದ್ದರು.
ಇಂದಿನ ಒತ್ತಡದ ಯುಗದಲ್ಲಿ ಮಕ್ಕಳನ್ನು ಕಲಿಯುವ ಮತ್ತು ಉದ್ಯೋಗ ಮಾಡುವ ಯಂತ್ರಗಳನ್ನಾಗಿ ಸಮಾಜ ಮಾಡುತ್ತಿದೆ. ಒತ್ತಡ ಮತ್ತು ಯಾಂತ್ರಿಕತೆಯಿಂದ ಹೊರಬಂದು ಸಾಮಾನ್ಯವಾದ ಸಂತಸದ ಬದುಕನ್ನು ನಡೆಸುವಲ್ಲಿ ಕಲೆಯ ಯಾವುದೇ ಪ್ರಕಾರವು ಸಹಕಾರಿ ಹೀಗಾಗಿ ಈಗ ಶಾಲೆಗಳಲ್ಲಿ ಒತ್ತಾಯ ಪೂರ್ವಕವಾಗಿಯದರೂ ಕಲಿಸುತ್ತಿದ್ದಾರೆ. ಹಳೆಯಕಾಲದಲ್ಲಿ ಮಕ್ಕಳ ಬೆಳವಣಿಗೆಗೆ ಮೊದಲಿಗೆ ಹಾಡು ಹಸೆಗಳನ್ನು ಹೆಣ್ಣುಮಕ್ಕಳಿಗೆ ಕಡ್ಡಾಯವಾಗಿ ಕಲಿಸುತ್ತಿದ್ದರು. ಹೊಲಿಗೆ ಹೆಣಿಕೆಗಳನ್ನು ಕಲಿಸುವ ಪದ್ಧತಿ ಇತ್ತು. ಗಂಡು ಮಕ್ಕಳಿಗೂ ಕಲೆಗಳಲ್ಲಿ ತರಬೇತಿಯನ್ನು ಕೊಡಿಸುತ್ತಿದ್ದರು. ಕೇವಲ ಪುಸ್ತಕದ ಅಭ್ಯಾಸಕ್ಕಿಂತ ಯಾವುದೋ ಒಂದು ಕಲೆಯನ್ನು ಕಲಿತು ಬೆಳೆಸಿಕೊಂಡು ಅದರನ್ನು ದಿನ ನಿತ್ಯದ ಚಟುವಟಿಕೆಗಳಲ್ಲಿ ಜೀವಂತವಾಗಿಟ್ಟುಕೊಂಡು ಸಮಾಜದ ಸಮುದಾಯದ ಅಭಿವವೃದ್ಧಿಯನ್ನು ಮಾಡುವುದು ಇಂದಿನ ಅವಶ್ಯಕತೆಯಾಗಿದೆ.